ನವದೆಹಲಿಯಲ್ಲಿ ನಡೆಯುತ್ತಿರುವ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ: ಶ್ರೇಯಸ್ ಧರ್ಮಾಧಿಕಾರಿ ಗಾಯನ
ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ ದೆಹಲಿಯಲ್ಲಿ ಅಕ್ಟೋಬರ್ 16-20ರವರೆಗೆ ನಡೆಯುತ್ತಿದೆ. ಭಾರತೀಯ ಸಂಸ್ಕೃತಿ ಬಿಂಬಿಸುವ ಈ ಉತ್ಸವದಲ್ಲಿ ಅದ್ಧೂರಿ ದುರ್ಗಾಪೂಜೆ, ದಾಂಡಿಯಾ ನೈಟ್ಸ್, ಶ್ರೇಯಸ್ ಧರ್ಮಾಧಿಕಾರಿ, ನಿಜಾಮಿ ಬಂಧುಗಳ...

ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಿವಿ9 ನೆಟ್‌ವರ್ಕ್ ಆಯೋಜಿಸಿರುವ ಐದು ದಿನಗಳ ಸಾಂಸ್ಕೃತಿಕ ಉತ್ಸವವು ಅಕ್ಟೋಬರ್ 16ರಿಂದ ಅಕ್ಟೋಬರ್ 20ರವರೆಗೆ ನಡೆಯುತ್ತಿದೆ. ಅಕ್ಟೋಬರ್ 18ರಂದು ದುರ್ಗಾಪೂಜೆಯ ವಿಶೇಷ ಆಚರಣೆಗಳೊಂದಿಗೆ, ಸಂಗೀತಗಾರ ಶ್ರೇಯಸ್ ಧರ್ಮಾಧಿಕಾರಿ ಮತ್ತು ಬಿ.ಪಿ. ಸಿಂಗ್ ಅವರ ಗಾಯನ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಅಕ್ಟೋಬರ್ 20ರವರೆಗೆ ಪ್ರತಿದಿನ ಸಂಜೆ 6ರಿಂದ ರಾತ್ರಿ 10ರವರೆಗೆ ದಾಂಡಿಯಾ ನೈಟ್ಸ್ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ. ಭಾರತೀಯ ಸಂಸ್ಕೃತಿ, ಕಲೆ ಹಾಗೂ ವೈವಿಧ್ಯಮಯ ಆಹಾರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಈ ಉತ್ಸವವು ಕುಟುಂಬದವರಿಗೆ ಉತ್ತಮ ಅನುಭವ ನೀಡುತ್ತಿದೆ.




