ರಾಷ್ಟ್ರೀಯ ಹೆದ್ದಾರಿ ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಸಿಲ್ಕ್ ಬಳಿ ಇರುವ ರಸ್ತೆ ವಿಭಾಜಕವನ್ನು ತೆರೆದು ಕೊಟ್ಟಿರುವುದನ್ನು ಪ್ರಶ್ನಿಸಿ ಹೋರಾಟಕ್ಕೆ ಸಿದ್ಧತೆ

47

ಬಹುದಿನಗಳಿಂದ ಸುದ್ದಿಯಲ್ಲಿರುವ ಉಡುಪಿಯಹೆದ್ದಾರಿ ವಿಭಾಜಕಒಡೆದ ಪ್ರಕರಣದಉಡುಪಿ ಸಾರ್ವಾಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿರುವವಿಚಾರದಲ್ಲಿ ನೆಡೆದ ಪತ್ರಿಕಾಗೋಷ್ಠಿ

ಉಡುಪಿ ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಸಿಲ್ಕ್ ಮುಂಡುಗಡೆ ಇರುವ ರಸ್ತೆ ವಿಭಾಜಕವನ್ನು ತೆರೆದು ಕೊಟ್ಟಿರುವುದನ್ನು ಪ್ರಶ್ನಿಸಿ ಹಾಗೂ ಅದನ್ನು ಕೂಡಲೇ ಮುಚ್ಚುವಂತೆ ಆಗ್ರಹಿಸಿ ಇವತ್ತು ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ ರಸ್ತೆ ವಿಭಾಜಕದ ಮೇಲೆಯೇ ಶಾಂತಿಯುತವಾಗಿ 10 ನಿಮಿಷಗಳ ಕಾಲ ಪ್ರತಿಭಟನೆ ನಡೆಸುವುದಾಗಿ ನಿರ್ಧರಿಸಲಾಗಿತ್ತು.

ನಿನ್ನೆ ಸಂಜೆಯ ವೇಳೆಗೆ ಪೊಲೀಸ್ ಇಲಾಖೆ ವತಿಯಿಂದ ಆ ಜಾಗದಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಿರುವುದರಿಂದ ನಾವು ಆ ಸ್ಥಳದ ಪ್ರತಿಭಟನೆಯನ್ನು ಕೈಬಿಟ್ಟು, ಜಿಲ್ಲಾಧಿಕಾರಿಯವರಲ್ಲಿ ಕೇಳಲಿಕ್ಕಿರುವ ಪ್ರಶ್ನೆಗಳನ್ನು ಪತ್ರಿಕಾಗೋಷ್ಠಿಯ ಮೂಲಕ ಕೇಳುವುದಾಗಿ ನಿರ್ಧರಿಸಿ ಇವತ್ತು ಈ ಪ್ರತಿಕಾಗೋಷ್ಠಿಯನ್ನು ನಡೆಸಲು ನಿರ್ಧರಿಸಿದ್ದೇವೆ.

ಆ ಜಾಗದಲ್ಲಿ ರಸ್ತೆ ವಿಭಾಜಕವನ್ನು ಪುನಃ ನಿರ್ಮಿಸಬೇಕೆಂದು ಆಗ್ರಹಿಸಿ ಸಂಘಟನೆಯ ವತಿಯಿಂದ ಈಗಾಗಲೇ 2 ಬಾರಿ ಮನವಿ ನೀಡಲಾಗಿತ್ತು. ಜಿಲ್ಲಾಧಿಕಾರಿ ವತಿಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿರುವುದಿಲ್ಲ.

ಸುಪ್ರಿಂಕೋರ್ಟ್‌ನಿಂದ ಒಳರಸ್ತೆಗಳು ಹೆದ್ದಾರಿಗೆ ಸಂಪರ್ಕವಾಗುವ ಜಾಗದಲ್ಲಿ ವಿಭಾಜಕಗಳು ತೆರೆದಿರಬಾರದೆಂಬ ಆದೇಶವಿದ್ದರೂ, ನಿಟ್ಟೂರಿಗೆ ಹೋಗುವ ಒಳರಸ್ತೆ ಇರುವ ಸದ್ರಿ ಜಾಗದಲ್ಲಿ ವಿಭಾಜಕವನ್ನು ತೆರೆದು ಕೊಟ್ಟಿರುವುದು, ಯಾರ ಲಾಭಕ್ಕಾಗಿ ಎಂದು ಉಡುಪಿ ಜಿಲ್ಲಾಧಿಕಾರಿಯವರು ಉತ್ತರಿಸಬೇಕಾಗಿದೆ.

ಆನೆ ನಡೆದದ್ದೇ ದಾರಿ ಎಂಬಂತೆಯೇ, ಉಡುಪಿ ಜಿಲ್ಲಾಡಳಿತ ತಾನು ಮಾಡಿದ್ದೇ ಸರಿ ಎಂಬಂತೇ ವರ್ತಿಸುತ್ತಿದೆ. ಇದಕ್ಕೆ ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಲ್ಲಿ ನಿರ್ಮಿಸಿರುವ ಟ್ರಾಫಿಕ್ ಸಿಗ್ನಲ್ ಜೀವಂತ ಸಾಕ್ಷಿ. ಇದು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಸಂಪೂರ್ಣ ಇಳಿಜಾರು ಪ್ರದೇಶ ಇರುವಲ್ಲಿ ಯಾರಾದರೂ ಸಿಗ್ನಲ್ ನಿರ್ಮಿಸುತ್ತಾರೆ. ಸದ್ರಿ ಸಿಗ್ನಲ್ ಅನ್ನು ಕೂಡಲೇ ರದ್ದುಗೊಳಿಸಿ ಅದನ್ನು ಟೈಗರ್ ಸರ್ಕಲ್ ಬಳಿ ವರ್ಗಾಯಿಸಬೇಕಾಗಿ ಸಂಘಟನೆ ಈ ಮೂಲಕ ಜಿಲ್ಲಾಧಿಕಾರಿಯವರಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದೆ.

ಸಂಘಟನೆಯ ಆಗ್ರಹ:-

ಶಾಂತಿಯ ಸಂದೇಶವನ್ನು ಸಾರಿದಂತಹ ಗುರುನಾರಾಯಣ ಜಗತ್ತಿಗೆ ಸ್ವಾಮೀಜಿಯವರ ಹೆಸರಿನ ವೃತ್ತವು. ಸದ್ರಿ ಸ್ಥಳದಿಂದ ಕೇವಲ 200 ಮೀಟರ್ ದೂರದಲ್ಲಿ ಆವೃತ್ತವನ್ನು ಅಭಿವೃದ್ಧಿ ಮಾಡಿ ಈಗಿರುವ ವಿಭಾಜಕವನ್ನು ಮುಚ್ಚಿ ಎಲ್ಲಾ ವಾಹನಗಳು ನಾರಾಯಣಗುರು ವೃತ್ತದಲ್ಲಿಯೇ ತಿರುಗಿ ಬರುವಂತೆ ಮಾಡಬೇಕೆಂದು ಸಂಘಟನೆ ಈ ಮೂಲಕ ಆಗ್ರಹಿಸುತ್ತದೆ

ಇಲ್ಲವಾದಲ್ಲಿ ಕಾನೂನುಹೋರಾಟ ಮಾಡಿಕೊಳ್ಳಬೇಕಾದದ್ದು ಅನಿವಾರ್ಯ. ಎಂದು ಕರ್ನಾಟಕ ರಕ್ಷಣಾ ವೇದಿಕೆ ವೇದಿಕೆ ಪ್ರವೀಣ್ ಶೆಟ್ಟಿ ಬಣದ. ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ. ಗೌರವಾಧ್ಯಕ್ಷ ಅನ್ಸಾರ್ ಅಹ್ಮದ್. ಜಿಲ್ಲಾ ಉಪಾಧ್ಯಕ್ಷರಾದ ನಿಜಾಮ್. ಜಿಲ್ಲಾ ಉಪಾಧ್ಯಕ್ಷರಾದ ಸುಧೀರ್ ಪೂಜಾರಿ. ಮಹಿಳಾ ಅಧ್ಯಕ್ಷರಾದ ಜ್ಯೋತಿ. ಮಹಿಳಾ ಸಲಹೆಗಾರರ ಸವಿತಾ ಮಾಧ್ಯಮಗಳಿಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು

Leave a comment

Leave a Reply

Your email address will not be published. Required fields are marked *

Related Articles

ನಿಟ್ಟೂರಿನ ಶ್ರೀ ಧೂಮಾವತಿ ಯುವಕ ಮಂಡಲಕ್ಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಕಿಟ್ ವಿತರಣೆ

ನಿಟ್ಟೂರು: ವಿಷ್ಣುಮೂರ್ತಿ ನಗರದಲ್ಲಿರುವ ಶ್ರೀ ಧೂಮಾವತಿ ಯುವಕ ಮಂಡಲ(ರಿ)ಕ್ಕೆ ಉಡುಪಿ ಜಿಲ್ಲೆಯ ಯುವ ಸಬಲೀಕರಣ ಮತ್ತು...

ಅಕ್ರಮವಾಗಿ ಮರಳು ಕದ್ದು ಸಾಗಾಟ ಮಾಡಿದ ಲಘು ಸಂಘಟನೆ ಅಪರಾಧ ಪ್ರಕರಣ; ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು

ಉಡುಪಿಟಿಪ್ಪರ್ ಲಾರಿಯಲ್ಲಿ ಅಂಪಾರಿನ ದಕ್ಕೆಯಿಂದ ಬ್ರಹ್ಮಾವರ ಕಡೆಗೆ ಆಕ್ರಮವಾಗಿ ಮರಳನ್ನು ಕದ್ದು ತುಂಬಿಸಿಕೊoಡು ಸಾಗಾಟ ಮಾಡಿ...

ಉಡುಪಿ ಸಾಸ್ತಾನ ಟೋಲ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಅಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ

ಉಡುಪಿ ಬ್ರಹ್ಮಾವರ:ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿಯು ನಿವೃತ್ತ ಯೋಧರೊಂದಿಗೆ ಟೋಲ್ ವಸೂಲು ಮಾಡುವಾಗ ಅನುಚಿತವಾಗಿ ನಡೆದುಕೊಂಡಿರುವುದು...

ಲೋಕಾಯುಕ್ತರ ಹೆಸರಿನಲ್ಲಿ ನಗರಸಭೆ ಕಂದಾಯ ಅಧಿಕಾರಿಗೆ ಫೋನ್ ಕರೆ ಮಾಡಿ ಬೆದರಿಕೆ ಪ್ರಕರಣ ದಾಖಲು

ಲೋಕಾಯುಕ್ತರ ಹೆಸರಿನಲ್ಲಿ ನಗರ ಸಭೆ ಅಧಿಕಾರಿಗೆ ಫೋನ್ ಕರೆ ಮಾಡಿ ಬೆದರಿಕೆ ಪ್ರಕರಣ ದಾಖಲು ಕಪಿಲ್‌...