ಮುಖ್ಯ ವಿಷಯಕ್ಕೆ ಹೋಗಿ
The Karnataka Today
16 Oct
ಸುದ್ದಿ
ಭಾರತ

ತಿರುಮಲ: ಗರುಡ ಸೇವೆ ಹಿನ್ನೆಲೆ ಎರಡು ದಿನ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ

ತಿರುಮಲದಲ್ಲಿ ನವರಾತ್ರಿ ಬ್ರಹ್ಮೋತ್ಸವ ಹಾಗೂ ಗರುಡ ಸೇವೆ ನಿಮಿತ್ತ ಟಿಟಿಡಿ ಎರಡು ದಿನಗಳ ಕಾಲ ಬೈಕ್‌ ಸಂಚಾರಕ್ಕೆ ನಿಷೇಧ ಹೇರಿದೆ. ಭಕ್ತರ ಸುರಕ್ಷತೆ ಮತ್ತು ಜನದಟ್ಟಣೆ ನಿರ್ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅಕ್ಟೋಬರ್...

ತಿರುಮಲ ಭಕ್ತರಿಗೆ ಬಿಗ್ ಅಲರ್ಟ್: ಎರಡು ದಿನಗಳ ಕಾಲ ಬೆಟ್ಟದ ಮೇಲೆ ಬೈಕ್‌ ಸಂಚಾರಕ್ಕೆ ನಿಷೇಧ!
ಹಂಚಿಕೊಳ್ಳಿ:

ತಿರುಮಲದಲ್ಲಿ ನಡೆಯಲಿರುವ ನವರಾತ್ರಿ ಬ್ರಹ್ಮೋತ್ಸವದ ಗರುಡ ವಾಹನ ಸೇವೆಯ ಪ್ರಯುಕ್ತ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ಅಕ್ಟೋಬರ್ 16 ರಂದು ನಡೆಯುವ ಈ ಕಾರ್ಯಕ್ರಮಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ತಿರುಮಲ ಬೆಟ್ಟಕ್ಕೆ ಬೈಕ್ ಸಂಚಾರವನ್ನು ಅಕ್ಟೋಬರ್ 17 ರ ಬೆಳಗ್ಗೆ 6 ಗಂಟೆಯವರೆಗೆ ನಿರ್ಬಂಧಿಸಲಾಗಿದೆ. ಭಕ್ತರು ತಮ್ಮ ದ್ವಿಚಕ್ರ ವಾಹನಗಳನ್ನು ತಿರುಪತಿಯಲ್ಲೇ ನಿಲ್ಲಿಸಿ, ಅಲ್ಲಿಂದ ಎಪಿಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಬೆಟ್ಟಕ್ಕೆ ತೆರಳಬೇಕೆಂದು ಸೂಚಿಸಲಾಗಿದೆ. ಸುರಕ್ಷತೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ಭಕ್ತರು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಹಂಚಿಕೊಳ್ಳಿ: