ಮುಖ್ಯ ವಿಷಯಕ್ಕೆ ಹೋಗಿ
The Karnataka Today
10 Oct
ಸುದ್ದಿ
ಸುದ್ದಿ

ಮಮತಾ ಬ್ಯಾನರ್ಜಿ: ರೈಮ್ಸ್ ಮೂಲಕ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವ್ಯಂಗ್ಯ

ದೆಹಲಿಯ ಜಂತರ್ ಮಂತರ್ ಪ್ರತಿಭಟನೆಗೆ ತೆರಳುತ್ತಿದ್ದ ಸಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ಮುಖ್ಯ ಚುನಾವಣಾ ಆಯುಕ್ತರನ್ನು ವ್ಯಂಗ್ಯವಾಡಿ ಮಮತಾ ಬ್ಯಾನರ್ಜಿ ಹಾಡಿರುವ 'ಜಾನಿ ಜಾನಿ' ರೈಮ್ಸ್ ವ...

'ಜಾನಿ ಜಾನಿ ಯೆಸ್ ಪಾಪಾ, SIR ನೋ ಪಾಪಾ..' ಜಂತರ್ ಮಂತರ್ ಪ್ರತಿಭಟನೆ ನಡುವೆಯೇ ಮಮತಾ ರೈಮ್ಸ್ ವಿಡಿಯೋ ವೈರಲ್
ಹಂಚಿಕೊಳ್ಳಿ:

ದೆಹಲಿಯ ಜಂತರ್ ಮಂತರ್‌(Janatar mantar)ನಲ್ಲಿ 'ಜಂತರ್ ಮಂತರ್ 2.0' ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಅಭಿಜಿತ್ ದೀಪ್ಕೆ(Abhijith deepke) ಸೇರಿ ಸಿಜೆಪಿ ಪಕ್ಷದ ಹಲವು ನಾಯಕರನ್ನು ದೆಹಲಿ ಪೊಲೀಸರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಇದೇ ವೇಳೆ ಪ್ರಕಾಶ್ ರಾಜ್ ಎಸ್ಕೇಪ್ ಆಗಿದ್ದಾರೆ.

ಈ ಎಲ್ಲ ಬೆಳವಣಿಗೆ ನಡುವೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಕ್ಕಳಿಗೆ ಪ್ರಿಯವಾದ ರೈಮ್ಸ್ ಬಳಸಿ ಎಸ್‌ಐಆರ್ ಕುರಿತು ಹಾಡಿರುವ ರೈಮ್ಸ್ ವೈರಲ್ ಆಗಿದೆ.

'ಜಾನಿ ಜಾನಿ ಹೌದು ಪಾಪಾ, ಜ್ಞಾನೇಶ್ ಕುಮಾರ್..

ಮಮತಾ ಬ್ಯಾನರ್ಜಿಯವರು, ಎಲ್‌ಕೆಜಿ ಮಕ್ಕಳ ಪ್ರಾಸ ಪದ ರೈಮ್ಸ್ ಬಳಸಿಕೊಂಡು 'ಜಾನಿ-ಜಾನಿ ಯೆಸ್ ಪಾಪಾ' ಬಳಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವ್ಯಂಗ್ಯವಾಡಿದ್ದಾರೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಶರದ್ಚಂದ್ರ ಪವಾರ್) ಸಂಸದೆ ಸುಪ್ರಿಯಾ ಸುಳೆ ಅವರು ಬ್ಯಾನರ್ಜಿಯವರ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಹಂಚಿಕೊಂಡಿದ್ದಾರೆ.

ಮಮತಾ ದೀದಿ ಯಾವಾಗಲೂ ಅದ್ಭುತ! ಹೃದಯದಿಂದ ಬಂದ ಸಂದೇಶವಿದು. ಹಾಸ್ಯದ ದಾಟಿಯಿದ್ದರೂ ಪ್ರಜಾಪ್ರಭುತ್ವ ಉಳಿವಿನ ಪ್ರಶ್ನೆ. ಪ್ರಜಾಪ್ರಭುತ್ವ ಉಳಿದರೆ ಭಾರತ ಉಳಿದಂತೆ ಎಂದು ದು ಬರೆದು ಸುಪ್ರಿಯಾ ಸುಳೆ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಮಮತಾ ಬ್ಯಾನರ್ಜಿ ಜನಪ್ರಿಯ ಇಂಗ್ಲಿಷ್ ಪ್ರಾಸ ಜಾನಿ-ಜಾನಿ ಯೆಸ್ ಪಾಪಾ ದ ಸಾಲುಗಳನ್ನು ಹಾಡುವುದು ಕೇಳಬಹುದು.

ಜಾನಿ ಜಾನಿ ಹೌದು ಪಾಪಾ,

SIR: ನೋ ಪಾಪಾ,

ರಿಸೈನ್ ನೀಡಿ: ಹೌದು, ಪಾಪಾ ಹೀಗೆ ಸಾಗುತ್ತೆ.

ಈ ಕವಿತೆಯ ಮೂಲಕ ಮಮತಾ ಬ್ಯಾನರ್ಜಿ ಅವರು ಎಸ್‌ಐಆರ್ ಪ್ರಕ್ರಿಯೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಬಿಜೆಪಿ ಸರ್ಕಾರಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.

ಮಮತಾ ಇಂದು ಪ್ರತಿಭಟನೆಯಲ್ಲಿ ಭಾಗಿಯಾಗ್ತಾರಾ?

ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸಬಹುದು ಎಂದು ಗುರುವಾರ ಕೋಲ್ಕತ್ತಾದಲ್ಲಿ ಹೇಳಿದ್ದರು. ಆದರೆ ಈ ನಿಟ್ಟಿನಲ್ಲಿ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.

ಹಂಚಿಕೊಳ್ಳಿ: