ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸಿನಿಮಾ

ಕೇವಲ ನಟನಾಗಿರದೆ ನಾಮ್ ಫೌಂಡೇಷನ್ ಮೂಲಕ ರೈತರು, ನೊಂದವರ ಬಾಳಿನ ಆಸರೆ: ನಾನಾ ಪಾಟೇಕರ್ ನಿಧನಕ್ಕೆ ಬೊಮ್ಮಾಯಿ ಸಂತಾಪ!

ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ (Nana Patekar) ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ತಮ್ಮದೇಯಾದ ವಿಶಿಷ್ಟ ಶೈಲಿಯ ಡೈಲಾಗ್‌ಗಳ ಮೂಲಕ ತಮ್ಮದ...

· ಬೆಂಗಳೂರು ನಗರ
ಕೇವಲ ನಟರಾಗಿರದೇ ನಾಮ್ ಫೌಂಡೇಷನ್ ಮೂಲಕ ರೈತರು, ನೊಂದವರ ಸೇವೆ: ನಾನಾ ಪಾಟೇಕರ್ ನಿಧನಕ್ಕೆ ಬೊಮ್ಮಾಯಿ ಸಂತಾಪ
ಹಂಚಿಕೊಳ್ಳಿ:

ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ (Nana Patekar) ಅವರು ನಿಧನರಾಗಿದ್ದಾರೆ ಎಂಬ ವಿಷಯ ತಿಳಿದು ನನಗೆ ತೀವ್ರ ಬೇಸರವಾಗಿದೆ. ಹಿಂದಿ ಮತ್ತು ಮರಾಠಿ ಚಿತ್ರರಂಗಗಳಲ್ಲಿ ವಿಭಿನ್ನ ಶೈಲಿಯ ಸಂಭಾಷಣೆಗಳ ಮೂಲಕ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಕಂಬನಿ ಮಿಡಿದಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ನಾನಾ ಪಾಟೇಕರ್ ಅಭಿನಯದ ಕ್ರಾಂತಿವೀರ, ನಟ ಸಾಮ್ರಾಟ ಸಿನಿಮಾಗಳು ಎಂದೆಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ನೆಲೆಸಲಿವೆ. ನಾನಾ ಪಾಟೇಕರ್ ಕೇವಲ ನಟನಾಗಿರದೆ ನಾಮ್ ಫೌಂಡೇಷನ್ ಮೂಲಕ ರೈತರು ಮತ್ತು ಸಂಕಷ್ಟದಲ್ಲಿರುವವರ ಸೇವೆ ಮಾಡಿದ್ದರು ಎಂದು ಉಲ್ಲೇಖಿಸಿದ್ದಾರೆ.

ಅವರ ನಿಧನದಿಂದ ಭಾರತೀಯ ಚಿತ್ರರಂಗ ಒಬ್ಬ ಸಂವೇದನಾಶೀಲ ನಟನನ್ನು ಕಳೆದುಕೊಂಡಿದ್ದು, ದೊಡ್ಡ ನಷ್ಟವಾಗಿದೆ. ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಹಂಚಿಕೊಳ್ಳಿ: