ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಆನೇಕಲ್: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಆಟೋ ಚಾಲಕ ಮುನಿಕೃಷ್ಣ ಆತ್ಮಹತ್ಯೆ

ಆನೇಕಲ್: ಸಂಬಂಧದಲ್ಲಿ ಸೋದರನಾಗಿರುವವರ ಜೊತೆ ಕಾಮದಾಟವಾಡುತ್ತಿದ್ದ ಪತ್ನಿಯ ಕೃತ್ಯಕ್ಕೆ ಬೇಸತ್ತು ಪತಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ...

· ಬೆಂಗಳೂರು ಗ್ರಾಮಾಂತರ
ಸೋದರನ ಜೊತೆಯೇ ಅಕ್ರಮ ಸಂಬಂಧ – ಪತ್ನಿಯ ಪಲ್ಲಂಗದಾಟಕ್ಕೆ ಬೇಸತ್ತು ಪತಿ ನೇಣಿಗೆ ಶರಣು
ಹಂಚಿಕೊಳ್ಳಿ:

ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ಮುನಿಕೃಷ್ಣ ಎಂಬ ಆಟೋ ಚಾಲಕ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಪತ್ನಿ ನಯನಾ ಮತ್ತು ಆಕೆಯ ಸಂಬಂಧಿ ಕುಮಾರ ನಡುವಿನ ಅನೈತಿಕ ಸಂಬಂಧವೇ ಈ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ. ಕುಮಾರ ತಾನೇ ಸ್ವತಃ ಇಬ್ಬರ ಅಸಭ್ಯ ವಿಡಿಯೋಗಳನ್ನು ಮುನಿಕೃಷ್ಣನಿಗೆ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದನು. ಇದಲ್ಲದೆ ತನ್ನ ಪತ್ನಿಯ ಗರ್ಭದಲ್ಲಿರುವ ಮಗು ತನ್ನದೇ ಎಂದು ಹೇಳಿ ಆತ ಮುನಿಕೃಷ್ಣನನ್ನು ನಿಂದಿಸುತ್ತಿದ್ದನು. ಈ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಹಂಚಿಕೊಳ್ಳಿ: