“ನಗರದಲ್ಲಿ ಸರಣಿ ಮನೆಗಳ್ಳತನ ಪ್ರಕರಣದ ಅಂತರ್ ರಾಜ್ಯ ಕಳ್ಳರನ್ನು ಪತ್ತೆ ಹಚ್ಚಲು ಪೊಲೀಸ್ ವರಿಷ್ಠಾಧಿಕಾರಿ ಅವರ ಮಾರ್ಗದರ್ಶನದಲ್ಲಿ ರಚನೆಯಾದ ವಿಶೇಷ ತಂಡ ಯಶಸ್ವಿಯಾಗಿ ಆರೋಪಿಯನ್ನು ಬಂಧಿಸಿ ಉಡುಪಿಗೆ ಕರೆತಂದಿದ್ದಾರೆ . ಬಂಧಿತ ಆರೋಪಿ ಮೊಹಮ್ಮದ್ ಆಸೀಪ್ ಬೆಟಗೇರಿ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ : ದಿನಾಂಕ: 05.07.2025 ರಂದು ಉಡುಪಿ ನಗರ ಠಾಣಾ ವ್ಯಾಪ್ತಿಯ ಪುತ್ತೂರು ಗ್ರಾಮದ ಕೊಡಂಕೂರು ನ್ಯೂ ಕಾಲೋನಿಯಲ್ಲಿ ಮಧ್ಯರಾತ್ರಿಯಲ್ಲಿ 3 ಮನೆಗಳ ಕಳ್ಳತನವಾದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ.
ಸದರಿ ಪ್ರಕರಣಗಳ ಆರೋಪಿ ಹಾಗೂ ಸೊತ್ತು ಪತ್ತೆಯ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ವಿ.ಬಡಿಗೇರ ತಂಡವು ದಿನಾಂಕ: 26.07.2025 ರಂದು ಸಂಶಹಿತ ವ್ಯಕ್ತಿಯಾದ ಮೊಹಮ್ಮದ್ ಆಸೀಪ್ ಬೆಟಗೇರಿ ದಸ್ತಗಿರಿ ಮಾಡಿದ್ದು,
ವಿಚಾರಣೆಯಲ್ಲಿ ಈತನು ತನ್ನ ಸಹಚರರೊಂದಿಗೆ ಸೇರಿಕೊಂಡು ಒಂದು ವಾಹನದಲ್ಲಿ ಮಧ್ಯರಾತ್ರಿಯಲ್ಲಿ ಬಂದು ಕೊಡಂಕೂರಿನಲ್ಲಿ 3 ಮನೆಗಳ ಬೀಗವನ್ನು ಮುರಿದು ಆ ಮನೆಗಳಲ್ಲಿರುವ ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣ ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅವುಗಳನ್ನು ಭಟ್ಕಳ ಹಾಗೂ ಶಿರಸಿ ಕಡೆಗಳಲ್ಲಿ ಮಾರಾಟ ಮಾಡಿ ಹಣವನ್ನು ಪಡೆದಿರುವುದಾಗಿ ತಿಳಿಸಿರುತ್ತಾನೆ.
ಆರೋಪಿಯನ್ನು ಮಾನ್ಯ ನ್ಯಾಯಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಆರೋಪಿಯು ತೋರಿಸಿದಂತೆ ಭಟ್ಕಳ ಹಾಗೂ ಶಿರಸಿ ನಗರದಲ್ಲಿ ಕಳವು ಮಾಡಿ ವಿಲೇವಾರಿ ಮಾಡಿದ ಸುಮಾರು 8.50 ಲಕ್ಷ ಮೌಲ್ಯದ ಅಂದಾಜು 95.5 ಗ್ರಾಂ ಚಿನ್ನಾಭರಣ 255 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಈತನು ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆ ದಾವಣಗೆರೆ ಜಿಲ್ಲೆ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಕಳವು ಮಾಡಿರುವುದಾಗಿ ನುಡಿದಿರುತ್ತಾನೆ.
ಅಲ್ಲದೇ ಈ ಹಿಂದೆ ಗೋವಾದಲ್ಲಿ 4 ಪ್ರಕರಣಗಳು ಉತ್ತರ ಪ್ರದೇಶ ರಾಜ್ಯದಲ್ಲಿಯೂ ಕೂಡ ಕಳವು ಹಾಗೂ ಇತರ ಪ್ರಕರಣಗಲ್ಲಿ ತಾನೂ ಹಾಗೂ ತನ್ನ ಸಹೋದರ ಆರೀಫ್,ಅನೀಸ್ ಹಾಗೂ ಸಂಬಂದಿ ಸಲೀಂ, ಶೋಯೆಬ್ ಎಲ್ಲರೂ ಸೇರಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ
.ಉಡುಪಿ ನಗರ ಠಾಣಾ ಪ್ರಕರಣದಲ್ಲಿ ಆರೋಪಿತನಾದ ಆಸೀಪ್‌ನ ಸಹೋದರ ಆರೀಪ್ ಹಾಗೂ ಇತರರು ತಲೆಮರೆಸಿ ಕೊಂಡಿದ್ದು ಪತ್ತೆಯ ಕಾರ್ಯಚರಣೆ ಮುಂದುವರೆದಿರುತ್ತದೆ.
ಪ್ರಕರಣದಲ್ಲಿನ ಆರೋಪಿ ಹಾಗೂ ಸ್ವತ್ತು ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಐಪಿಎಸ್, ಉಡುಪಿ ಜಿಲ್ಲೆರವರ ನಿರ್ದೇಶನದಂತೆ, ಸುಧಾಕರ್ ನಾಯ್ಕ,
ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಿಟಿ ಪ್ರಭು. ಡಿವೈಎಸ್‌ಪಿ ಉಡುಪಿ ಉಪವಿಭಾಗರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ ವಿ.ಬಡಿಗೇರ ಇವರ ನೇತೃತ್ವದಲ್ಲಿ ಪತ್ತೆ ಕಾರ್ಯ ಕೈಗೊಂಡು ತನಿಖೆ ನಡೆಸಿದ್ದು,
ಉಡುಪಿ ನಗರ ಪೊಲೀಸ್ ಠಾಣಾ ಪಿಎಸ್‌ಐಗಳಾದ ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ, ನಾರಯಣ ಬಿ. ಗೋಪಾಲಕೃಷ್ಣ, ಠಾಣಾ ಸಿಬ್ಬಂದಿಯವರಾದ ಪ್ರಸನ್ನ.ಸಿ , ಹರೀಶ, ಸಂತೋಷ್ ಶೆಟ್ಟಿ, ಆನಂದ, ಸಂತೋಷ್ ರಾಥೋಡ್, ಶಿವು ಕುಮಾರ್, ಹೇಮಂತ ಕುಮಾರ್, ನೇತ್ರಾವತಿ ಸ್ಪೂರ್ತಿ
ಬ್ರಹ್ಮಾವರ ಠಾಣೆಯ ಇಮ್ರಾನ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ದಿನೇಶ್ ಮತ್ತು ನಿತಿನ್‌ರವರು ಕಾರ್ಯ ನಿರ್ವಹಿಸಿರುತ್ತಾರೆ.
Leave a comment