ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಭಾರತ

ಇಂದೋರ್: ಗರ್ಬಾ ಕಾರ್ಯಕ್ರಮದಲ್ಲಿ ಬಾಲಕಿಗೆ ಕಿರುಕುಳ ನೀಡಿದ ಬಿಜೆಪಿ ನಾಯಕನ ಮೇಲೆ ಪೋಕ್ಸೋ ಕೇಸ್

ಇಂದೋರ್‌ (ಮಧ್ಯಪ್ರದೇಶ): ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಗರ್ಬಾ ನೃತ್ಯ ಕಾರ್ಯಕ್ರಮದ ವೇಳೆ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಹೊರಗೆ ತಳ್ಳಿದ ಮತ್ತು ಆಕೆಯೊಂದಿಗೆ ದುರ್ವರ್ತನೆ ತೋರಿದ ಆರೋಪದ ಮೇಲೆ ಸ್ಥಳೀಯ ಬಿಜೆಪಿ...

ಸಹೋದರಿಗೆ ಪಾಸ್ ಕೊಡಲು ಹೋದ ಬಾಲಕಿ ಮೇಲೆ ಅಮಾನವೀಯ ವರ್ತನೆ: ಬಿಜೆಪಿ ನಾಯಕನ ಮೇಲೆ ಪೋಕ್ಸೋ ಕೇಸ್
ಹಂಚಿಕೊಳ್ಳಿ:

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಗರ್ಬಾ ನೃತ್ಯ ಕಾರ್ಯಕ್ರಮದ ವೇಳೆ ಅಪ್ರಾಪ್ತ ಬಾಲಕಿಯೊಬ್ಬಳ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬಿಜೆಪಿ ಮಂಡಲ ಅಧ್ಯಕ್ಷ ಕಮಲ್ ಚೌಹಾಣ್ ವಿರುದ್ಧ ಹೀರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಸಹೋದರಿಗೆ ಪಾಸ್ ನೀಡಲು ತೆರಳಿದ್ದ ಬಾಲಕಿಯನ್ನು ಆರೋಪಿ ಸಾರ್ವಜನಿಕವಾಗಿ ತಳ್ಳಿ ಮಂಟಪದಿಂದ ಹೊರಹಾಕಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಪೋಕ್ಸೋ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಆದರೆ ಆರೋಪಿ ಕಮಲ್ ಚೌಹಾಣ್ ತಾನು ಜನಸಂದಣಿ ನಿಯಂತ್ರಿಸಲು ಯತ್ನಿಸಿದ್ದೆ ಹೊರತು ದುರುದ್ದೇಶ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಹಂಚಿಕೊಳ್ಳಿ: