ಮುಖ್ಯ ವಿಷಯಕ್ಕೆ ಹೋಗಿ
The Karnataka Today
7 Oct
Latest
ಭಾರತ

ನೋಡಿ ನಿಮ್ಮ ಸೋದರಿಗೇ ನಿಮ್ಮ ಮೇಲೆ ನಂಬಿಕೆ ಇಲ್ಲ, ಇನ್ನು ದೇಶದ ಜನ...' : ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಸ್ಟಿಂಗ್ ಎನರ್ಜಿ ಡ್ರಿಂಕ್‌ನ ಬಾಟಲಿ ನೀಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿಯಲ್ಲಿ ನ...

'ನೋಡಿ ನಿಮ್ಮ ಸೋದರಿಗೇ ನಿಮ್ಮ ಮೇಲೆ ನಂಬಿಕೆ ಇಲ್ಲ, ಇನ್ನು ದೇಶದ ಜನ...' : ರಾಹುಲ್ ಗಾಂಧಿಗೆ ಕುಟುಕಿದ ಬಿಜೆಪಿ; Video
ಹಂಚಿಕೊಳ್ಳಿ:

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಸ್ಟಿಂಗ್ ಎನರ್ಜಿ ಡ್ರಿಂಕ್‌ನ ಬಾಟಲಿಯನ್ನು ನೀಡುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದೆಹಲಿಯಲ್ಲಿ ನಿನ್ನೆ ಸಂಜೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ INDIA ಬ್ಲಾಕ್ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ಲೇವಡಿ ಮಾಡಿದೆ.

ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ, “ರಾಹುಲ್ ಗಾಂಧಿ ಅವರ ವರ್ಚಸ್ಸಿಗೆ ಎಷ್ಟು ಹಾನಿಯಾಗಿದೆ ಎಂದರೆ, ಸಾರ್ವಜನಿಕರ ಮಾತು ಹಾಗಿರಲಿ, ಈಗ ಸ್ವತಃ ಕುಟುಂಬದವರಿಗೂ ಅವರ ಮೇಲೆ ನಂಬಿಕೆ ಇಲ್ಲ” ಎಂದು ವ್ಯಂಗ್ಯವಾಡಿದೆ.

ದೆಹಲಿಯ ಕೇಂದ್ರ ಆಕಾಶವಾಣಿ ಭವನ ಸಂಕೀರ್ಣದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರು ಕುಳಿತಿದ್ದಾಗ ಈ ವಿಡಿಯೊ ಸೆರೆಯಾಗಿದೆ. ಚುನಾವಣಾ ಆಯೋಗದ ಕಡೆಗೆ ಮೆರವಣಿಗೆ ಹೊರಡಲು ಸಿದ್ಧರಾಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡೆದ ಬಳಿಕ ನಾಯಕರು ಅಲ್ಲಿಯೇ ಕುಳಿತುಕೊಂಡಿದ್ದರು.

ಪ್ರಿಯಾಂಕಾಗೆ ಸ್ಟಿಂಗ್ ನೀಡಿದ ರಾಹುಲ್

ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಹಲವು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ನಂತರ, ನಾಯಕರು ಸಮೀಪದ ಕನ್ನಾಟ್ ಪ್ಲೇಸ್‌ನ ಖಾನ್ ಚಾಚಾದಿಂದ ತರಿಸಿದ್ದ ಉಪಹಾರ ಸೇವಿಸಿದರು.

ನಂತರ ರಾಹುಲ್ ಗಾಂಧಿಗೆ ಕೆಂಪು ಬಣ್ಣದ 20 ರೂಪಾಯಿ ಮೌಲ್ಯದ ಕಾರ್ಬೊನೇಟೆಡ್ ಎನರ್ಜಿ ಡ್ರಿಂಕ್ ‘ಸ್ಟಿಂಗ್’ ಬಾಟಲಿ ಸಿಕ್ಕಿತು. ಅವರು ಅದರಿಂದ ಒಂದು ಗುಟುಕು ಕುಡಿದು, ಬಾಟಲಿಯನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕಡೆಗೆ ನೀಡಿದರು. ಪ್ರಿಯಾಂಕಾ ಬಾಟಲಿಯನ್ನು ಗಮನಿಸಿ, ಪಾನೀಯವನ್ನು ಮೂಸಿ ನೋಡಿದರು. ಮೊದಲು ಕುಡಿಯಲು ನಿರಾಕರಿಸಿದ ಅವರು, ತದನಂತರ ಸಣ್ಣ ಸಿಪ್ ಕುಡಿದು ಅಣ್ಣನಿಗೆ ಬಾಟಲಿಯನ್ನು ಹಿಂದಿರುಗಿಸಿದರು.

ವಿಡಿಯೊಗೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನ ಪ್ರತಿಕ್ರಿಯೆ

ಎಕ್ಸ್‌ನಲ್ಲಿರುವ ಬಿಜೆಪಿ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡು, “ನಿಮ್ಮ ಸ್ವಂತ ಸಹೋದರಿಗೇ ನಿಮ್ಮಿಂದ ಸ್ಟಿಂಗ್ ತೆಗೆದುಕೊಳ್ಳಲು ನಂಬಿಕೆ ಇಲ್ಲ ಎಂದಾದರೆ, ದೇಶ ನಿಮ್ಮನ್ನು ಏಕೆ ನಂಬಬೇಕು?” ಎಂದು ಲೇವಡಿ ಮಾಡಲಾಗಿದೆ.

ಇನ್ನು ಕೆಲವರು ರಾಹುಲ್ ಗಾಂಧಿ ಆಯ್ಕೆ ಮಾಡಿಕೊಂಡಿರುವ ಪಾನೀಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸ್ಟಿಂಗ್ ಕುಡಿಯುತ್ತಿರುವುದನ್ನು ಕೆಲವರು ‘ಛಾಪ್ರಿ’ ಎಂಬ ಇಂಟರ್‌ನೆಟ್ ಸ್ಲ್ಯಾಂಗ್ ಬಳಸಿ ಟೀಕೆ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರರು ಲೋಕಸಭೆಯ ವಿರೋಧ ಪಕ್ಷದ ನಾಯಕರು “ಸ್ಟಿಂಗ್ ಕುಡಿಯುವ ಜನರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ” ಎಂದು ತಿಳಿಸಿದ್ದಾರೆ. ಇನ್ನೊಬ್ಬರು ರಾಹುಲ್ ಗಾಂಧಿಯವರ ಆಯ್ಕೆಯನ್ನು ಮೆಚ್ಚಿ, “ರಾಹುಲ್ ಕಾರ್ಮಿಕ ವರ್ಗದ ಜನರ ಪಾನೀಯವನ್ನು ಆರಿಸಿಕೊಂಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಪೆಪ್ಸಿಕೋ ಒಡೆತನದ ಸ್ಟಿಂಗ್ ಕೆಂಪು ಬಣ್ಣದ ಕಾರ್ಬೊನೇಟೆಡ್ ಎನರ್ಜಿ ಡ್ರಿಂಕ್ ಆಗಿದ್ದು, ಇದರಲ್ಲಿ ಕೆಫೀನ್ ಮತ್ತು ಟೌರಿನ್ ಅಂಶಗಳು ಇವೆ. ಸಾಮಾನ್ಯವಾಗಿ ಕೆಂಪು ಬಾಟಲಿಯಲ್ಲಿ ಸಿಗುವ ಈ ಪಾನೀಯದ ಬೆಲೆ ಸುಮಾರು 20 ರೂ. ಕ್ಯಾನ್‌ಗೆ ಸುಮಾರು 165 ರೂ ಬೆಲೆಯಿರುವ ರೆಡ್ ಬುಲ್‌ನಂತಹ ಪ್ರೀಮಿಯಂ ಎನರ್ಜಿ ಡ್ರಿಂಕ್‌ಗಳಿಗೆ ಹೋಲಿಸಿದರೆ ಸ್ಟಿಂಗ್ ಸಾಕಷ್ಟು ಅಗ್ಗವಾಗಿದೆ.

ಹಂಚಿಕೊಳ್ಳಿ: