ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಝಾನ್ಸಿ ನ್ಯಾಯಾಲಯದಿಂದ ನಟಿ ರಾಖಿ ಸಾವಂತ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ

2010ರಲ್ಲಿ ರಾಖಿ ಸಾವಂತ್ ನಿರೂಪಣೆ ಮಾಡುತ್ತಿದ್ದ ‘ರಾಖಿ ಕಾ ಇನ್ಸಾಫ್’ ಎಂಬ ರಿಯಾಲಿಟಿ ಶೋನಲ್ಲಿ ಝಾನ್ಸಿಯ ಲಕ್ಷ್ಮಣ್ ಅಹಿರ್ವರ್ ಎಂಬ ಯುವಕ ಭಾಗವಹಿಸಿದ್ದರು. ಪತ್ನಿಯೊಂದಿಗಿನ ಕೌಟುಂಬಿಕ ಕಲಹಕ್ಕೆ ಪರಿಹಾರ ಕಂಡುಕೊಳ್ಳುವ...

Arrest Warrant: ರಾಖಿ ಸಾವಂತ್‌ ವಿರುದ್ಧ ಜಾಮೀನು ರಹಿತ ಅರೆಸ್ಟ್‌ ವಾರೆಂಟ್‌ ಜಾರಿ! 16 ವರ್ಷದ ಹಿಂದೆ ಏನು ನಡೆದಿತ್ತು ಗೊತ್ತಾ?
ಹಂಚಿಕೊಳ್ಳಿ:

ಹದಿನಾರು ವರ್ಷಗಳ ಹಿಂದೆ ಪ್ರಸಾರವಾದ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿದ್ದ ಲಕ್ಷ್ಮಣ್ ಅಹಿರ್ವರ್ ಎಂಬುವವರಿಗೆ ಸಾರ್ವಜನಿಕವಾಗಿ ಅವಮಾನ ಮಾಡಲಾಗಿದೆ ಎಂಬ ಆರೋಪದ ಮೇಲೆ ನಟಿ ರಾಖಿ ಸಾವಂತ್ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕಾರ್ಯಕ್ರಮದ ಬಳಿಕ ಮಾನಸಿಕವಾಗಿ ಕುಗ್ಗಿ ಅನಾರೋಗ್ಯಕ್ಕೀಡಾಗಿದ್ದ ಲಕ್ಷ್ಮಣ್ 2010ರ ನವೆಂಬರ್ 10ರಂದು ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಲಕ್ಷ್ಮಣ್ ಅವರ ತಾಯಿ ನೀಡಿದ್ದ ದೂರಿನ ಮೇರೆಗೆ ವಿಚಾರಣೆ ನಡೆಯುತ್ತಿದ್ದು, ಪದೇ ಪದೇ ನ್ಯಾಯಾಲಯಕ್ಕೆ ಗೈರುಹಾಜರಾದ ಕಾರಣ ರಾಖಿ ಸಾವಂತ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 1ರಂದು ನಡೆಯಲಿದೆ.

ಹಂಚಿಕೊಳ್ಳಿ: