ಪ್ರೇಮದ ಊರಲಿ ಸಿನಿಮಾ ಯಶಸ್ಸು: ನಟ ಶಿವರಾಜ್‌ಕುಮಾರ್ ಭೇಟಿಯಾದ ಚಿತ್ರತಂಡ
ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿರುವ 'ಪ್ರೇಮದ ಊರಲಿ' ಸಿನಿಮಾ ಚಿತ್ರಮಂದಿರಗಳಲ್ಲಿ 25ನೇ ದಿನವನ್ನು ಪೂರ್ಣಗೊಳಿಸಿದೆ. ಈಗಾಗಲೇ ಈ ಸಿನಿಮಾ ಗಳಿಕೆಯಲ್ಲಿ ₹50 ಕೋಟಿ ದಾಟಿದೆ.ಹಳ್ಳಿ ಸೊಗಡಿನ ಕಥಾ ಹಂದರದ ಈ ಸಿನಿಮ...

ಪ್ರೇಮದ ಊರಲಿ ಚಲನಚಿತ್ರವು ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ರೂಪಾಯಿಗಳ ಗಳಿಕೆಯನ್ನು ದಾಟಿದೆ. ಈ ಸಿನಿಮಾವನ್ನು ಈಗಾಗಲೇ ಯಶ್, ರಚಿತಾ ರಾಮ್, ರಶ್ಮಿಕಾ ಮಂದಣ್ಣ, ರಮೇಶ್ ಅರವಿಂದ್ ಮತ್ತು ಗಣೇಶ್ ಸೇರಿದಂತೆ ಹಲವು ಕಲಾವಿದರು ಕೊಂಡಾಡಿದ್ದಾರೆ. ಇದೀಗ ಚಿತ್ರದ ನಟ ಶ್ರೀ ರಾಮ್ ನೇತೃತ್ವದ ತಂಡವು ನಟ ಶಿವರಾಜ್‌ಕುಮಾರ್ ಅವರನ್ನು ಭೇಟಿಯಾಗಿದೆ. ಈ ಭೇಟಿಯ ವೇಳೆ ಶಿವರಾಜ್‌ಕುಮಾರ್ ಅವರು ತಂಡದ ಕೆಲಸವನ್ನು ಮೆಚ್ಚಿಕೊಂಡಿದ್ದು, ಈ ಅನುಭವವು ತಮಗೆ ಸಿಕ್ಕ ಗೌರವ ಎಂದು ನಟ ಶ್ರೀ ರಾಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.




