ಯಲಹಂಕದಲ್ಲಿ ಅಳಿಯನಿಂದ ಅತ್ತೆಯ ಮೇಲೆ ಹಲ್ಲೆ: ಶರಣ್ಯ ಸಾವಿನ ಪ್ರಕರಣದ ಮರುತನಿಖೆಗೆ ಆಗ್ರಹ
ಮೊಮ್ಮಗಳನ್ನು ನೋಡಲು ಬಂದ ಅತ್ತೆ ಮೇಲೆ ಅಳಿಯನಿಂದ ಹಲ್ಲೆ ಮಾಡಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತಾಗಿ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಇನ್ನು ಇತ್ತೀಚೆಗೆ ಮಗಳು ಆತ್ಮಹತ್ಯೆ ಮಾ...

ಕೆಎಎಸ್ ಅಧಿಕಾರಿ ಎಂದು ಸುಳ್ಳು ಹೇಳಿ ಮದುವೆಯಾಗಿದ್ದ ಮಂಜುನಾಥ್, ಪತ್ನಿ ಶರಣ್ಯಳಿಗೆ ನೀಡಿದ ಕಿರುಕುಳದಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಸದ್ಯ ಮೊಮ್ಮಗಳನ್ನು ನೋಡಲು ಹೋದ ಅತ್ತೆ ಕವಿತಾ ಅವರ ಮೇಲೆ ಮಂಜುನಾಥ್ ಹಲ್ಲೆ ನಡೆಸಿದ್ದು, ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಶರಣ್ಯಳ ಇ-ಮೇಲ್ ಪರಿಶೀಲಿಸಿದಾಗ ಗಂಡನ ಅಕ್ರಮ ಸಂಬಂಧ ಮತ್ತು ಬೆದರಿಕೆಯ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿದೆ. ಇದರಿಂದಾಗಿ ಮಗಳ ಸಾವಿನ ಪ್ರಕರಣವನ್ನು ಮತ್ತೆ ತನಿಖೆ ನಡೆಸುವಂತೆ ಕವಿತಾ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.



