ಮುಖ್ಯ ವಿಷಯಕ್ಕೆ ಹೋಗಿ
The Karnataka Today
6 Oct
Latest
ಕರಾವಳಿ

ಮಿಯ್ಯಾರು ಕುಂಟಿ ಬೈಲುನಲ್ಲಿ ಹಗ್ಗ ಜಗ್ಗಾಟ

ನ್ಯೂ ಫ್ರೆಂಡ್ಸ್ ಕುಂಟಿ ಬೈಲು ಇವರ ಪ್ರಾಯೋಜಕತ್ವದಲ್ಲಿ ಅಕ್ಟೋಬರ್ 2 ಗಾಂಧಿ ಜಯಂತಿಯಂದು ಹಗ್ಗಜಗ್ಗಾಟ ಕಾರ್ಯಕ್ರಮವು ಕುಂಟಿಬೈಲಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಕಾರ್ಯಕ...

· 1 ನಿಮಿಷ ಓದು· ಉಡುಪಿ
ಮಿಯ್ಯಾರು ಕುಂಟಿ ಬೈಲುನಲ್ಲಿ ಹಗ್ಗ ಜಗ್ಗಾಟ
ಹಂಚಿಕೊಳ್ಳಿ:

ನ್ಯೂ ಫ್ರೆಂಡ್ಸ್ ಕುಂಟಿ ಬೈಲು ಇವರ ಪ್ರಾಯೋಜಕತ್ವದಲ್ಲಿ ಅಕ್ಟೋಬರ್ 2 ಗಾಂಧಿ ಜಯಂತಿಯಂದು ಹಗ್ಗಜಗ್ಗಾಟ ಕಾರ್ಯಕ್ರಮವು ಕುಂಟಿಬೈಲಿನಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಕಾರ್ಯಕ್ರಮ ನಡೆಯಿತು.

ಪ್ರಶಾಂತ್ ಶೆಟ್ಟಿ ಕುಂಟಿ ಬೈಲು ನೇತೃತ್ವದಲ್ಲಿ ನಡೆದ ಈ ಪಂದ್ಯಾಟದಲ್ಲಿ 28 ಪುರುಷರ ತಂಡ ಹಾಗೂ 7 ಮಹಿಳೆಯರ ತಂಡಗಳು ಭಾಗವಹಿಸಿದ್ದವು.

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಶೆಟ್ಟಿ, ಸ್ಥಳೀಯರಾದ ಮಂಜುನಾಥ್ ನಾಯಕ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ನವೀನ್ ಬಂಗೇರ, ಮನ್ಮಥ ಶೆಟ್ಟಿ, ಮಿಥುನ್ ಶೆಟ್ಟಿ, ಮೇಘನ್ ರಾಜ್ , ಪ್ರವೀಣ್ ಕೋಟ್ಯಾನ್, ದಿನೇಶ್ ಶೆಟ್ಟಿ, ಸಂತೋಷ ಬಂಗೇರ, ರಮಾನಾಥ್ ಪೂಜಾರಿ, ಅವಿನಾಶ್ ಶೆಟ್ಟಿ ಕಾರ್ಕಳ, ಸಂತೋಷ ಅಂಚನ್, ರಾಜೇಶ್ ಖಂಡಿಗ, ಗೋಪಾಲ ಕಾರ್ಕಳ, ಪಲ್ಲವಿ ಸುರೇಶ್, ರಮಕಾಂತ್ ಶೆಟ್ಟಿ, ಶಿವರಾಜ್ ಶೆಟ್ಟಿ,, ಗಣೇಶ್ ಭಟ್, ಭರತೇಶ್ ಶೆಟ್ಟಿ, ಸುಧಾಕರ್ ಬಂಗೇರ, ಕೃಷ್ಣ ಶೆಟ್ಟಿ ಮತ್ತಿತರರು ಭಾಗವಹಿಸಿದ್ದಾರೆ.

ಕುಂಟಿ ಬೈಲು ನ್ಯೂ ಫ್ರೆಂಡ್ಸ್ ಬಳಗ ಕಾರ್ಯಕ್ರಮದ ಯಶಸ್ಸಿಗಾಗಿ ತೊಡಗಿಸಿ ಕೊಂಡಿತ್ತು.

ಈ ಬಗ್ಗೆ ಅಕ್ಟೋಬರ್ 3 ರಂದು ಮಾಧ್ಯಮ ಬಿಂಬ ವೆಬ್ಸೈಟ್ ನಲ್ಲಿ ರಾಮಕಾಂತ್ ಶೆಟ್ಟಿಯವರ ಸಹಕಾರದಿಂದ ಕಾರ್ಯಕ್ರಮ ನಡೆದಿದೆ ಎಂದು ವರದಿ ಪ್ರಕಟಣೆ ಆಗಿತ್ತು. ಸ್ಥಳೀಯರಾದ ನೆಲ್ಸನ್ ಯಾನೆ ನೆಚ್ಚು ಎಂಬವರು ಈ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕ್ರೀಡಾ ಕಾರ್ಯಕ್ರಮದ ನೇತೃತ್ವ ವಹಿಸಿ ಕೊಂಡಿದ್ದ ಪ್ರಶಾಂತ್ ಶೆಟ್ಟಿ ತಿಳಿಸಿದ್ದಾರೆ

ಹಂಚಿಕೊಳ್ಳಿ: