thekarnatakatoday.com
Crime

ಶಿಕ್ಷೆ ಪ್ರಕಟಿಸಿದ ನ್ಯಾಯಾಧೀಶರ ಕಾರಿನ ಮೇಲೆ ಗುಂಡಿನ ದಾಳಿ ಮಾಡಿದ ಗ್ಯಾಂಗ್ ಸ್ಟರ್

ಶಿಕ್ಷೆ ನೀಡಿದ ನ್ಯಾಯಾಧೀಶರ ಮೇಲೆ ದಾಳಿ ಮಾಡಿದ ‘ಗ್ಯಾಂಗ್ ಸ್ಟರ್’ ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ  ಈ ಘಟನೆ ನಡೆದಿದ್ದು, ಗ್ಯಾಂಗ್ ಸ್ಟರ್ ಸುಂದರ್ ಭಾಟಿ ಗ್ಯಾಂಗ್‌ನ ಸದಸ್ಯರು ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸಿದ್ದಾರೆ. ನ್ಯಾಯಾಧೀಶರ ಮೇಲೆ ಹಲ್ಲೆ ಮಾಡಿದ ಗ್ಯಾಂಗ್ ಸ್ಟರ್

ದರೋಡೆ ಪ್ರಕರಣದಲ್ಲಿ ತನ್ನನ್ನು ಅಪರಾಧಿ ಎಂದು ತೀರ್ಪು ನೀಡಿದ ನ್ಯಾಯಾಧೀಶರ ಮೇಲೆಯೇ ಗ್ಯಾಂಗ್ ಸ್ಟರ್ ಗಳು ಓರ್ವ ದಾಳಿ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ಅಕ್ಟೋಬರ್ 29 ರಂದು ಈ ಘಟನೆ ನಡೆದಿದ್ದು, ಗ್ಯಾಂಗ್ ಸ್ಟರ್ ಸುಂದರ್ ಭಾಟಿ ಗ್ಯಾಂಗ್‌ನ ಸದಸ್ಯ ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸಿದ್ದಾರೆ.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿಲ್ ಕುಮಾರ್ ಸಿಂಗ್ ಅವರು ದೀಪಾವಳಿಗೆ ಅಲಿಗಢದ ಮೂಲಕ ನೋಯ್ಡಾದ ಮನೆಗೆ ಹೋಗುತ್ತಿದ್ದಾಗ ಜಟ್ಟಾರಿ ಬಳಿ ಅವರ ವಾಹನವನ್ನು ಬಿಳಿ ಬಣ್ಣದ ಎಸ್‌ಯುವಿಯಲ್ಲಿ ಬಂದ ಐವರು ಅಪರಿಚಿತ ದುಷ್ಕರ್ಮಿಗಳು ಅಡ್ಡಗಟ್ಟಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಅದೃಷ್ಟವಶಾತ್ ಈ ದಾಳಿಯಲ್ಲಿ ನ್ಯಾಯಾಧೀಶರು ಪ್ರಾಣಾಪಾಯದಿಂದ ಪಾರಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಪುರುಷರು ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ, ಜಿಮ್‌ನಲ್ಲಿ ತರಬೇತಿ ನೀಡುವಂತಿಲ್ಲ: ಉತ್ತರ ಪ್ರದೇಶ ಮಹಿಳಾ ಆಯೋಗ ಈ ಕುರಿತು ನ್ಯಾಯಾಧೀಶರಾದ ಅನಿಲ್ ಕುಮಾರ್ ಸಿಂಗ್ ಪೊಲೀಲ್ ದೂರು ದಾಖಲಿಸಿದ್ದು, ‘ಐವರು ಅಪರಿಚಿತ ವ್ಯಕ್ತಿಗಳು ನನ್ನನ್ನು ಉದ್ದೇಶಪೂರ್ವಕವಾಗಿ ಭಯಭೀತಗೊಳಿಸಿದರು ಮತ್ತು ನನ್ನನ್ನು ಕೊಲ್ಲುವ ಉದ್ದೇಶದಿಂದ ದಾಳಿ ಮಾಡಿದರು

. ನನಗೆ ಯಾರೊಂದಿಗೂ ದ್ವೇಷವಿಲ್ಲ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶನಾಗಿ, ಗೌತಮ್ ಬುದ್ಧನಗರದ ಜಿಲ್ಲಾ ನ್ಯಾಯಾಲಯದಲ್ಲಿ, ನಾನು 2015 ಮತ್ತು 2016 ರ ಬಹು ಪ್ರಕರಣಗಳ ಸೆಷನ್ಸ್ ವಿಚಾರಣೆಯನ್ನು ನಡೆಸಿದ್ದೆ.

ಈ ಸೆಷನ್ ವಿಚಾರಣೆಗಳಲ್ಲಿ, ಆರೋಪಿ ಸುಂದರ್ ಭಾಟಿ ಮತ್ತು ಅವರ 11 ಗ್ಯಾಂಗ್ ಸದಸ್ಯರು ರಿಷಿ ಪಾಲ್, ಸಿಂಗ್ ರಾಜ್, ಯೋಗೇಶ್, ವಿಕಾಸ್ ಪಂಡಿತ್, ಕಲು ಭಾಟಿ, ಬೀಲ್, ಕವೀಂದ್ರ, ದಿನೇಶ್ ಭಾಟಿ, ಅನೂಪ್ ಭಾಟಿ, ಯತೇಂದ್ರ ಚೌಧರಿ, ಸೋನು, ಬಾಬಿ ಅಲಿಯಾಸ್ ಶೇರ್ ಸಿಂಗ್ ಮತ್ತು ಸುರೇಂದರ್ ಪಂಡಿತ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ನಾನು ಜೀವಾವಧಿ ಶಿಕ್ಷೆಗೆ ಗುರಿಪಡಿಸಿದ್ದೆ.

ಸುಂದರ್ ಭಾಟಿ ಮತ್ತು ಅವನ ಗ್ಯಾಂಗ್ ಸದಸ್ಯರು ತಮ್ಮ ಅಪರಾಧದ ಪೂರ್ವಾಪರಗಳನ್ನು ಹೊಂದಿದ್ದರೂ ಈ ವ್ಯಕ್ತಿಗಳು ಎಂದಿಗೂ ಶಿಕ್ಷೆಗೊಳಗಾಗದ ಕಾರಣ ಅವರ ಅಪರಾಧ ಮತ್ತು ಶಿಕ್ಷೆಗೆ ಸೇಡು ತೀರಿಸಿಕೊಳ್ಳಲು ಕೊಲ್ಲುವ ಉದ್ದೇಶದಿಂದ ನನ್ನ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದಾರೆ ಎಂದು ದೂರಿದ್ದಾರೆ. 

ನ್ಯಾಯಾಧೀಶರ ದೂರಿನ ಆಧಾರದ ಮೇಲೆ ನವೆಂಬರ್ 9 ರಂದು ಖೇರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವೃತ್ತಾಧಿಕಾರಿ ಎನ್ ಕೆ ಸಿಂಗ್ ತಿಳಿಸಿದ್ದಾರೆ.

Related posts

ಸೆಂಟ್ರಲ್ ಜೈಲ್ ಮುಖ್ಯ ಅಧೀಕ್ಷಕಿ ಕಾರ್ ಸ್ಫೋಟಿಸುದಾಗಿ ಆನಾಮದೇಯ ವ್ಯಕ್ತಿಯಿಂದ ಕರೆ ಮೂಲಕ ಬೆದರಿಕೆ

The Karnataka Today

ಮಲೆನಾಡಿನಲ್ಲಿ 13 ವರ್ಷಗಳ ನಂತರ ಮತ್ತೆ ಕಾಣಿಸಿಕೊಂಡ ನಕ್ಸಲ್ ಹೆಜ್ಜೆ ಗುರುತು ತನಿಖೆ ಚುರುಕು

The Karnataka Today

ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರನ ಕಲ್ಟ್ ಚಲನಚಿತ್ರಕ್ಕೆ ಆರಂಭದಲ್ಲಿ ಕಂಟಕ ಚಿತ್ರದ ಟೆಕ್ನಿಷಿಯನ್ ಆತ್ಮಹತ್ಯೆ ಯತ್ನ

The Karnataka Today

Leave a Comment