ಜಮೀರ್ ಖಾನ್ ರಿಂದ ಆ ಮಾತನ್ನು ಕುಮಾರಸ್ವಾಮಿ ಹೇಳಿಸಿರಬೇಕು: ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೊಸ ಬಾಂಬ್ ಕುಮಾರಸ್ವಾಮಿ- ಜಮೀರ್ ಅಹ್ಮದ್ ಖಾನ್ ಗಳಸ್ಯ- ಕಂಠಸ್ಯ, ಅವರಿಬ್ಬರೂ ಚೆನ್ನಾಗಿದ್ದಾರೆ.
ಕರಿಯ ಅಂತ ಜಮೀರ್ ಬಾಯಲ್ಲಿ ಕುಮಾರಸ್ವಾಮಿಯೇ ಹೇಳಿಸಿರಬಹುದು. ಶಾಸಕ ರಮೇಶ್ ಬಂಡಿಸಿದ್ದೇಗೌಡ
ಚನ್ನಪಟ್ಟಣ ಉಪ ಚುನಾವಣೆ ಪ್ರಚಾರದ ವೇಳೆಯಲ್ಲಿ ಜಮೀರ್ ಆಡಿದ್ದ ಮಾತೇ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗುತ್ತೆಂಬ ಚರ್ಚೆ ಶುರುವಾಗಿದೆ. ದೇವೇಗೌಡರ ಕುಟುಂಬವನ್ನ ಖರೀದಿಸ್ತೀವಿ.
ಮತ್ತೊಂದೆಡೆ ಜಮೀರ್ ಹೇಳಿಕೆ ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕ ರಮೇಶ್ ಬಂಡಿಸಿದ್ದೇಗೌಡ ನೀಡಿರುವ ಹೊಸ ಬಾಂಬ್ ಸಿಡಿಸಿದ್ದಾರೆ.
ಕುಮಾರಸ್ವಾಮಿ- ಜಮೀರ್ ಅಹ್ಮದ್ ಖಾನ್ ಗಳಸ್ಯ- ಕಂಠಸ್ಯ, ಅವರಿಬ್ಬರೂ ಚೆನ್ನಾಗಿದ್ದಾರೆ. ಕರಿಯ ಅಂತ ಜಮೀರ್ ಬಾಯಲ್ಲಿ ಕುಮಾರಸ್ವಾಮಿಯೇ ಹೇಳಿಸಿರಬಹುದು ಎಂದರು.
ಉಪ ಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಚನ್ನಪಟ್ಟಣದಲ್ಲಿ ಪಕ್ಷದ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆ ಅವರದೇ ಆದ ಮತಗಳಿವೆ. ಅವರನ್ನು ಜನ ಇಷ್ಟಪಟ್ಟಿದ್ದು, ಗೆದ್ದೇ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಮೀರ್ ಅಹ್ಮದ್ ಗೆ ಕುಳ್ಳ ಎಂದು ಯಾವತ್ತೂ ಕರೆದಿಲ್ಲ: ಎಚ್ ಡಿ ಕುಮಾರಸ್ವಾಮಿ ಒಕ್ಕಲಿಗ ಪ್ರಾಬಲ್ಯದ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಸಿಎಂ ಹುದ್ದೆ ರೇಸ್ ನಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಪ್ರಾಬಲ್ಯ ಹೆಚ್ಚಾಗುವ ಆತಂಕದಲ್ಲಿ ಸಿಎಂ ಆಪ್ತರಾಗಿರುವ ಜಮೀರ್ ಅಹ್ಮದ್ ಖಾನ್ ಅವರಿಂದ ಉದ್ದೇಶಪೂರ್ವಕವಾಗಿಯೇ ಕರಿಯ ಎಂಬಂತಹ ಹೇಳಿಕೆ ನೀಡಿಸಲಾಗಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಒಟ್ಟಾರೇ ಫಲಿತಾಂಶ ತಿಳಿಯಲು ನವೆಂಬರ್ 23ರವರೆಗೂ ಕಾಯಬೇಕಾಗಿದೆ.