ಆರ್‌ಸಿಬಿ ಕ್ರಿಕೆಟಿಗನ ಹೊಸ ಇನ್ನಿಂಗ್ಸ್, ಬಹುಕಾಲದ ಗೆಳತಿ ಜೊತೆ ಸಪ್ತಪದಿ ತುಳಿದ ಬ್ಯಾಟರ್
ಆರ್‌ಸಿಬಿ ಕ್ರಿಕೆಟಿಗ ಮದುವೆಯಾಗಿದ್ದಾರೆ. ತಮ್ಮ ಬಹುಕಾಲದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ಧೂರಿ ಮದುವೆ ಫೋಟೋಗಳು ಹೊರಬಂದಿದೆ. ಜಿತೇಶ್ ಶರ್ಮಾ ಸೇರಿದಂತೆ ಹಲವು ಆರ್‌ಸಿಬಿ ಕ್ರಿಕೆಟಿಗರು ಶುಭಕೋರ...

ಆರ್‌ಸಿಬಿ ಕ್ರಿಕೆಟಿಗ ಮದುವೆಯಾಗಿದ್ದಾರೆ. ತಮ್ಮ ಬಹುಕಾಲದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ಧೂರಿ ಮದುವೆ ಫೋಟೋಗಳು ಹೊರಬಂದಿದೆ. ಜಿತೇಶ್ ಶರ್ಮಾ ಸೇರಿದಂತೆ ಹಲವು ಆರ್‌ಸಿಬಿ ಕ್ರಿಕೆಟಿಗರು ಶುಭಕೋರಿದ್ದಾರೆ.
ಆರ್‌ಸಿಬಿ ಸ್ಫೋಟಕ ಬ್ಯಾಟ್ಸ್‌ಮನ್ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹೌದು, 2025ರಲ್ಲಿ ಆರ್‌ಸಿಬಿ ತಂಡದ ಭಾಗವಾಗಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ ಒಲಿವಿಯಾ ಜೊತೆ ಮದುವೆಯಾಗಿದ್ದಾರೆ. ಅದ್ಧೂರಿ ಮದುವೆ ಸಮಾರಂಭದ ಫೋಟೋ, ವಿಡಿಯೋಗಳು ಹೊರಬಂದಿದೆ. ಇದೀಗ ಕ್ರಿಕೆಟಿಗರು ಸ್ಫೋಟಕ ಬ್ಯಾಟರ್‌ಗೆ ಶುಭಕೋರಿದ್ದಾರೆ.
ಲಿಯಾಮ್ ಲಿವಿಂಗ್‌ಸ್ಟೋನ್ ಮದುವೆ ಪ್ಲಾನ್ ಕೊನೆಯ ಕ್ಷಣದಲ್ಲಿ ಹಲವು ಬದಲಾವಣೆ ಕಂಡಿದೆ. ಹವಾಮಾನ ವೈಪರಿತ್ಯದಿಂದ ಲಿಯಾಮ್ ಲಿವಿಂಗ್‌ಸ್ಟೋನ್ ಮದುವೆ ಕೊನೆ ಕ್ಷಣದಲ್ಲಿ ಸ್ಥಳ, ದಿನಾಂಕಗಳನ್ನು ಬದಲಿಸಲಾಗಿತ್ತು. ಸ್ಪೇನ್‌ನ ಡಿಯಾ ಮಲ್ಲೋರ್ಕಾದಲ್ಲಿ ಮದುವೆಯಾಗಿದ್ದಾರೆ. ಲಿಯಾಮ್ ಹಾಗೂ ಒಲಿವಿಯಾ ಪ್ಲಾನ್ ಪ್ರಕಾರ ಮದುವೆ ಸಮಾರಂಭ ಆಯೋಜಿಸಲು ಸಾಧ್ಯವಾಗಿಲ್ಲ.
ಹವಾಮಾನದಲ್ಲಿ ಆದ ಭಾರಿ ಬದಲಾವಣೆಯಿಂದ ಮದುವೆ ಸ್ಥಳವನ್ನು ಅನಿವಾರ್ಯವಾಗಿ ಬದಲಿಸಬೇಕಾಯಿತು. ಹೀಗಾಗಿ ಆಪ್ತರು ಸೇರಿದಂತೆ ಹಲವರಿಗೆ ತೊಂದರೆಯಾಗಿದೆ. ಮದುವೆಗೆ ಹಾಜರಾಗಬೇಕಿದ್ದ ಹಲವರಿಗೆ ಸಾಧ್ಯವಾಗಲಿಲ್ಲ ಎಂದು ಲಿಯಾಮ್ ಲಿವಿಂಗ್‌ಸ್ಟೋನ್ ಹೇಳಿದ್ದಾರೆ. ಆಪ್ತರು, ಕುಟುಂಬಸ್ಥರು ಸೇರಿದಂತೆ ಕೆಲವೇ ಕೆಲವು ಮಂದಿ ಸಮ್ಮುಖದಲ್ಲಿ ಬಾಳಸಂಗಾತಿಯನ್ನು ವರಿಸಿದ್ದಾರೆ.
ಇಂಗ್ಲೆಂಡ್ ಕ್ರಿಕೆಟಿಗ ಲಿವಿಂಗ್‌ಸ್ಟೋನ್ ಮದುವೆಯಲ್ಲಿ ಕೆಲ ಗೊಂದಲ ನಿರ್ಮಾಣವಾದರೂ ಎಲ್ಲರ ಪ್ರೀತಿಗೆ ಧನ್ಯವಾದ ಎಂದು ವಿಲಿಂಗ್‌ಸ್ಟೋನ್ ಹೇಳಿದ್ದಾರೆ. 2025ರಲ್ಲಿ ಆರ್‌ಸಿಬಿ ಸೇರಿಕೊಂಡ ಲಿಯಾಮ್ ಲಿವಿಂಗ್‌ಸ್ಟೋನ್ ಅಬ್ಬರಿಸಲು ವಿಫಲರಾದರು. ನಿರೀಕ್ಷಿತ ಅವಕಾಶ ಹಾಗೂ ಪ್ರದರ್ಶನ ಮೂಡಿಬರಲಿಲ್ಲ. 10 ಪಂದ್ಯಗಳಿಂದ ಲಿಯಾಮ್ ಲಿವಿಂಗ್‌ಸ್ಟೋನ್ 112 ರನ್ ಸಿಡಿಸಿದ್ದಾರೆ. ಜೊತೆಗೆ 2 ವಿಕೆಟ್ ಕಬಳಿಸಿದ್ದಾರೆ.
2026ರಲ್ಲಿ ಲಿವಿಂಗ್‌ಸ್ಟೋನ್ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡಿದ್ದರು. ಆದರೆ ಕೇವಲ ಎರಡು ಇನ್ನಿಂಗ್ಸ್ ಆಡಿದ ಲಿಯಾಮ್ ಲಿವಿಂಗ್‌ಸ್ಟೋನ್ 15 ರನ್ ಸಿಡಿಸಿ ನಿರಾಸೆ ಮೂಡಿಸಿದ್ದಾರೆ. ಇದೀಗ ಲಿಯಾಮ್ ಹೊಸ ಬದುಕು ಆರಂಭಿಸಿದ್ದಾರೆ. ಹಲವು ಅಡೆತಡೆಗಳ ನಡುವೆ ಲಿಯಾಮ್ ಬಾಳ ಸಂಗಾತಿ ಕೈಹಿಡಿದಿದ್ದಾರೆ.




