ಮುಖ್ಯ ವಿಷಯಕ್ಕೆ ಹೋಗಿ
The Karnataka Today
10 Oct
ಸುದ್ದಿ
ಜೀವನಶೈಲಿ

ಚಳಿಗಾಲದಲ್ಲಿ ಇಡ್ಲಿ-ದೋಸೆ ಹಿಟ್ಟು ಬೇಗ ಹುದುಗಲು 4ರಲ್ಲಿ 1 ಪದಾರ್ಥ ಸೇರಿಸಿಕೊಳ್ಳಿ

ಚಳಿಗಾಲದಲ್ಲಿ ದೋಸೆ ಮತ್ತು ಇಡ್ಲಿ ಹಿಟ್ಟು ಹುದುಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ಹಿಟ್ಟು ರುಬ್ಬಿದ ನಂತರ ಕೆಲವು ನಿರ್ದಿಷ್ಟ ಪದಾರ್ಥಗಳನ್ನು ಸೇರಿಸುವುದರಿಂದ ಹಿಟ್ಟು ಬೇಗನೆ ಹುದುಗುತ್ತದೆ. ಈ ಸರಳ ವಿಧಾನಗ...

ಚಳಿಗಾಲದಲ್ಲಿ ಇಡ್ಲಿ-ದೋಸೆ ಹಿಟ್ಟು ಬೇಗ ಹುದುಗಲು 4ರಲ್ಲಿ 1 ಪದಾರ್ಥ ಸೇರಿಸಿಕೊಳ್ಳಿ
ಹಂಚಿಕೊಳ್ಳಿ:

ಚಳಿಗಾಲದಲ್ಲಿ ದೋಸೆ ಮತ್ತು ಇಡ್ಲಿ ತಯಾರಿಸಬೇಕಾದ್ರೆ ಸವಾಲಿನ ಕೆಲಸ. ವಾತಾವರಣ ತಂಪಾಗಿರುವ ಕಾರಣ ದೋಸೆ ಅಥವಾ ಇಡ್ಲಿ ಹಿಟ್ಟು ಹುದುಗಲು ಹೆಚ್ಚು ಸಮಯ ಬೇಕಾಗುತ್ತದೆ. ಚಳಿಗಾಲ ಅಥವಾ ಮಳೆ ಬೀಳುತ್ತಿರುವ ಸಂದರ್ಭದಲ್ಲಿ ದೋಸೆ/ಇಡ್ಲಿ ಪರ್ಫೆಕ್ಟ್ ಆಗಿ ಹುದುಗಲು ಕೆಲವೊಮ್ಮೆ ಕನಿಷ್ಠ 10 ರಿಂದ 12 ಗಂಟೆಗಳ ಸಮಯ ಬೇಕಾಗುತ್ತದೆ.

ಇಂದು ನಾವು ನಿಮಗೆ ಕಡಿಮೆ ಸಮಯದಲ್ಲಿ ದೋಸೆ/ಇಡ್ಲಿ ಹಿಟ್ಟನ್ನು ಹೇಗೆ ಹುದುಗಿಸಬೇಕು ಎಂದು ಹೇಳುತ್ತಿದ್ದೇವೆ. ಹಿಟ್ಟು ರುಬ್ಬಿಕೊಂಡ ನಂತರ ಕೆಲವೊಂದು ಪದಾರ್ಥಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಚಳಿಗಾಲ ವಾತಾವರಣದಲ್ಲಿ ಈ ಪದಾರ್ಥಗಳನ್ನು ಸೇರಿಸೋದರಿಂದ ಹಿಟ್ಟು ಪರ್ಫೆಕ್ಟ್ ಆಗುತ್ತದೆ. ಚಳಿಗಾಲ ಮಾತ್ರವಲ್ಲ ಕಡಿಮೆ ಸಮಯದಲ್ಲಿ ಇಡ್ಲಿ/ದೋಸೆ ಬೇಕೆನ್ನುವರು ಈ ಸಲಹೆ ಬಳಸಬಹುದು.

ಇಡ್ಲಿ/ದೋಸೆ ಹಿಟ್ಟನ್ನು ಸಿದ್ಧ ಮಾಡಿಕೊಂಡ ನಂತರ ಈ ಕೆಳಗಿನ ನಾಲ್ಕು ವಸ್ತುಗಳಲ್ಲಿ ಯಾವುದಾದ್ರೂ ಒಂದನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಆ ನಾಲ್ಕು ಪದಾರ್ಥಗಳು ಯಾವವು ಎಂದು ನೋಡೋಣ ಬನ್ನಿ.

  1. ಒಣಮೆಣಸಿನಕಾಯಿ
  2. ಒಂದು ಟೀ ಸ್ಪೂನ್‌ ಮೊಸರು ಅಥವಾ ಹುಳಿ ಮಜ್ಜಿಗೆ
  3. ಬೆಳ್ಳಿ ನಾಣ್ಯ
  4. ಚಿಟಿಕೆಯಷ್ಟು ಯೀಸ್ಟ್

ಈ ಮೇಲಿನ ನಾಲ್ಕು ಪದಾರ್ಥಗಳಾದ ಒಣಮೆಣಸಿನಕಾಯಿ, ಒಂದು ಟೀ ಸ್ಪೂನ್‌ ಮೊಸರು ಅಥವಾ ಹುಳಿ ಮಜ್ಜಿಗೆ, ಬೆಳ್ಳಿ ನಾಣ್ಯ ಮತ್ತು ಚಿಟಿಕೆಯಷ್ಟು ಯೀಸ್ಟ್ ಹಿಟ್ಟು ಹುದುಗವಿಕೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ. ಒಂದು ವೇಳೆ ಯೀಸ್ಟ್ ಸೇರಿಸಿದ್ರೆ ಉದ್ದಿನಬೇಳೆಯನ್ನು ಸ್ಕಿಪ್ ಅಥವಾ ಕಡಿಮೆ ಬಳಕೆ ಮಾಡಿ. ಹಾಗೆಯೇ ಒಂದು ಇಡೀ ಮೆಣಸಿನಕಾಯಿ ಹಾಗೆಯೇ ಸೇರಿಸಬೇಕು. ಒಣಮೆಣಸಿನಕಾಯಿಯನ್ನು ತುಂಡರಿಸಿ ಸೇರಿಸಿಕೊಳ್ಳಬಾರದು.

ಬೆಳ್ಳಿ ನಾಣ್ಯ ಸಹ ಹುದುಗುವಿಕೆಗೆ ಸಹಾಯ ಮಾಡುತ್ತದೆ. ಇನ್ನುಳಿದಂತೆ ಮೊಸರು ಅಥವಾ ಮಜ್ಜಿಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿನ ಸೇರಿಸಿಕೊಳ್ಳಬೇಕು. ಅತಿಯಾದ್ರೆ ಹಿಟ್ಟು ಹೆಚ್ಚು ಹುಳಿಯಾಗುವಬ ಸಾಧ್ಯತೆ ಇರುತ್ತದೆ. ಚಳಿಗಾಲದಲ್ಲಿ ಈ ನಾಲ್ಕು ಪದಾರ್ಥಗಳು ಹಿಟ್ಟು ಹುದುಗುವಿಕೆಗೆ ಸಹಾಯ ಮಾಡುತ್ತದೆ.

ಹಂಚಿಕೊಳ್ಳಿ: