ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ದೇವಸ್ಥಾನದ 122 ಗ್ರಾಂ ತೂಕದ ಚಿನ್ನದ ಹಾರ ಕಳವುಆರೋಪ

35

ಬೆಂಗಳೂರು: ಧರ್ಮರಾಯ ದೇವಸ್ಥಾನದ ಕರಗ ಮತ್ತು ದೈನಂದಿನ ನಿರ್ವಹಣೆಗೆ ರಾಜ್ಯ ಸರ್ಕಾರ ನೇಮಿಸಿರುವ ಮುಜರಾಯಿ ಇಲಾಖೆಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಧರ್ಮರಾಯ ದೇವಸ್ಥಾನ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷ ಕೆ. ಸತೀಶ್ ಅವರು, ಕಾರ್ಯನಿರ್ವಹಣಾಧಿಕಾರಿ (EO) ನಾಗರಾಜ್ ಅವರು ದೇವಸ್ಥಾನದಿಂದ 122 ಗ್ರಾಂ ತೂಕದ ಚಿನ್ನದ ಹಾರವನ್ನು ಕಳವು ಮಾಡಿದ್ದಾರೆ ಎಂದು ಮಂಗಳವಾರ ಆರೋಪಿಸಿದರು.
ಇದಲ್ಲದೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗಳಲ್ಲಿ ಪ್ರತಿ ರೂ.10 ಲಕ್ಷಕ್ಕೆ ರೂ.2 ಲಕ್ಷ ಕಮಿಷನ್ ಕೇಳಲಾಗುತ್ತಿದೆ ಎಂದೂ ಅವರು ದೂರಿದ್ದಾರೆ. ಈ ಘಟನೆ ಅಕ್ಟೋಬರ್ ಮೊದಲ ವಾರದಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆರ್‌ಟಿಐ ಮೂಲಕ ಪಡೆಯಲು ಎರಡು ತಿಂಗಳು ಸಮಯ ಬೇಕಾಯಿತು. ಆ ವಿಡಿಯೋದಲ್ಲಿ ಅಧಿಕಾರಿ ಚಿನ್ನದ ಸರವನ್ನು ಜೇಬಿನಲ್ಲಿ ಇಟ್ಟುಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸತೀಶ್ ಅವರು ಹೇಳಿದ್ದಾರೆ. ಆದರೆ ಆರೋಪ ಎದುರಿಸುತ್ತಿರುವ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಅವರು, ಆಭರಣವನ್ನು ‘ಪರೀಕ್ಷೆ’ಗಾಗಿ ದೇವಸ್ಥಾನದ ಹೊರಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಹೇಳಿದ್ದು, ತಾನು ನಿರ್ದೋಷಿ ಎಂದು ಹೇಳಿದ್ದಾರೆ. ಈ ಕುರಿತು ಮುಜರಾಯಿ ಆಯುಕ್ತ ಶರತ್ ಬಿ. ಅವರು ಪ್ರತಿಕ್ರಿಯಿಸಿ, ಸಂಬಂಧಿತ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ದೂರುದಾರರಿಂದ ಆರೋಪಗಳಿಗೆ ಪೂರಕ ಸಾಕ್ಷ್ಯಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಎಲ್ಲ ಆರೋಪಗಳನ್ನೂ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮುಜರಾಯಿ ಇಲಾಖೆಯೊಳಗೆ ಕೆಲ ಅಧಿಕಾರಿಗಳು ಒಂದೇ ಘಟಕದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ತಹಶೀಲ್ದಾರ್ ಅರವಿಂದ್ ಬಾಬು, ಹೆಚ್ಚುವರಿ ಉಪ ಆಯುಕ್ತ ಜಗದೀಶ್, ಮಾಜಿ ಕಾರ್ಯನಿರ್ವಹಣಾಧಿಕಾರಿ ನವೀನ್ ಹಾಗೂ ಸಹಾಯಕ ಆಯುಕ್ತ ಪುರುಷೋತ್ತಮ್ ಎಲ್ಲರೂ ಸೇರಿ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಕೆಲಸ ಮಾಡಿಸುತ್ತಿದ್ದಾರೆಂದು ಸತೀಶ್ ಅವರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅರವಿಂದ್ ಬಾಬು, ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ನಡುವೆ ಬೆಂಗಳೂರು ಕರದ ಅನುದಾನದ ವಿಷಯದಲ್ಲೂ ವಿವಾದ ತೀವ್ರಗೊಂಡಿದೆ.

ಕಳೆದ ಎರಡು ವರ್ಷಗಳಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕರಗ ಹಬ್ಬಕ್ಕೆ ರೂ.1.5 ಕೋಟಿ ಅನುದಾನ ನೀಡುತ್ತಿತ್ತು. ಕಳೆದ 10 ವರ್ಷಗಳಿಂದ ದೇವಸ್ಥಾನ ಮುಜರಾಯಿ ಇಲಾಖೆಯ ವಶದಲ್ಲಿದೆ. ಈಗ ಆ ಹಣದ ಮೇಲೂ ಇಲಾಖೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ ಎಂದು ಸತೀಶ್ ಆರೋಪಿಸಿದ್ಜಾರೆ. ಹಬ್ಬದ ವೇಳೆ ದೇವಾಲಯಕ್ಕೆ ಸೇವೆ ಒದಗಿಸಿದ ವ್ಯಾಪಾರಿಗಳಿಗೆ ಹಣ ಪಾವತಿಯಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಹೂ ಸರಬರಾಜು ಮಾಡಿದ ರವಿಚಂದ್ರನ್ ಮತ್ತು ವಿದ್ಯುತ್ ಅಲಂಕಾರ ವ್ಯವಸ್ಥೆ ಒದಗಿಸಿದ ಸುಜಾತಾ ಸೇರಿದಂತೆ ಹಲವು ವಿತರಕರಿಗೆ ಅಧಿಕಾರಿಗಳು ಕಮಿಷನ್ ಬೇಡುತ್ತಿದ್ದಾರೆ. ಬೇಡಿಕೆ ಈಡೇರದಿದ್ದರೆ ಕೆಲಸ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆಂದು ಸತೀಶ್ ಆರೋಪಿಸಿದ್ದಾರೆ. ಈ ಆರೋಪಗಳಿಗೆ ಮುಜರಾಯಿ ಇಲಾಖೆ ಸ್ಪಷ್ಟನೆ ನೀಡಿದೆ. ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, BBMPಯಿಂದ ಬಂದ ರೂ.60,96,879ರ ಎರಡನೇ ಕಂತಿನ ಅನುದಾನದಲ್ಲಿ ಮೂರನೇ ಭಾಗವನ್ನು ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಇಲ್ಲದೆ ನೇರವಾಗಿ ದೇವಸ್ಥಾನ ನಿರ್ವಹಣಾ ಸಮಿತಿಯ ಖಾತೆಗೆ ವರ್ಗಾಯಿಸಲಾಗಿದೆ. 2023ರಲ್ಲಿ ನಗರ ಉಪ ಆಯುಕ್ತರ ಆದೇಶದಂತೆ ಅನುದಾನ ನಿರ್ವಹಣೆ ಮುಜರಾಯಿ ಇಲಾಖೆಗೆ ವರ್ಗಾಯಿಸಲಾಗಿತ್ತು.
ಸಂಬಂಧಿತ ಅನುಮತಿ ಇಲ್ಲದೆ ಹಣ ವರ್ಗಾವಣೆ ಮಾಡಿರುವುದು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾರ್ಥ ದತ್ತಿಗಳ ನಿಯಮಗಳು, 2002ರ ನಿಯಮ 33(3) ಹಾಗೂ ಕರ್ನಾಟಕ ಆರ್ಥಿಕ ಸಂಹಿತೆ, 1958ರ ಸೆಕ್ಷನ್ 14ರ ಉಲ್ಲಂಘನೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸತೀಶ್, ಹಣವನ್ನು ನನ್ನ ವೈಯಕ್ತಿಕ ಖಾತೆಗೆ ಅಲ್ಲ, ದೇವಸ್ಥಾನ ನಿರ್ವಹಣಾ ಸಮಿತಿಯ ಖಾತೆಗೆ ಮಾತ್ರ ವರ್ಗಾಯಿಸಲಾಗಿದೆ,” ಎಂದು ಸ್ಪಷ್ಟನೆ ನೀಡಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಕರ್ನಾಟಕದಲ್ಲಿ ಜನರ ಭಾವನೆಗಳನ್ನು ಗುರುತಿಸಲಾಗದಷ್ಟು ಬಿಜೆಪಿ ಹೈಕಮಾಂಡ್ ದುರ್ಬಲವಾಗಿದೆ ಬಸನಗೌಡ ಪಾಟೀಲ್ ಯತ್ನಾಳ್

“ಬೆಂಗಳೂರು: ಕರ್ನಾಟಕದಲ್ಲಿ ಜನರ ಭಾವನೆಗಳನ್ನು ಗುರುತಿಸಲಾಗದಷ್ಟು ಬಿಜೆಪಿ ಹೈಕಮಾಂಡ್ ದುರ್ಬಲವಾಗಿದೆ ಎಂದು ನನಗನ್ನಿಸುತ್ತದೆ ಎಂದು ಬಸನಗೌಡ...

ಪೊಲೀಸ್ ಠಾಣೆಯಲ್ಲಿ ಲಂಚ ಸ್ವೀಕಾರ ಲೋಕಾಯುಕ್ತ ದಾಳಿ ಪಿಎಸ್ಐ ಹಾಗೂ ಓರ್ವ ಕಾನ್ಸ್ಟೇಬಲ್ ಬಂಧನ

“ಬಾಗಲಕೋಟೆ: ಲೋಕಾಯುಕ್ತ ಪೊಲೀಸರು ಬುಧವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ ಮೇಲೆ...

ಎಸ್ ಎಸ್ ಎಲ್ ಸಿ ತೃತೀಯ ಭಾಷೆ ವಿವಾದ: ಸಿಎಂ ಸಲಹೆ ಪಡೆಯಲು ಮುಂದಾದ ಸಚಿವ ಮಧು ಬಂಗಾರಪ್ಪ ಬದಲಾಗಲಿದೆ ಸರ್ಕಾರದ ಮುಂದಿನ ನಡೆ

ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಅಂಕ/ಗ್ರೇಡ್ ವ್ಯವಸ್ಥೆ ಕುರಿತು ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್...

ಕೊಡಗು, ಬೀದರ್, ಬಳ್ಳಾರಿ, ಚಿತ್ರದುರ್ಗ ಮತ್ತು ಮೈಸೂರು ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭ್ರಷ್ಟ ಅಧಿಕಾರಿಗೆ...