ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಕೋಟ: ಪತ್ನಿಯ ಮನೆಯವರ ಕಿರುಕುಳ ಆರೋಪ, ವ್ಯಕ್ತಿಯೋರ್ವನ ಅಸ್ವಾಭಾವಿಕ ಸಾವು

ಕೋಟತಟ್ಟು ಗ್ರಾಮದ ಬಲ್ಕೀಸ್ ಎಂಬುವವರು ತಮ್ಮ ತಮ್ಮ ಮೊಹಮ್ಮದ್ ಇಕ್ಬಾಲ್ ಅವರ ಸಾವಿನ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿ ದೂರು ನೀಡಿರುತ್ತಾರೆ. ದೂರಿನ ಪ್ರಕಾರ, ಮೃತ ಮೊಹಮ್ಮದ್ ಇಕ...

· ಉಡುಪಿ
ಪೊಲೀಸ್ ತನಿಖೆ
ಹಂಚಿಕೊಳ್ಳಿ:

ಕೋಟತಟ್ಟು ಗ್ರಾಮದ ಬಲ್ಕೀಸ್ ಎಂಬುವವರು ತಮ್ಮ ತಮ್ಮ ಮೊಹಮ್ಮದ್ ಇಕ್ಬಾಲ್ ಅವರ ಸಾವಿನ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿ ದೂರು ನೀಡಿರುತ್ತಾರೆ.

ದೂರಿನ ಪ್ರಕಾರ, ಮೃತ ಮೊಹಮ್ಮದ್ ಇಕ್ಬಾಲ್ ಕಳೆದ ಒಂದು ವರ್ಷದಿಂದ ಪಾರಂಪಳ್ಳಿ ಗ್ರಾಮದಲ್ಲಿರುವ ತನ್ನ ಪತ್ನಿಯ ಮನೆಯಲ್ಲಿ ವಾಸವಿದ್ದನು. ಈ ಅವಧಿಯಲ್ಲಿ ಪತ್ನಿ ಸಫ್ರಾಭಿ ಮತ್ತು ಆಕೆಯ ಮನೆಯವರು ಪದೇ ಪದೇ ಗಲಾಟೆ ಮಾಡುತ್ತಿದ್ದರು ಎಂದು ಮೃತನು ತಿಳಿಸುತ್ತಿದ್ದನು ಎಂದು ದೂರಿನಲ್ಲಿ ಹೇಳಲಾಗಿದೆ.

ದಿನಾಂಕ 14.10.2026ರಂದು ರಾತ್ರಿ ಅಬ್ದುಲ್ ರಜಾಕ್ ಎಂಬುವವರು ಬಂದು, ಇಕ್ಬಾಲ್ ಹಾಗೂ ಆತನ ಪತ್ನಿಯ ಮನೆಯವರ ನಡುವೆ ಜಗಳ ನಡೆದಿರುವುದಾಗಿ ತಿಳಿಸಿದ್ದರು. ನಂತರ ಮನೆಗೆ ಬಂದಾಗ ಇಕ್ಬಾಲ್‌ನ ಬನಿಯಾನ್ ಹರಿದಿರುವುದು ಕಂಡುಬಂದಿತ್ತು. ಈ ಬಗ್ಗೆ ದೂರು ನೀಡಲು ಇಕ್ಬಾಲ್ ಮುಂದಾಗಿದ್ದರೂ, ಮನೆಯವರು ಸಮಾಧಾನಪಡಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ದಿನಾಂಕ 19.10.2026ರಂದು ಬೆಳಗ್ಗಿನ ಜಾವ 03.40 ಗಂಟೆಗೆ ಮೊಹಮ್ಮದ್ ಇಕ್ಬಾಲ್‌ನನ್ನು ಕೋಟೇಶ್ವರದ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯಾಧಿಕಾರಿಗಳ ಪರೀಕ್ಷೆಯ ಬಳಿಕ ಬೆಳಗ್ಗಿನ ಜಾವ 03.50 ಗಂಟೆಗೆ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿರುತ್ತಾರೆ.

ಪತ್ನಿ ಮತ್ತು ಆಕೆಯ ಮನೆಯವರ ನಿರಂತರ ಗಲಾಟೆಯೇ ಇಕ್ಬಾಲ್‌ನ ಸಾವಿಗೆ ಕಾರಣವಿರಬಹುದು ಎಂಬ ಸಂಶಯವನ್ನು ದೂರುದಾರರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 44/2026, ಕಲಂ 194(3)(iv) ಬಿಎನ್‌ಎಸ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತನಿಖೆಯ ನಂತರವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ದೂರಿನಂತೆ ಈ ಬಗ್ಗೆ ಕೋಟ ಪೊಲೀಸ್ ಠಾಣೆ

ಹಂಚಿಕೊಳ್ಳಿ: