ಮುಖ್ಯ ವಿಷಯಕ್ಕೆ ಹೋಗಿ
The Karnataka Today
16 Oct
ಸುದ್ದಿ
ಭಾರತ

ನವದೆಹಲಿಯಲ್ಲಿ ಪಕ್ಷ ತೊರೆದ ನಾಯಕರ ಕುರಿತು ರಾಹುಲ್ ಗಾಂಧಿ ಮತ್ತು ಖರ್ಗೆ ನಡುವೆ ಹಾಸ್ಯದ ಚರ್ಚೆ

ಕಾಂಗ್ರೆಸ್ ತೊರೆದ ನಾಯಕರನ್ನು 'ಹೇಡಿಗಳು' ಎಂದ ರಾಹುಲ್ ಗಾಂಧಿಗೆ, ಖರ್ಗೆ ಹಾಸ್ಯಭರಿತವಾಗಿ 'ಅವರೆಲ್ಲ ನಿಮ್ಮ ಸ್ನೇಹಿತರಲ್ವಾ?' ಎಂದು ಕಾಲೆಳೆದರು. ಸಿಂಧಿಯಾ ಎಂದಿಗೂ ಸ್ನೇಹಿತನಾಗಿರಲಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿ,...

ಪಕ್ಷ ಬಿಟ್ಟವರೆಲ್ಲ ಹೇಡಿಗಳು ಎಂದ ರಾಹುಲ್‌ಗೆ ಖರ್ಗೆ ನಗೆಚಟಾಕಿ: ಆದರೆ ಅವರೆಲ್ಲ ನಿಮ್ಮ ಫ್ರೆಂಡ್ಸ್ ಅಲ್ವಾ? ಎಂದ ಕಾಂಗ್ರೆಸ್ ಅಧ್ಯಕ್ಷ
ಹಂಚಿಕೊಳ್ಳಿ:

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಗುಲಾಂ ನಬಿ ಆಜಾದ್ ಅವರನ್ನು ಹೇಡಿಗಳು ಎಂದು ಕರೆದರು. ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಅವರು ನಿಮ್ಮ ಸ್ನೇಹಿತರಲ್ಲವೇ ಎಂದು ತಮಾಷೆಯಾಗಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ರಾಜಕೀಯದಲ್ಲಿ ಶಾಶ್ವತ ಸ್ನೇಹಿತರು ಇರುವುದಿಲ್ಲ ಎಂಬ ಅಜ್ಜಿ ಇಂದಿರಾ ಗಾಂಧಿಯವರ ಮಾತುಗಳನ್ನು ನೆನಪಿಸಿಕೊಂಡರು. ಅಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರ ಪಕ್ಷನಿಷ್ಠೆಯನ್ನು ಕೊಂಡಾಡಿದ ರಾಹುಲ್, ಮೋದಿ ಸರ್ಕಾರಕ್ಕೆ ಇನ್ನು ಎಂಟರಿಂದ ಹತ್ತು ತಿಂಗಳ ಆಯುಷ್ಯವಷ್ಟೇ ಇದೆ ಎಂದು ಭವಿಷ್ಯ ನುಡಿದರು.

ಹಂಚಿಕೊಳ್ಳಿ: