ಕರ್ಜೆ ದುರ್ಗಾಪರಮೇಶ್ವರಿ ದೇವಸ್ಥಾನ ಏಪ್ರಿಲ್ 14 ವಾರ್ಷಿಕ ಜಾತ್ರಾ ಮಹೋತ್ಸವ ಗೆಂಡ ಸೇವೆ ರಥೋತ್ಸವ

39

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕರ್ಜೆ,ವಾರ್ಷಿಕ ಜಾತ್ರಾ ಮಹೋತ್ಸವ, ಗೆಂಡಸೇವೆ ರಥೋತ್ಸವ ದಿನಾಂಕ ದಿನಾಂಕ : 13-04-2026ನೇ ಸೋಮವಾರದಿಂದ 16-04-2026ನೇ ಗುರುವಾರದ ವರೆಗೆ ನಡೆಯಲಿದೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವರ ಕೃಪೆಗೆ ಪಾತ್ರರಾಗುವಂತೆ ವಿನಂತಿ

ದಿನಾಂಕ: 13-04-2026ನೇ ಸೋಮವಾರಬೆಳಿಗ್ಗೆ ಗಂಟೆ 8.30ರಿಂದ : ಶ್ರೀ ಮಹಾಗಣಪತಿ ದೇವರಿಗೆ ನವಕುಂಭ ಸ್ನಪನ, ಅಧಿವಾಸ ಹೋಮ, ಮಹಾಪೂಜೆ ಇತ್ಯಾದಿಗಳು. ಧರ್ಮಚಾವಡಿ ಪಂಜುರ್ಲಿ ಹಾಗೂ ಸ್ವಾಮಿ ನಾಗ ಇತ್ಯಾದಿಗಳಿಗೆನವಕುಂಭ ಸಪನ ಹೋಮ, ಅಭಿಷೇಕ, ಮಹಾಪೂಜೆ

ಸಂಜೆ ಗಂಟೆ 6.30ಕ್ಕೆ: ಶ್ರೀ ಸನ್ನಿಧಿಯಲ್ಲಿಉತ್ಸವ ಬಲಿ ಮುಹೂರ್ತ, ಕಲ್ಕುಡ ಕಟ್ಟೆ ಅಮ್ಮನವರು: ಅಡಕತ್ತಾಯ ಭದ್ರಕಾಳಿ, ಮಲಯಾಳಿ ಬೊಬ್ಬರ್ಯ ಇತ್ಯಾದಿ ಧರ್ಮದೈವಗಳಿಗೆ ನವಕುಂಭ ಸ್ಥಾಪನ ಹೋಮ ಸ್ನಪನ -ಮಹಾಪೂಜೆ ಇತ್ಯಾದಿಗಳು

ದಿನಾಂಕ: 14-04-2026ನೇ ಮಂಗಳವಾರ

ಪೂವಾಹ್ನ ಗಂಟೆ 8-15ಕ್ಕೆ : ಒದಗುವ ವೃಷಭ ಲಗ್ನ ಸುಮೂಹೂರ್ತದಲ್ಲಿ ಧ್ವಜಾರೋಹಣ, ಗಣಯಾಗ, ಬ್ರಹ್ಮ, ಪಂಜುರ್ಲಿ ಇತ್ಯಾದಿ ಧರ್ಮ ದೈವಗಳಿಗೆ ನವ ಕುಂಭ ಸ್ಥಾಪನ, ಹೋಮ ಸ್ನಪನ. ಮಹಾಪೂಜೆ ಇತ್ಯಾದಿಗಳು, ಮಹಾಸಾನಿಧ್ಯಕ್ಕೆ ತತ್ವ ಹೋಮ ಸ್ನಪನ ಮಹಾಪೂಜೆ, ಅನ್ನಸಂತರ್ಪಣೆ ಇತ್ಯಾದಿಗಳು

ಸಂಜೆ ಗಂಟೆ 7.00ರಿಂದ : ಧರ್ಮ ಚಾವಡಿಯಿಂದ ಉತ್ಸವ ಮೂಹೂರ್ತ ಪ್ರಾರಂಭ, ದೀವಟಿಗೆಬೆಳಕಿನ ಮಹಾಪೂಜೆ – ಗುಂಡುಸೇವೆ ರಾತ್ರಿ ಗಂಟೆ 8.30ಕ್ಕೆ : ಅನ್ನಸಂತರ್ಪಣೆ ರಾತ್ರಿ ಗಂಟೆ 11.00ರಿಂದ : ಗೆಂಡಸೇವೆ, ಮಹಾರಂಗ ಪೂಜೆ, ರಥೋತ್ಸವ, ಕೆರೆ ದೀಪೋತ್ಸವ, ಮುಖಭೇಟಿ, ಧ್ವಜಾವರೋಹಣ, ಭೂತಬಲಿ, ಇತ್ಯಾದಿಗಳು

ದಿನಾಂಕ: 15-04-2026ನೇ ಬುಧವಾರಬೆಳಿಗ್ಗೆ: ಪಂಜುರ್ಲಿ ಕೋಲ, ತುಲಾಭಾರ, ದೇವಸ್ಥಾನದ ನಾಗಬನದಲ್ಲಿ ಆಶ್ಲೇಷಾ ಬಲಿ, ಮಹಾಪೂಜೆ, ಶ್ರೀ ಸನ್ನಿಧಿಯಲ್ಲಿ ಚಂಡಿಕಾಯಾಗ, ಮಹಾಪೂಜೆ – ಮಹಾಪ್ರಸಾದ ವಿತರಣೆ ನಡೆಯಲಿರುವುದು ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಅಧ್ಯಕ್ಷರಾದ ಕಿರಣ್ ಕುಮಾರ್ ಶೆಟ್ಟಿ ಭಕ್ತಾಭಿಮಾನಿಗಳಲ್ಲಿ ವಿನಂತಿಸಿದ್ದಾರೆ

Leave a comment

Leave a Reply

Your email address will not be published. Required fields are marked *

Related Articles

ಉಡುಪಿ ಜಿಲ್ಲೆಯಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ನಾಳೆ ವ್ಯತ್ಯಯ ಗ್ರಾಹಕರಲ್ಲಿ ಸಹಕರಿಸುವಂತೆ ಮೆಸ್ಕಾಂ ಮನವಿ

ಉಡುಪಿ ಜಿಲ್ಲೆಯಾದ್ಯಂತ  ವಿದ್ಯುತ್ ರಸ್ತೆ ಕಾಮಗಾರಿ ನಡೆಯುವುದರಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ  ಎಂದು ಮೆಸ್ಕಾಂ ವಿಭಾಗದಿಂದ...

ನಿಟ್ಟೂರಿನ ಶ್ರೀ ಧೂಮಾವತಿ ಯುವಕ ಮಂಡಲಕ್ಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಕಿಟ್ ವಿತರಣೆ

ನಿಟ್ಟೂರು: ವಿಷ್ಣುಮೂರ್ತಿ ನಗರದಲ್ಲಿರುವ ಶ್ರೀ ಧೂಮಾವತಿ ಯುವಕ ಮಂಡಲ(ರಿ)ಕ್ಕೆ ಉಡುಪಿ ಜಿಲ್ಲೆಯ ಯುವ ಸಬಲೀಕರಣ ಮತ್ತು...