ನಟೋರಿಯಸ್ ಗರುಡ ಗ್ಯಾಂಗ್ ನ ರೌಡಿ ಇಸಾಕ್ ಮೇಲೆ ಗುಂಡೇಟು ದೇವರಾಜ್, ಪೊಲೀಸ್ ನಿರೀಕ್ಷಕರು,ಮಣಿಪಾಲ ಪೊಲೀಸ್ ಠಾಣೆ ಇವರುಹಲವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ
ಇಸಾಕ್ ನ ಪತ್ತೆಯ ಬಗ್ ವಿವಿಧ ತಂಡಗಳೊಂದಿಗೆ ವಿಶೇಷ ಕರ್ತವ್ಯದಲ್ಲಿ ತೆರಳಿರುವಾಗ
. ದಿನಾಂಕ 12/03/2025 ರಂದು ಆರೋಪಿತ 1) ಇಸಾಕ್, 2)ರಾಹಿದ್, 3)ಸಾವೆಲ್,4)ನಿಜಾಮುದ್ದೀನ್ ರವರನ್ನು ಗೌಡಗೆರೆ ಎಂಬಲ್ಲಿಂದ ವಶಕ್ಕೆ ಪಡೆದು ಇಸಾಕ್ ನನ್ನು ಖಾಸಗಿ ವಾಹನದಲ್ಲಿ ಕೂರಿಸಿಕೊಂಡು
ಇತರರನ್ನು ಜೊತೆಯಲ್ಲಿ ತಂದಿದ್ದ ವಿವಿಧ ವಾಹನಗಳಲ್ಲಿ ಕೂರಿಸಿಕೊಂಡು ಮಧ್ಯಾಹ್ನ 01:30 ಗಂಟೆಗೆ ಹೊರಟು ಸ ಮಣಿಪಾಲಕ್ಕೆ ಬರುತ್ತಿರುವಾಗ ಬೈಲೂರು ದಾಟಿ ಕಣಜಾರು ಕ್ರಾಸ್ ಹತ್ತಿರ
ಬರುತ್ತಿರುವಾಗ ಸಂಜೆ ವಾಹನದಲ್ಲಿದ್ದ ಆರೋಪಿ ಇಸಾಕ್ ನು ತನಗೆ ಮೂತ್ರ ಬರುತ್ತಿದೆ ಎಂದು ಹೇಳಿದ್ದು ಉಡುಪಿ ನಗರ ಠಾಣಾ ಸಿಬ್ಬಂದಿ ಹೇಮಂತರವರು ಆರೋಪಿಯ ಒಂದು ಕೈಗೆ ಹ್ಯಾಂಡ್ಕಪ್ ಮತ್ತು ಲೀಡಿಂಗ್ ಚೈನ್ ಅಳವಡಿಸಿ ಆತನೊಂದಿಗೆ ಕಾರಿನಿಂದ ಕೆಳಗೆ ಇಳಿದಾಗ
ಇಸಾಕ್ ನು ಹೇಮಂತ್ ರವರನ್ನು ತಳ್ಳಿ ಆತನ ಕೈಯಲ್ಲಿ ಇದ್ದ ಲೀಡಿಂಗ್ ಚೈನ್ ನ್ನು ಕಾರಿನ ಮೇಲೆ ಮತ್ತು ಹೇಮಂತ್ ರವರ ಮೇಲೆ ಬೀಸುತ್ತಾ ಕಣಜಾರು ಕಾಡಿನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕಾರಿನ ಹಿಂಬದಿ ಬಲಭಾಗದಲ್ಲಿ ಕುಳಿತಿದ್ದ ಪಿ.ಎಸ್.ಐ ವಿನಯ್ ಮತ್ತು ಚಾಲಕನ ಸೀಟಿನಲ್ಲಿ ಕುಳಿತಿದ್ದ ಹಿರಿಯಡ್ಕ ಪಿ.ಎಸ್.ಐ ಮಂಜುನಾಥ್ ಮರಬದರವರು
ಕಾರಿನಿಂದ ಇಳಿದು ಆರೋಪಿ ಇಸಾಕ್ ನನ್ನು ಹಿಡಿಯಲು ಪ್ರಯುತ್ನಿಸಿದಾಗ ಆತನು ಅವರ ಮೇಲೂ ಕೂಡಾ ಲೀಡಿಂಗ್ ಚೈನ್ ನ್ನು ಬೀಸುತ್ತಾ ನಿಮ್ಮೆಲ್ಲರನ್ನು ಕೊಂದುಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದು, ಈ ವೇಳೆ ಮಣಿಪಾಲ ಇನ್ಸ್ಪೆಕ್ಟರ್ ದೇವರಾಜ್ ಮತ್ತು ಜೊತೆಗಿದ್ದ ಅಧಿಕಾರಿ ಸಿಬ್ಬಂದಿಯವರು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಆರೋಪಿತನು
ಪುನಃ ಲೀಡಿಂಗ್ ಚೈನ್ ನ್ನು ಬೀಸುತ್ತಾ ಬೆದರಿಕೆ ಹಾಕಿ ಒಂದು ಕಲ್ಲನ್ನು ತೆಗೆದುಕೊಂಡು ಕಾರಿನ ಮುಂಭಾಗಕ್ಕೆ ಹೊಡೆದು ಜಖಂಗೊಳಿಸಿ ಪುನಃ ಮಣಿಪಾಲ್ ಇನ್ಸ್ಪೆಕ್ಟರ್ ದೇವರಾಜ್ ಮೇಲೆ ದಾಳಿ ಮಾಡಲು ಬಂದಾಗ ಇಲಾಖಾ ಪಿಸ್ತೂಲಿನಿಂದ ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದು
ಈ ವೇಳೆ ಆರೋಪಿ ಇಸಾಕ್ ನು ಪಿರ್ಯಾದಿದಾರರ ಕೈಯಲ್ಲಿ ಇದ್ದ ಪಿಸ್ತೂಲನ್ನು ಕಿತ್ತುಕೊಳ್ಳಲು ಮುನ್ನುಗ್ಗಿದಾಗ ಆತನ ಕಡೆ ಎರಡು ಸುತ್ತು ಗುಂಡು ಹಾರಿಸಿದ್ದು, ಒಂದು ಗುಂಡು ಅವನ ಎಡಗಾಲಿಗೆ ತಾಗಿ ಆತನು ಅಲ್ಲಿಯೇ ಕುಸಿದು ಬಿದ್ದಿರುತ್ತಾನೆ
ಈ ವೇಳೆಗೆ ಅಲ್ಲಿಗೆ ಬಂದ ಸಿಪಿಐ ಮಂಜುನಾಥ ಮಲ್ಪೆ ವೃತ್ತ ಹಾಗೂ ಪಿಎಸ್ ಐ ರವರಾದ ಪ್ರಸನ್ನ.ಎಂ.ಎಸ್, ಅನಿಲ್ ಕುಮಾರ.ಡಿ ರವರು ಆರೋಪಿತನನ್ನು ಮತ್ತು ಮಣಿಪಾಲ ಇನ್ಸ್ಪೆಕ್ಟರ್ ದೇವರಾಜ್ ಹಾಗೂ ಇನ್ನುಳಿದ ಅಧಿಕಾರಿ ಸಿಬ್ಬಂದಿಯವರನ್ನು ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ
Leave a comment