ಮಂಗಳೂರಿನ ಪಿಲಿಪರ್ಬ-2026ರಲ್ಲಿ ಪೊಳಲಿ ಟೈಗರ್ಸ್ ತಂಡಕ್ಕೆ ಪ್ರಥಮ ಸ್ಥಾನ
ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವು ಕೇಂದ್ರ ಮೈದಾನದಲ್ಲಿ ಆಯೋಜಿಸಿದ್ದ ಕುಡ್ಲದ ಪಿಲಿಪರ್ಬ-2026 ಸೀಸನ್-5 ಸ್ಪರ್ಧೆಯಲ್ಲಿ ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ತಂಡವು ₹5 ಲಕ್ಷ ನಗದು ಬಹುಮಾನದೊ...

ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ಕುಡ್ಲದ ಪಿಲಿಪರ್ಬ-2026 ಸೀಸನ್-5 ಸ್ಪರ್ಧೆಯಲ್ಲಿ ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ತಂಡವು ಪ್ರಥಮ ಸ್ಥಾನ ಗಳಿಸಿ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ನಂದಿಗುಡ್ಡ ಫ್ರೆಂಡ್ಸ್ ಹುಲಿ ಬಾಬುಗುಡ್ಡ ತಂಡವು ದ್ವಿತೀಯ ಸ್ಥಾನ ಪಡೆದು 3 ಲಕ್ಷ ರೂಪಾಯಿ ಬಹುಮಾನ ಪಡೆದರೆ, ರಾಜ್ ಫ್ರೆಂಡ್ಸ್ ಪೊಳಲಿ ಮತ್ತು ಕಾರ್ಕಳ ಟೈಗರ್ಸ್ ತಂಡಗಳು ತೃತೀಯ ಸ್ಥಾನವನ್ನು ಹಂಚಿಕೊಂಡವು. ವಿವಿಧ ವಿಭಾಗಗಳಲ್ಲಿ ಪಾಂಡೇಶ್ವರ ಶಾರದಾ ಹುಲಿ, ಹನುಮಾನ್ ಟೈಗರ್ಸ್ ಉಪ್ಪಳ ಹಾಗೂ ಫ್ರೆಂಡ್ಸ್ ಬಪ್ಪಲ್ ದುರ್ಗಾಪರಮೇಶ್ವರಿ ಹುಲಿ ತಂಡಗಳು ಪ್ರಶಸ್ತಿಗಳನ್ನು ಪಡೆದುಕೊಂಡವು. ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.




