ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಕೋಟ: ಪಾರಂಪಳ್ಳಿಯಲ್ಲಿ ವ್ಯಕ್ತಿಯ ಅಸ್ವಾಭಾವಿಕ ಸಾವು, ಪತ್ನಿ ಮತ್ತು ಕುಟುಂಬಸ್ಥರ ವಿರುದ್ಧ ದೂರು

ಕೋಟದ ಪಾರಂಪಳ್ಳಿ ಗ್ರಾಮದ ನಿವಾಸಿ ಮೊಹಮ್ಮದ್ ಇಕ್ಬಾಲ್ ಅವರ ಮರಣದಲ್ಲಿ ಸಂಶಯವಿದ್ದು, ಈ ಸಂಬಂಧ ಅವರ ಸಹೋದರಿ ಬಲ್ಕೀಸ್ ಅವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಮೃತ ಮೊಹಮ್ಮದ್ ಇಕ್ಬಾಲ್ ಕಳೆ...

· ಉಡುಪಿ
ಪೊಲೀಸ್ ತನಿಖೆ
ಹಂಚಿಕೊಳ್ಳಿ:

ಕೋಟದ ಪಾರಂಪಳ್ಳಿ ಗ್ರಾಮದ ನಿವಾಸಿ ಮೊಹಮ್ಮದ್ ಇಕ್ಬಾಲ್ ಅವರ ಮರಣದಲ್ಲಿ ಸಂಶಯವಿದ್ದು, ಈ ಸಂಬಂಧ ಅವರ ಸಹೋದರಿ ಬಲ್ಕೀಸ್ ಅವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಮೃತ ಮೊಹಮ್ಮದ್ ಇಕ್ಬಾಲ್ ಕಳೆದ ಒಂದು ವರ್ಷದಿಂದ ಪಾರಂಪಳ್ಳಿ ಗ್ರಾಮದ ಮಸೀದಿ ಬಳಿಯ ಮನೆಯಲ್ಲಿ ವಾಸವಾಗಿದ್ದರು. ಅಕ್ಟೋಬರ್ 19, 2026ರಂದು ಬೆಳಗಿನ ಜಾವ 3:40 ಗಂಟೆಗೆ ಇಕ್ಬಾಲ್ ಅವರ ಮಗ ಇಃಝಾನ್ ಕರೆ ಮಾಡಿ, ತಂದೆಗೆ ಹುಷಾರಿಲ್ಲದ ಕಾರಣ ಕೋಟೇಶ್ವರದ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ಬೆಳಗಿನ ಜಾವ 4:00 ಗಂಟೆಗೆ ಆಸ್ಪತ್ರೆಗೆ ತೆರಳಿ ನೋಡಿದಾಗ ಇಕ್ಬಾಲ್ ಮೃತಪಟ್ಟಿರುವುದು ತಿಳಿದುಬಂದಿದೆ. ವೈದ್ಯಾಧಿಕಾರಿಗಳ ವಿಚಾರಣೆ ನಡೆಸಿದಾಗ, ಇಕ್ಬಾಲ್ ಬೆಳಗಿನ ಜಾವ 3:50 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮೃತ ಇಕ್ಬಾಲ್ ತನ್ನ ಪತ್ನಿ ಸಫ್ರಾಭಿ ಮತ್ತು ಆಕೆಯ ಮನೆಯವರು ಪದೇ ಪದೆ ಗಲಾಟೆ ಮಾಡುತ್ತಿರುವುದಾಗಿ ನೊಂದು ಹೇಳಿಕೊಳ್ಳುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 14, 2026ರಂದು ರಾತ್ರಿ ಇಕ್ಬಾಲ್ ಮತ್ತು ಪತ್ನಿಯ ಮನೆಯವರ ನಡುವೆ ಜಗಳ ನಡೆದಿದ್ದು, ಆ ಸಂದರ್ಭದಲ್ಲಿ ಇಕ್ಬಾಲ್ ಅವರ ಬನಿಯಾನ್ ಹರಿದಿದ್ದನ್ನು ಗಮನಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಈ ಘಟನೆಯ ಬಗ್ಗೆ ದೂರು ನೀಡಲು ಇಕ್ಬಾಲ್ ಮುಂದಾಗಿದ್ದರೂ, ಕುಟುಂಬದವರು ಸಮಾಧಾನಪಡಿಸಿದ್ದರು. ಇದೀಗ ಇಕ್ಬಾಲ್ ಅವರ ಮರಣದಲ್ಲಿ ಪತ್ನಿ ಹಾಗೂ ಆಕೆಯ ಮನೆಯವರ ಪಾತ್ರವಿರುವ ಸಂಶಯವಿದ್ದು, ಸೂಕ್ತ ತನಿಖೆ ನಡೆಸುವಂತೆ ದೂರಿನಲ್ಲಿ ಕೋರಲಾಗಿದೆ.

ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 44/2026 ಮತ್ತು ಕಲಂ 194(3)(iv) BNSS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆಯ ನಂತರವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಸಂಶಯವಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ

ಹಂಚಿಕೊಳ್ಳಿ: