Gen-Z ಪ್ರತಿಭಟನೆ: ಸರ್ಕಾರ ಉರುಳಿಸಿದ 5 ದೇಶಗಳಿವು!
ದೆಹಲಿಯಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆ ಮತ್ತು ಪ್ರಪಂಚದಾದ್ಯಂತ ನಡೆಯುತ್ತಿರುವ ಜೆನ್-ಜಿ ವಿದ್ಯಾರ್ಥಿ ಹೋರಾಟಗಳ ಪ್ರಭಾವವನ್ನು ಈ ಲೇಖನ ವಿವರಿಸುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ಸಂಘಟಿತರಾಗುವ ಯುವಜನತೆ, ಬಾ...

Delhi CJP Protest: ಇಂಟರ್‌ನೆಟ್ ನೋಡುತ್ತಿದ್ದರೆ ಅಲ್ಲೆಲ್ಲ ಫ್ರಾನ್ಸ್ ನಲ್ಲಿ ಯುವಕರು ವಿದ್ಯಾರ್ಥಿಗಳು ದೇಶದ ಶಿಕ್ಷಣ ವ್ಯವಸ್ಥೆಗೆ ಹಾನಿ ಉಂಟು ಮಾಡುವ, ತಮ್ಮ ಭವಿಷ್ಯಕ್ಕೆ ಕೊಳ್ಳಿ ಇಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದರೆ ಎಲ್ಲಿ ನೋಡಿದ್ರೂ ಪ್ರತಿಭಟನೆ, ದೊಂಬಿ, ಹಿಂಸಾಚಾರ ನಡೆಯುತ್ತಿದೆ. ಕಳೆದ ಬಾರಿಯೂ ಇದೇ ರೀತಿ ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳೂ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.
ವಿದ್ಯಾರ್ಥಿ ಪ್ರತಿಭಟನೆ ಲಾಭ ಪಡೆದ ರಾಜಕೀಯ ನಾಯಕರು, ಕ್ರಿಮಿನಲ್‌ಗಳು, ಉಗ್ರರು ವಿದ್ಯಾರ್ಥಿಗಳ ವೇಶದಲ್ಲಿ ನುಸುಳಿ ರಾಷ್ಟ್ರ ರಾಜಧಾನಿ ದೆಹಲಿ ಹಿಂಸಾಚಾರ ನಡೆಸಿದ್ದರು. ಇದೀಗ ಮತ್ತೆ ಇಂದು ದೆಹಲಿ ಸಿಜೆಪಿ ಪ್ರತಿಭಟನೆ ನಡೆಸಲಿದೆ. ಈ ಜೆನ್-ಜಿ ಹೋರಾಟಗಳು ಅವರು ರಾಜಕೀಯದಲ್ಲಿ ಬೆಳೆಯುತ್ತಿರುವ ಪ್ರಭಾವ ತೋರಿಸುವಂತಿದೆ. ಇದುವರೆಗೆ ಎಷ್ಟು ರಾಷ್ಟ್ರಗಳು ಜೆನ್-ಜಿ ಪ್ರತಿಭಟನೆಯಲ್ಲಿ ಉರುಳಿವೆ? ಎಂಬುದನ್ನು ಇಲ್ಲಿ ತಿಳಿಯೋಣ.
ಬಾಂಗ್ಲಾದೇಶದಿಂದ ಶ್ರೀಲಂಕಾದವರೆಗೆ, ಜೆನ್-ಜಿ ಹೋರಾಟ, ಪ್ರತಿಭಟನೆಯಿಂದಾಗಿ ಸರ್ಕಾರಗಳು ಉರುಳಿವೆ. ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಜನರಲ್ ಝಡ್ ನೇತೃತ್ವದ ಚಳುವಳಿಗಳು ಸರ್ಕಾರಗಳನ್ನು ಉರುಳಿಸಿವೆ.
ಜನರಲ್ ಝಡ್ ಪ್ರತಿಭಟನೆಗಳ ಹೆಚ್ಚಳ
ಸಾಮಾನ್ಯವಾಗಿ 1997 ಮತ್ತು 2012 ರ ನಡುವೆ ಜನಿಸಿದವರನ್ನು Gen Z ಎಂದು ಗುರುತಿಸಲಾಗುತ್ತೆ. ಈ ಪೀಳಿಗೆಯು ರಾಜಕೀಯ ಚಟುವಟಿಕೆಯಲ್ಲಿ ಹೆಚ್ಚು ಪ್ರಭಾವಶಾಲಿಯಾಗಿದೆ. ಅವರು ಒಟ್ಟಾಗಿ ಸೇರುವಲ್ಲಿ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ವೈರಲ್ ಹ್ಯಾಶ್‌ಟ್ಯಾಗ್‌ಗಳು ಮತ್ತು ಬೀದಿ ಪ್ರತಿಭಟನೆ ಮಾಡುವುದರಲ್ಲಿ ನಿಷ್ಣಾತರಾಗಿದ್ದಾರೆ. ದೇಶದಲ್ಲಿ ನಡೆಯುವ ಭ್ರಷ್ಟಾಚಾರ, ನಿರುದ್ಯೋಗ, ಆರ್ಥಿಕ ಸಂಕಷ್ಟ, ಕಳಪೆ ಸಾರ್ವಜನಿಕ ಸೇವೆಗಳು ಮತ್ತು ಸ್ವಾತಂತ್ರ್ಯ, ಹಕ್ಕಿನ ಮೇಲಿನ ನಿರ್ಬಂಧಗಳು ವಿರುದ್ಧ ಪ್ರತಿಭಟನೆ ನಡೆಸುತ್ತಾರೆ. ಇದು ಭಾರತ ಅಥವಾ ದೆಹಲಿ ಪ್ರತಿಭಟನೆ ಅಷ್ಟೇ ಅಲ್ಲ ಪ್ರಪಂಚದಾದ್ಯಂತ ಯುವಜನರ ನೇತೃತ್ವದ ಪ್ರತಿಭಟನೆಗಳಿಗೆ ಸಾಮಾನ್ಯ ಕಾರಣಗಳಾಗಿವೆ.
ಜೆನ್-ಜಿ ಪ್ರತಿಭಟನೆಗಳಿಂದ ಸರ್ಕಾರ ಉರುಳಿದ 5 ದೇಶಗಳು
ಬಾಂಗ್ಲಾದೇಶ
ಬಾಂಗ್ಲಾದೇಶ 2024 ರಲ್ಲಿ ಯುವಜನರ ನೇತೃತ್ವದ ಪ್ರಮುಖ ದಂಗೆಗೆ ಸಾಕ್ಷಿಯಾಯಿತು. ಆರಂಭದಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗಗಳಲ್ಲಿ ಕೋಟಾ ವ್ಯವಸ್ಥೆಯನ್ನು ವಿರೋಧಿಸಿ ನ್ಯಾಯಯುತ ಉದ್ಯೋಗಾವಕಾಶಕ್ಕಾಗಿ ಒತ್ತಾಯಿಸಿದ ಪ್ರತಿಭಟನೆ ನಡೆಸಿದರು ಆದರೆ ಸರ್ವಧಿಕಾರಿ ಧೋರಣೆಯಿಂದ ಅದಾಗಲೇ ನಾಗರಿಕರ ಕೋಪ ಹೆಚ್ಚಾಗಿದ್ದರಿಂದ ವಿದ್ಯಾರ್ಥಿ ಚಳುವಳಿಯು ನಾಗರಿಕರ ಚಳವಳಿಯಾಗಿ ಹಿಂಸಾಚಾರಕ್ಕೆ ತಿರುಗಿ ಶೇಖ್ ಹಸೀನಾ ಅವರ ಸರ್ಕಾರದ ಪ್ರತಿಭಟನೆ ತೀವ್ರಗೊಂಡು ಅಂತಿಮವಾಗಿ ಆಗಸ್ಟ್ 2024 ರಲ್ಲಿ ಹಸೀನಾ ರಾಜೀನಾಮೆ ನೀಡಿ ದೇಶವನ್ನು ತೊರೆಯುವಂತಾಯ್ತು. ಈ ದಂಗೆ ವಿದ್ಯಾರ್ಥಿಗಳ ಬೇಡಿಕೆಗಳು ರಾಷ್ಟ್ರವ್ಯಾಪಿ ರಾಜಕೀಯ ಚಳುವಳಿಯಾಗಿ ಹೇಗೆ ರೂಪಾಂತರಗೊಳ್ಳಬಹುದು ಎಂಬುದಕ್ಕೆ ನಿದರ್ಶನವಾಯಿತು.
..ನೇಪಾಳ
ಇತ್ತೀಚೆಗೆ ಅಂದ್ರೆ 2025ರ ಸೆಪ್ಟೆಂಬರ್‌ನಲ್ಲಿ ನೇಪಾಳದಲ್ಲಿ ನಡೆದ ಜೆನ್-ಝಡ್ (Gen Z) ಪ್ರತಿಭಟನೆ ದೇಶದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಯ್ತು. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಸೇರಿ ಹಲವು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಸರ್ಕಾರ ನಿರ್ಬಂಧಿಸಿದ್ದಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆಗಿಳಿದರು. ಮೊದಲಿಗೆ ಸರ್ಕಾರ ನಿರ್ಲಕ್ಶ್ಯ ಮಾಡಿತು. ಬಳಿಕ ಇದೇ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡು, ಸೋಷಿಯಲ್ ಮೀಡಿಯಾಗಾಗಿ ನಡೆಸಿದ್ದ ಪ್ರತಿಭಟನೆ ಬಳಿಕ ಸರ್ಕಾರದಲ್ಲಿನ ಭ್ರಷ್ಟಾಚಾರ, ರಾಜಕೀಯ ನಾಯಕರ ಕುಟುಂಬಗಳ ಅದ್ದೂರಿ ಜೀವನ, ಸ್ವಜನಪಕ್ಷಪಾತ ಮತ್ತು ಯುವಕರಿಗೆ ಉದ್ಯೋಗಾವಕಾಶಗಳ ಕೊರತೆಯ ವಿರುದ್ಧದ ಪ್ರತಿಭಟನೆಯಾಗಿ ಬದಲಾಯಿತು.
ಪ್ರತಿಭಟನೆ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಸಂಭವಿಸಿ ಹಲವರು ಮೃತಪಟ್ಟರು, ಸಾವಿರಾರು ಜನರು ಗಾಯಗೊಂಡರು. ಪರಿಸ್ಥಿತಿ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದರು. ಬಳಿಕ ಸರ್ಕಾರ ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿತು. ಈ ಯುವಜನರ ಚಳವಳಿ ನೇಪಾಳದ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಗೆ ದಾರಿ ಮಾಡಿಕೊಟ್ಟಿತು.
ಶ್ರೀಲಂಕಾ
ಶ್ರೀಲಂಕಾದಲ್ಲಿ 2022ರಲ್ಲಿ ನಡೆದ ಜೆನ್-ಜಿ (Gen Z) ಯುವಕರ ಪ್ರತಿಭಟನೆ ದೇಶದ ರಾಜಕೀಯ ವ್ಯವಸ್ಥೆಯನ್ನೇ ಅಲುಗಾಡಿಸಿಬಿಟ್ಟಿತು! ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಆಹಾರ ಪದಾರ್ಥ ಮತ್ತು ಔಷಧಗಳ ತೀವ್ರ ಕೊರತೆ ಉಂಟಾಗಿತ್ತು. ಲೋಡ್ ಶೆಡ್ಡಿಂಗ್, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಇದು ಮುಂದೆ ಸರ್ಕಾರದ ವಿರುದ್ಧ ನಾಗರಿಕರು ದಂಗೆ ಏಳುವಂತಾಯ್ತು. ಈ ಪರಿಸ್ಥಿತಿಗೆ ಸರ್ಕಾರದ ಆರ್ಥಿಕ ನಿರ್ವಹಣೆಯ ವೈಫಲ್ಯ, ಭ್ರಷ್ಟಾಚಾರವೇ ಕಾರಣ ಎಂದು ಆರೋಪಿಸಿ ಬೀದಿಗಿಳಿದರು. ‘ಗೋಟಾ ಗೋ ಹೋಮ್’ (Gotabaya Rajapaksa ಅಧಿಕಾರ ಬಿಡಲಿ) ಎಂಬ ಘೋಷಣೆಯೊಂದಿಗೆ ಆರಂಭವಾದ ಈ ಚಳವಳಿ ‘ಅರಗಲಯ’ (Aragalaya) ಎಂದೇ ಪ್ರಸಿದ್ಧವಾಯಿತು. 2022ರ ಜುಲೈನಲ್ಲಿ ಪ್ರತಿಭಟನಾಕಾರರು ರಾಜಧಾನಿ ಕೊಲಂಬೊದಲ್ಲಿರುವ ಅಧ್ಯಕ್ಷರ ನಿವಾಸ ಹಾಗೂ ಪ್ರಮುಖ ಸರ್ಕಾರಿ ಕಟ್ಟಡಗಳಿಗೆ ನುಗ್ಗಿದರು, ಹಿಂಸಾಚಾರಗಳು ನಡೆದವು. ಇದರ ಪರಿಣಾಮವಾಗಿ ಅಧ್ಯಕ್ಷ ಗೊಟಬಯ ರಾಜಪಕ್ಸ ದೇಶ ರಾಜೀನಾಮೆ ನೀಡಬೇಕಾಯ್ತು.
ಮಡಗಾಸ್ಕರ್
ಮಡಗಾಸ್ಕರ್‌ನಲ್ಲೂ ಸಹ ಜೆ-ಝಡ್ ಯುವಕರು ವಿದ್ಯುತ್, ನೀರಿನ ಕೊರತೆ, ಭ್ರಷ್ಟಾಚಾರ ಮತ್ತು ಹದಗೆಡುತ್ತಿರುವ ಜೀವನಮಟ್ಟದ ವಿರುದ್ಧ ನಿರಂತರವಾಗಿ ಪ್ರತಿಭಟಿಸಿದರು. ಪ್ರತಿಭಟನಾಕಾರರು ಅಧಿಕಾರಿಗಳಿಂದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಂತೆ ಸಾರ್ವಜನಿಕರ ಕೋಪ ಹೆಚ್ಚಾಯಿತು. ಈ ಬಿಕ್ಕಟ್ಟು ಅಂತಿಮವಾಗಿ ವಿಶ್ವಸಂಸ್ಥೆಯ ಹಸ್ತಕ್ಷೇಪ, ರಾಜಕೀಯ ನಾಯಕತ್ವದ ಬದಲಾವಣೆಗೆ ಕಾರಣವಾಯಿತು.
ಪೆರು
ಪೆರುವಿನಲ್ಲಿ ಭ್ರಷ್ಟಾಚಾರ, ಅಭದ್ರತೆ ಮತ್ತು ಪಿಂಚಣಿ ವ್ಯವಸ್ಥೆ ವಿರುದ್ಧ ಜೆನ್-ಝಡ್ ಯುವಕರು ಬೀದಿಗಿಳಿದು ಹೋರಾಟ ಮಾಡಿದರು.ಇಲ್ಲಿಯೂ ಸಾಮಾಜಿಕ ಮಾಧ್ಯಮ ಬಳಸಿಕೊಂಡೇ ಸಂಘಟಿತರಾಗಿ ಹೋರಾಟ ನಡೆಸವ ಮೂಲಕ ಜಪಾನಿನ ಮಂಗಾ ಕಾಮಿಕ್ ಒನ್ ಪೀಸ್‌ನ ಕಾಲ್ಪನಿಕ ಪಾತ್ರವಾದ ಮಂಕಿ ಡಿ. ಲಫ್ಫಿ ನ್ಯಾಯ, ಪ್ರತಿರೋಧದ ಸಂಕೇತವಾಯಿತು.
ಸರ್ಕಾರದ ನೀತಿ ಬದಲಾಯಿಸಿದ ಜೆನ್-ಝಡ್ ಪ್ರತಿಭಟನೆಗಳು
ಜೆನ್-ಝಡ್ ಪ್ರತಿಭಟನೆಗಳಿಂದ ಸರ್ಕಾರಗಳು ಉರುಳಿವೆ, ಕೆಲವು ದೇಶಗಳಲ್ಲಿ ಸರ್ಕಾರ ಉರುಳುದಿದ್ದರೂ ಸರ್ಕಾರದಲ್ಲಿನ ನೀತಿ ಬದಲಾಯಿಸುವಲ್ಲಿ ದೇಶದ ಯುವಕರು ಮಹತ್ವದ ಪಾತ್ರವಹಸಿದ್ದಾರೆ. ಕೀನ್ಯಾದಲ್ಲಿ, 2024 ರ ಹಣಕಾಸು ಮಸೂದೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದು ಅಧ್ಯಕ್ಷ ವಿಲಿಯಂ ರುಟೊ ಅವರನ್ನು ವಿವಾದಾತ್ಮಕ ಶಾಸನ ಹಿಂದೆಗೆದುಕೊಳ್ಳಲು ಕಾರಣವಾಯ್ತು, ಇಂಡೋನೇಷ್ಯಾದಲ್ಲಿ, 2025 ರ ಪ್ರತಿಭಟನೆಗಳು ಸಂಸದರ ಭತ್ಯೆಗಳು, ಸವಲತ್ತುಗಳು ಮತ್ತು ಆರ್ಥಿಕ ನೀತಿಗಳನ್ನು ಪ್ರಶ್ನಿಸಿದವು.
ಇದೀಗ ಶಿಕ್ಷಣ ವ್ಯವಸ್ಥೆ, ಎಸ್‌ಐಆರ್, ಮತದಾನ ಹಕ್ಕುಗಳಿಗೆ ಭಾರತದಲ್ಲೂ ಜೆನ್-ಝಡ್ ಬೀದಿಗಿಳಿದಿದ್ದು, ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆಯಿಂದಾಗಿ ಸಾವಿರಾರು ಪೊಲೀಸರು ನಿಯೋಜಿಸಿಲಾಗಿದೆ. ಮೆಟ್ರೋ, ರೈಲ್ವೆ ಮಾರ್ಗ ಗಳನ್ನ ಬಂದ್ ಮಾಡಲಾಗಿದೆ.




