ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಹಾಸನದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿರಿಂದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

* 2028ಕ್ಕೆ ನಮ್ಮದೇ ಸಮ್ಮಿಶ್ರ ಸರ್ಕಾರ, ಆಗ ನನ್ನ ಇನ್ನೊಂದು ಮುಖ ತೋರಿಸುತ್ತೇನೆ ಎಂದ ಕೇಂದ್ರ ಸಚಿವ * ಸದಾ ನನ್ನ ಮೇಲೆ ದಾಳಿ ಮಾಡಲು ಗೃಹಮಂತ್ರಿಗೆ ಸಿಎಂ ಸುಪಾರಿ ಕೊಟ್ಟಿರಬಹುದು ಹಾಸನ: ಅವನು ಯಾವನಿಗೋ ನಟ್ಟು ಬೋಲ್ಟು...

· ಹಾಸನ
ಸ್ಟಿಂಗ್ ಮಾಡಿದವನಿಗೆ ನಟ್ಟು ಬೋಲ್ಟು ಸರಿ ಇದ್ದಂತೆ ಇಲ್ಲ: ಮತ್ತೆ ಗುಡುಗಿದ ಹೆಚ್‌ಡಿಕೆ
ಹಂಚಿಕೊಳ್ಳಿ:

ಹಾಸನದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 2028ರಲ್ಲಿ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ವ್ಯಕ್ತಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದ ಅವರು, ಪೊಲೀಸ್ ಇಲಾಖೆಯು ಆತನ ನಿಯಂತ್ರಣದಲ್ಲಿದೆ ಎಂದು ದೂರಿದರು. ಕೆಪಿಎಸ್ಸಿ ಹಗರಣದಂತಹ ವಿಷಯಗಳಲ್ಲಿ ಮೌನ ವಹಿಸುವ ಗೃಹ ಸಚಿವರು, ತನ್ನ ವಿರುದ್ಧ ಮಾತ್ರ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಹಂಚಿಕೊಳ್ಳಿ: