ಮುಖ್ಯ ವಿಷಯಕ್ಕೆ ಹೋಗಿ
The Karnataka Today
10 Oct
ಸುದ್ದಿ
ಸಿನಿಮಾ

ನಂದಗೋಕುಲ: ಅಮ್ಮನ ಜೊತೆ ಸೀರಿಯಲ್ ನೋಡೋದೆ ಈಕೆಗಾಗಿ ಎಂದ ಯುವಕರು!

ನಂದಗೋಕುಲ ಧಾರಾವಾಹಿಯಲ್ಲಿ ಮೀನ ಪಾತ್ರದ ಮೂಲಕ ಮಿಂಚುತ್ತಿರುವ ನಟಿ ಮೇಘಾ ಎಸ್. ವಿ. ನಟನೆಯನ್ನು, ಸೌಂದರ್ಯವನ್ನು ಜನ ಮೆಚ್ಚಿಕೊಂಡಿದ್ದು, ನಾವು ಅಮ್ಮನ ಜೊತೆ ಸೀರಿಯಲ್ ನೋಡೋದೆ ಈಕೆಗಾಗಿ ಎಂದಿದ್ದಾರೆ ಯುವಕರು.

ಯುವಕರು ಅಮ್ಮನ ಜೊತೆ ಕನ್ನಡ ಸೀರಿಯಲ್ ನೋಡೋದು ಈ ಬೆಡಗಿಗಾಗಿಯಂತೆ!
ಹಂಚಿಕೊಳ್ಳಿ:

ನಂದಗೋಕುಲ ಧಾರಾವಾಹಿಯಲ್ಲಿ ಮೀನ ಪಾತ್ರದ ಮೂಲಕ ಮಿಂಚುತ್ತಿರುವ ನಟಿ ಮೇಘಾ ಎಸ್. ವಿ. ನಟನೆಯನ್ನು, ಸೌಂದರ್ಯವನ್ನು ಜನ ಮೆಚ್ಚಿಕೊಂಡಿದ್ದು, ನಾವು ಅಮ್ಮನ ಜೊತೆ ಸೀರಿಯಲ್ ನೋಡೋದೆ ಈಕೆಗಾಗಿ ಎಂದಿದ್ದಾರೆ ಯುವಕರು.

‘ನಂದಗೋಕುಲ’ ಧಾರಾವಾಹಿಯಲ್ಲಿ ಮೀನಾ ಪಾತ್ರದಲ್ಲಿ ಮೇಘಾ ಎಸ್ ವಿ ಯವರು ನಟಿಸುತ್ತಿದ್ದಾರೆ. ಇವರ ಪಾತ್ರಕ್ಕೆ ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಸ್ಕೋಪ್ ಇದೆ. ಅದೇ ರೀತಿ ಪಾತ್ರವನ್ನು ಮೇಘಾ ನಿಭಾಯಿಸಿಕೊಂಡು ಹೋಗುತ್ತಿರುವ ರೀತಿಯನ್ನು ಕೂಡ ಜನ ಇಷ್ಟಪಟ್ಟಿದ್ದಾರೆ.

ಮೀನಾ ಪಾತ್ರವನ್ನು ಕೇವಲ ತಾಯಂದಿರು ಮಾತ್ರವಲ್ಲ ಯುವಕರು ಸಹ ಇಷ್ಟಪಟ್ಟಿದ್ದಾರೆ. ತಾವು ಅಮ್ಮನ ಜೊತೆ ಕುಳಿತು ಸೀರಿಯಲ್ ನೋಡ್ತಿರೋದಕ್ಕೆ ಈ ಮುದ್ದು ಮೀನಮ್ಮಾನೆ ಕಾರಣ ಅಂತನೂ ಹೇಳುತ್ತಿದ್ದಾರೆ. ಅಷ್ಟೊಂದು ಇಷ್ಟ ಆಗಿದ್ದಾರೆ ಮೀನಾ.

ಮೀನಾ ಅಂದರೆ ನಂದಗೋಕುಲದ ಎರಡನೇ ಸೊಸೆಯದ್ದು ತುಂಬಾನೆ ಬಬ್ಲಿ ಪಾತ್ರ. ತಾನು ಎಷ್ಟೇ ನೋವು ಅನುಭವಿಸಿದ್ರೂ, ಬೇರೆಯವರಿಗೆ ನೋವಾಗಬಾರದು ಎಂದು ಬಯಸುವ ಪಾತ್ರ. ಮನೆಮಂದಿಯನ್ನೆಲ್ಲಾ, ತಮ್ಮ ಮುದ್ದು ಮಾತುಗಳಿಂದ ಪ್ರೀತಿಸುವಂತಹ ಮುದ್ದಾದ ಪಾತ್ರ ಮೀನಾದ್ದು.

ಮೀನಾ ಪಾತ್ರದ ಮೂಲಕ ಮೇಘಾ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಂತೆ, ಮನ ಮೆಚ್ಚಿದ ಸೊಸೆ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ. ಅತ್ತೆಯನ್ನು ಅಮ್ಮನಂತೆ ಕಾಣುವ, ಅತ್ತೆಯ ಕಾಲು ಎಳೆದು, ಕಾಟ ಕೊಡುವಂತಹ ಮುದ್ದಾದ ಪಾತ್ರ. ಜೊತೆಗೆ ಸ್ಟ್ರಿಕ್ಟ್ ಆಗಿರುವ ಮಾವನ ಮುಖದಲ್ಲೂ ತನ್ನ ತುಂಟಾಟದ ಮೂಲಕ ನಗು ತರಿಸಿದ ಸೊಸೆ ಮೀನಾ.

ಮೇಘಾ ಎಸ್ ವಿ ಈ ಹಿಂದೆ ‘ನಾಗಿಣಿ 2’, ‘ಇಷ್ಟದೇವತೆ’, ‘ಜೀವ ಹೂವಾಗಿದೆ’ ಧಾರಾವಾಹಿಯಲ್ಲಿ ನಟಿಸಿದ್ದರು. ‘ಅಡಚಣೆಗಾಗಿ ಕ್ಷಮಿಸಿ’ ಎಂಬ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಜೀವ ಹೂವಾಗಿದೆ ಧಾರಾವಾಹಿಯಲ್ಲಿ ಸಹ ನಟರಾಗಿದ್ದ ಸಂಜಯ್ ಗೌಡ ಜೊತೆ ಪ್ರೀತಿಸಿ ಮದುವೆಯಾದರು. ಸಂಜು ಜೊತೆ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿನ್ನರ್ ಕೂಡ ಆಗಿದ್ದರು ಮೇಘಾ.

ಹಂಚಿಕೊಳ್ಳಿ: