ಗಂಗೊಳ್ಳಿ: ಅಸ್ವಾಭಾವಿಕ ಮರಣ ಪ್ರಕರಣ
ಪಿರ್ಯಾದಿದಾರರಾದ ರಾಘವೇಂದ್ರ ಶ್ಯಾನುಬೋಗ್ , ಆಲೂರು ಗ್ರಾಮ ಕುಂದಾಪುರ ಇವರ ತಂದೆ ಗಣಪತಿ ಶ್ಯಾನುಭೋಗ್ (73) ರವರಿಗೆ ಬಿಪಿ ಹಾಗೂ ಪೈಲ್ಸ್ ಖಾಯಿಲೆ ಇದ್ದು ಈ ಬಗ್ಗೆ ಔಷದ ತೆಗೆದುಕೊಳ್ಳುತ್ತಿದ್ದವರು ದಿನಾಂಕ 17/10/20...

ಪಿರ್ಯಾದಿದಾರರಾದ ರಾಘವೇಂದ್ರ ಶ್ಯಾನುಬೋಗ್ , ಆಲೂರು ಗ್ರಾಮ ಕುಂದಾಪುರ ಇವರ ತಂದೆ ಗಣಪತಿ ಶ್ಯಾನುಭೋಗ್ (73) ರವರಿಗೆ ಬಿಪಿ ಹಾಗೂ ಪೈಲ್ಸ್ ಖಾಯಿಲೆ ಇದ್ದು ಈ ಬಗ್ಗೆ ಔಷದ ತೆಗೆದುಕೊಳ್ಳುತ್ತಿದ್ದವರು ದಿನಾಂಕ 17/10/2026 ರಂದು 15:15 ಗಂಟೆಗೆ ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಮನೆಗೆ ಬಾರದೇ ಇದ್ದು 16:45 ಗಂಟೆಯ ಸುಮಾರಿಗೆ ಗಣಪತಿ ಶ್ಯಾನುಬೋಗ್ ರವರು ಮೃತದೇಹವು ವಾಸುದೇವ ಶ್ಯಾನುಭೋಗ್ ರವರ ಖಾಲಿ ಜಾಗದಲ್ಲಿರುವ ಬಾವಿಯಲ್ಲಿ ದೊರೆತಿದ್ದು ಮೃತ ಗಣಪತಿ ಶ್ಯಾನುಬೋಗ್ರವರು ಅವರಿಗಿರುವ ಖಾಯಿಲೆಯಿಂದ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 21/2026 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.
ಗಂಗೊಳ್ಳಿ ಪೊಲೀಸ್ ಠಾಣೆ




