ಸಹಕಾರಿ ಕ್ಷೇತದ ಧುರೀಣ ಬೆಳಪು ಕಾಂಗ್ರೆಸ್ ಮುಖಂಡ ಪುತ್ರನ ಹುಚ್ಚಾಟಕ್ಕೆಅಮಾಯಕ ಯುವಕನ ಬಲಿ

2

” ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾಗಿರುವ ಸಮಾಜದಲ್ಲಿ ರಾಜಕಾರಣಿಗಳ ಮಕ್ಕಳೇ ವ್ಯಸನಕ್ಕೆ ದಾಸರಾಗಿರುವ ಕಾಲಘಟ್ಟದಲ್ಲಿ ಅಮಾಯಕ ಯುವಕನ ಬಲಿ ತೆಗೆದುಕೊಂಡ ಘಟನೆ ಕಾಪು ತಾಲೂಕಿನ ಬೆಳಕು ಮಿಲಿಟರಿ ಕಾಲೋನಿ ಎಂಬಲ್ಲಿ ನಡೆದಿದೆ

  ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರಿಂದ ನಡೆದಿದೆ ಎನ್ನಲಾಗಿದೆ

ಇದಕ್ಕೆ ಪೂರಕವೆಂಬಂತೆ  ಮಾಧ್ಯಮಗಳಿಗೆ ವಿಚಾರ ತಿಳಿಯಬಾರದೆಂದು ಉದ್ದೇಶದಿಂದ ಪೊಲೀಸ್ ಇಲಾಖೆಯ ನ್ಯೂಸ್  ಬ್ಲಾಗ್ ಅಪ್ಲೋಡ್ ಮಾಡದೇ ಇರುವುದು ಅನುಮಾನ ಎಡೆ ಮಾಡಿದೆ.

ಉಡುಪಿ ಮಣಿಪಾಲ ಪರಿಸರದಲ್ಲಿ ನವೆಂಬರ್ 12ರಂದು ರಾತ್ರಿ  ಪಾರ್ಟಿ ಮುಗಿಸಿ  ಬೆಳಗಿನ ಜಾವ ಈ ಘಟನೆ ನಡೆದಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

   ವೇಗವಾಗಿ ಥಾರ್ ಜೀಪ್ ಅನ್ನು ಪ್ರಜ್ವಲ್  ಶೆಟ್ಟಿ ಚಲಾಯಿಸಿ ಕೊಂಡು ಬಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರನೋರ್ವ ಗಂಭೀರವಾಗಿ ಗಾಯಗೊಂಡು,

ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ವರನ್ನು  ಬೆಳಪು ನಿವಾಸಿ ಮಹಮ್ಮದ್ ಹುಸೇನ್ (39) ಎಂದು ಗುರುತಿಸಲಾಗಿದೆ.
.  
ಕಾಂಗ್ರೆಸ್ ಮುಖಂಡ, ಸಹಕಾರಿ ಧುರೀಣ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರ ಪುತ್ರ ಪ್ರಜ್ವಲ್ ಶೆಟ್ಟಿ ಎಂಬಾತ ನ.13ರಂದು ಮುಂಜಾನೆ 5 ಗಂಟೆಗೆ ಹಿಟ್  ಆ್ಯಂಡ್ ರನ್ ನಡೆಸಿ ಪರಾರಿಯಾಗಿದ್ದನು.     

ಜೀಪ್ ಡಿಕ್ಕಿ ಹೊಡೆದ ತೀವ್ರತೆಗೆ ಮಹಮ್ಮದ್ ಹುಸೇನ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದ ಭೀಕರತೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ನಡೆದ ಬೆನ್ನಲ್ಲೇ ಪ್ರಜ್ವಲ್ ಶೆಟ್ಟಿ ತಲೆಮರೆಸಿಕೊಂಡಿದ್ದನು.

ಅಪಘಾತ ನಡೆದ ಸಂದರ್ಭದಲ್ಲಿ ಆರೋಪಿಯನ್ನುಬಂಧಿಸಿದರೆ ವೈದ್ಯಕೀಯ ಪರೀಕ್ಷೆಯಲ್ಲಿ ಅಮಲು ಪದಾರ್ಥ ಸೇವನೆ ಮಾಡಿದ್ದಾರೆಯೇ ಇಲ್ಲವೇಎನ್ನುವ ವಿಚಾರ ಸ್ಪಷ್ಟವಾಗುತ್ತಿತ್ತು

ಈ ವಿಚಾರ ಮುಚ್ಚಿಹಾಕುವ ಉದ್ದೇಶದಿಂದ ಘಟನೆ ನಡೆದ  ಮೂರು ದಿನಗಳ ನಂತರ ಆರೋಪಿಯನ್ನು ಬಂಧಿಸುವ ನಾಟಕವಾಡಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ

ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಅಮಾಯಕ ಯುವಕನ ಕುಟುಂಬಸ್ತರಿಗೆ ಒದಗಿಸಿ ಕೊಡುವಂತೆ ಜಿಲ್ಲಾ ಪೊಲೀಸ ವರಿಷ್ಟಧಿಕಾರಿಯವರಿಗೆ ಸಾರ್ವಜನಿಕರು ಅಗ್ರಹಿಸಿದ್ದಾರೆ

ಶಿರ್ವ ಪೊಲೀಸರು ಹಿಟ್ ಆ್ಯಂಡ್ ರನ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ”

Leave a comment

Leave a Reply

Your email address will not be published. Required fields are marked *

Related Articles

ಉಡುಪಿ ನಗರ ಸರಣಿ ಮನೆ ಕಳ್ಳತನ ಅಂತರ್ ರಾಜ್ಯ ಕಳ್ಳನನ್ನು ಬಂಧಿಸಿದ ವಿಶೇಷ ಪೊಲೀಸ್ ತಂಡ

“ನಗರದಲ್ಲಿ ಸರಣಿ ಮನೆಗಳ್ಳತನ ಪ್ರಕರಣದ ಅಂತರ್‌ ರಾಜ್ಯ ಕಳ್ಳರನ್ನು ಪತ್ತೆ ಹಚ್ಚಲು ಪೊಲೀಸ್ ವರಿಷ್ಠಾಧಿಕಾರಿ ಅವರ...

ಮೈಸೂರಿನಲ್ಲಿ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಆರು ಮಂದಿ ಬಂಧನ ಮಹಾರಾಷ್ಟ್ರ ಮೈಸೂರು ಪೊಲೀಸರ ಜಂಟಿ ಕಾರ್ಯಚರಣೆ

“ಸಾಂಸ್ಕೃತಿಕ.  ನಗರಿ ಮೈಸೂರಿನಲ್ಲಿ ಸಿಂಥೆಟಿಕ್‌ ಡ್ರಗ್ಸ್ ಎಂಡಿಎಂಎ ತಯಾರಿಕಾ ಘಟಕ   ಪತ್ತೆಯಾಗಿದ್ದು ಕೋಟ್ಯಾಂತರ ರೂ   ಮೌಲ್ಯದ ...

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 40 ಕೋಟಿಗೂ ಅಧಿಕ ಹಣ ವಂಚಿಸಿದ್ದ ಆರೋಪಿಯನ್ನು ಬಂಧಿಸಿದ ಕಾರವಾರ ಪೊಲೀಸ್

‘ಡಿಜಿಟಲ್ ಅರೆಸ್ಟ್’ ವಂಚನೆ: ರಾಷ್ಟ್ರವ್ಯಾಪಿ ರೂ 40 ಕೋಟಿ ವಂಚಿಸಿದ ಆರೋಪಿ ಬಂಧನ ಕಾರವಾರ: ‘ಡಿಜಿಟಲ್...

180 ಜನರ ಸಾವಿಗೆ ಕಾರಣವಾಗಿದ್ದ 7/11 ಮುಂಬೈ ರೈಲು ಬಾಂಬ್ ಸ್ಫೋಟ ಪ್ರಕರಣ: ಸಾಕ್ಷಾಧಾರ ಕೊರತೆ ಎಲ್ಲಾ 12 ಆರೋಪಿಗಳು ಖುಲಾಸೆ.

2006 ರ ಮುಂಬೈ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 12 ಮಂದಿ ಆರೋಪಿಗಳನ್ನು ಸಾಕ್ಷ್ಯಾಧಾರಗಳ...