ಮುಖ್ಯ ವಿಷಯಕ್ಕೆ ಹೋಗಿ
The Karnataka Today
10 Oct
ಸುದ್ದಿ
ಸುದ್ದಿ

ಬಲ್ಲಾಡಿ ಶ್ರೀ ಅರ್ಧನಾರೀಶ್ವರ ಅಬ್ಬಗ ದಾರಗ ದೇವಸ್ಥಾನಕ್ಕೆ ಕುಡುಪು ಕೃಷ್ಣರಾಜ ತಂತ್ರಿಯವರು ಭೇಟಿ.

ಮುದ್ರಾಡಿ : ಮುದ್ರಾಡಿಯ ಬಲ್ಲಾಡಿ ಶ್ರೀ ಅರ್ಧನಾರೀಶ್ವರ ಅಬ್ಬಗ ದಾರಗ ದೇವಸ್ಥಾನ, ಶ್ರೀ ಬ್ರಹ್ಮಬೈದರ್ಕಳ ಗರಡಿಗೆ ಗುರುವಾರ ಕುಡುಪು ಕೃಷ್ಣರಾಜ ತಂತ್ರಿಯವರು ಭೇಟಿ ನೀಡಿ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಚರ್ಚಿಸಿದರು. ಜೀರ್...

ಬಲ್ಲಾಡಿ ಶ್ರೀ ಅರ್ಧನಾರೀಶ್ವರ ಅಬ್ಬಗ ದಾರಗ ದೇವಸ್ಥಾನಕ್ಕೆ ಕುಡುಪು ಕೃಷ್ಣರಾಜ ತಂತ್ರಿಯವರು ಭೇಟಿ.
ಹಂಚಿಕೊಳ್ಳಿ:

ಮುದ್ರಾಡಿ : ಮುದ್ರಾಡಿಯ ಬಲ್ಲಾಡಿ ಶ್ರೀ ಅರ್ಧನಾರೀಶ್ವರ ಅಬ್ಬಗ ದಾರಗ ದೇವಸ್ಥಾನ, ಶ್ರೀ ಬ್ರಹ್ಮಬೈದರ್ಕಳ ಗರಡಿಗೆ ಗುರುವಾರ ಕುಡುಪು ಕೃಷ್ಣರಾಜ ತಂತ್ರಿಯವರು ಭೇಟಿ ನೀಡಿ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಚರ್ಚಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ತಂತ್ರಿಯವರನ್ನು ಗೌರವಿಸಿದರು.

ದೇವಸ್ಥಾನದ ತಂತ್ರಿಗಳಾದ ಸುಪ್ರಸನ್ನ ಭಟ್, ಬಲ್ಲಾಡಿ ಶ್ರೀ ಅರ್ಧನಾರೀಶ್ವರ ಅಬ್ಬಗ ದಾರಗ ದೇವಸ್ಥಾನ, ಶ್ರೀ ಬ್ರಹ್ಮಬೈದರ್ಕಳ ಗರಡಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶುಭದರ ಶೆಟ್ಟಿ,

ಕಾರ್ಯದರ್ಶಿ ಎಸ್. ಟಿ ಶೆಟ್ಟಿಗಾರ್, ಗರಡಿಯ ಪ್ರದಾನ ಅರ್ಚಕರಾದ ಸಂತೋಷ್ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಶ್ರೀಧರ್ ಕುಲಾಲ್, ಹಿರಿಯರಾದ ಗರಡಿಯ ದರ್ಶನ ಪಾತ್ರಿಗಳಾದ ಮುದ್ದು ಪೂಜಾರಿ, ರಾಘವೇಂದ್ರ ಪೂಜಾರಿ, ಬೆಳಗುಂಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ಸೇರಿಗಾರ್, ಸ್ಥಳೀಯ ಪ್ರಮುಖರಾದ ರವಿ ಪೂಜಾರಿ ಪಾದೆಮನೆ, ಆದರ್ಶ ಎಂ.ಪೂಜಾರಿ ಉಪಸ್ಥಿತರಿದ್ದರು.

 

 

 

ಹಂಚಿಕೊಳ್ಳಿ: