ಕೊಪ್ಪಳದಲ್ಲಿ ಶಿಕ್ಷಕಿ ಸಂಗೀತ ಮೇಟಿ ಆತ್ಮಹತ್ಯೆ: ಪ್ರಿಯತಮ ಸೇರಿ ಮೂವರ ವಿರುದ್ಧ ದೂರು
ಕೊಪ್ಪಳ: ದಸರಾ ಹಬ್ಬದ ದಿನವೇ ಖಾಸಗಿ ಶಾಲಾ ಶಿಕ್ಷಕಿಯೊಬ್ಬರು (Teacher) ತುಂಗಭದ್ರಾ ಜಲಾಶಯದ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಖಾಸಗಿ ಶಾಲಾ...

ಕೊಪ್ಪಳದ ಕಾತರಕಿ ಗ್ರಾಮದ ಖಾಸಗಿ ಶಾಲಾ ಶಿಕ್ಷಕಿ ಸಂಗೀತ ಮೇಟಿ ತುಂಗಭದ್ರಾ ಜಲಾಶಯದ ಹಿನ್ನೀರಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಅಕ್ಟೋಬರ್ 19 ರಂದು ಮನೆಯಿಂದ ಹೊರಟಿದ್ದ ಇವರ ಮೃತದೇಹ ವಿಜಯನಗರ ಜಿಲ್ಲೆಯ ಗಡಿ ಭಾಗದಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ತನ್ನ ಪ್ರಿಯತಮ ವಿಕಾಸ್, ಆತನ ಸಹೋದರ ವಸಂತ್ ಮತ್ತು ರೇಣುಕಾ ಮದುವೆಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ಹದಿನಾಲ್ಕು ವರ್ಷಗಳಿಂದ ವಿಕಾಸ್ ಜೊತೆ ಪ್ರೀತಿಯಲ್ಲಿದ್ದ ಸಂಗೀತ, ಈ ಮೂವರು ವ್ಯಕ್ತಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.




