ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಪಡುಬಿದ್ರಿ: ಅಪಘಾತ ಪ್ರಕರಣ

ದಿನಾಂಕ 16/10/2026 ರಂದು ಹರಿಕೃಷ್ಣ ರಾವ್ (44) ರವರು ಅವರ ಟಿವಿಎಸ್ ಜ್ಯುಪಿಟರ್ ದ್ವಿಚಕ್ರ ವಾಹನ ನಂಬ್ರ KA-20-EU-7801 ನೇದರಲ್ಲಿ ನಂದಿಕೂರು ದೇವಸ್ಥಾನ ಕಡೆಯಿಂದ ನಂದಿಕೂರು ಜಂಕ್ಷನ್ ಕಡೆಗೆ ಹಾದು ಹೋಗುವ ಸಾರ್ವ...

· ಉಡುಪಿ
ರಸ್ತೆ ಅಪಘಾತ
ಹಂಚಿಕೊಳ್ಳಿ:

ದಿನಾಂಕ 16/10/2026 ರಂದು ಹರಿಕೃಷ್ಣ ರಾವ್ (44) ರವರು ಅವರ ಟಿವಿಎಸ್ ಜ್ಯುಪಿಟರ್ ದ್ವಿಚಕ್ರ ವಾಹನ ನಂಬ್ರ KA-20-EU-7801 ನೇದರಲ್ಲಿ ನಂದಿಕೂರು ದೇವಸ್ಥಾನ ಕಡೆಯಿಂದ ನಂದಿಕೂರು ಜಂಕ್ಷನ್ ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿರುವಾಗ ಸಂಜೆ 4:15 ಗಂಟೆಗೆ ಕಾಪು ತಾಲೂಕು ನಂದಿಕೂರು ಗ್ರಾಮದ ನಂದಿಕೂರು ಅಂಗನವಾಡಿ ಕೇಂದ್ರದ ಬಳಿ ರಸ್ತೆಯಲ್ಲಿ ಎದುರಿನಿಂದ ನಂದಿಕೂರು ಜಂಕ್ಷನ್ ಕಡೆಯಿಂದ ನಂದಿಕೂರು ದೇವಸ್ಥಾನದ ಕಡೆಗೆ KA-20-ME-4170 ನಂಬ್ರದ ಕ್ರೆಟ್ಟಾ ಕಾರನ್ನು ಅದರ ಚಾಲಕ ಸುರಾಜ್ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ತೀವೃ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಹರಿಕೃಷ್ಣ ರಾವ್ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಹರಿಕೃಷ್ಣ ರಾವ್ ಇವರಿಗೆ ತಲೆಗೆ, ಬಲಕೈಗೆ, ಬಲಕಾಲಿಗೆ ರಕ್ತಗಾಯ ಹಾಗೂ ಕಿವಿಗಳಲ್ಲಿ ರಕ್ತಸ್ರಾವ ಉಂಟಾಗಿ ಪಡುಬಿದ್ರೆ ಸೌರಭ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪ್ರಥಮ ಚಿಕತ್ಸೆ ನೀಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 122/2026 ಕಲಂ: 281, 125(ಎ) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಪಡುಬಿದ್ರಿ ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 122/2026

ಹಂಚಿಕೊಳ್ಳಿ: