ಜನವರಿಯಲ್ಲಿ ಕಾರ್ಯಾರಂಭ; ಐತಿಹಾಸಿಕ ಮೈಲಿಗಲ್ಲು- ತೇಜಸ್ವಿ ಸೂರ್ಯ ಬೆಂಗಳೂರು ದೇಶದ ಐಟಿ ಆದಾಯದಲ್ಲಿ ಶೇಕಡ 40ರಷ್ಟು ಕೊಡುಗೆ ನೀಡುತ್ತದೆ.
ಅಷ್ಟೇ ಅಲ್ಲದೆ ಲಕ್ಷಗಟ್ಟಲೆ ಟೆಕ್ ವೃತ್ತಿಪರರಿಗೆ ನೆಲೆಯಾಗಿದೆ ಎಂದು ತೇಜಸ್ವಿ ಸೂರ್ಯ ಕಚೇರಿ ತಿಳಿಸಿದೆ.
2025ರ ಜನವರಿ ಎರಡನೇ ವಾರದಲ್ಲಿ ಅಮೆರಿಕ ರಾಯಭಾರ ಕಚೇರಿ ಸ್ಥಾಪಿಸುವುದು ಬೆಂಗಳೂರಿಗೆ ಐತಿಹಾಸಿಕ ಮೈಲಿಗಲ್ಲು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ರಾಯಭಾರ ಕಚೇರಿಯ ಕಾರ್ಯಾಚರಣೆಗಳು ಆರಂಭಿಸಲಾಗುತ್ತದೆ ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಅಂತಿಮವಾಗಿ ಘೋಷಿಸಿದ್ದರು.
ಇದಕ್ಕೆ ಹರ್ಷ ವ್ಯಕ್ತಪಡಿಸಿರುವ ತೇಜಸ್ವಿ ಸೂರ್ಯ ಅವರು, ರಾಯಭಾರ ಕಚೇರಿ ಉದ್ಘಾಟನೆಯು ಬೆಂಗಳೂರಿನ ನಾಗರಿಕರ ದೀರ್ಘಕಾಲದ ಬೇಡಿಕೆಯನ್ನು ಪರಿಹರಿಸಲು ವರ್ಷಗಳ ನಿರಂತರ ಪ್ರಯತ್ನಗಳನ್ನು ಸೂಚಿಸುತ್ತದೆ ಎಂದು ಹೇಳಿದರು.
2019ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ ತೆರೆಯಲು ತೇಜಸ್ವಿ ಸೂರ್ಯ ಒತ್ತಾಯಿಸುತ್ತಿದ್ದರು.
ನಗರದಲ್ಲಿ ಮೀಸಲಾದ ಅಮೆರಿಕ ಕಾನ್ಸುಲೇಟ್ ಇಲ್ಲದಿರುವುದು ಸಾವಿರಾರು ನಿವಾಸಿಗಳನ್ನು ಯುಎಸ್ ವೀಸಾ-ಸಂಬಂಧಿತ ಸೇವೆಗಳಿಗಾಗಿ ಚೆನ್ನೈ ಅಥವಾ ಹೈದರಾಬಾದ್‌ಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಿಸಿತ್ತು ಎಂದು ಹೇಳಿದೆ
ಭಾರತ-ಅಮೆರಿಕ ಸಂಬಂಧಗಳಲ್ಲಿ ಬೆಂಗಳೂರಿನ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಲು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ನವೆಂಬರ್ 2019ರಲ್ಲಿ ತೇಜಸ್ವಿ ಸೂರ್ಯ ಪತ್ರ ಬರೆದಿದ್ದರು. ಅಮೆರಿಕ ಮೂಲದ 370 ಕಂಪನಿಗಳು ಸೇರಿದಂತೆ ಬೆಂಗಳೂರಿನಲ್ಲಿ 750 ಬಹುರಾಷ್ಟ್ರೀಯ ಕಂಪನಿಗಳಿವೆ.
ಅಷ್ಟೇ ಅಲ್ಲದೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಅಮೆರಿಕಗೆ ಪ್ರಯಾಣಿಸುವು ಬೆಂಗಳೂರಿಗೆ ರಾಯಭಾರ ಕಚೇರಿಯ ಅವಶ್ಯಕತೆಯನ್ನು ಒತ್ತಿ ಹೇಳಿದ್ದರು. ಅಮೆರಿಕದಲ್ಲಿ ಭಾರತ ಇನ್ನೂ ಎರಡು ರಾಯಭಾರ ಕಚೇರಿ ತೆರೆಯಲಿದೆ:
ಪ್ರಧಾನಿ ಮೋದಿ ಘೋಷಣೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ವಿದೇಶಾಂಗ ಡಾ ಎಸ್ ಜೈಶಂಕರ್ ಅವರ ನಿರಂತರ ಬೆಂಬಲವಿಲ್ಲದೆ ಈ ಮೈಲಿಗಲ್ಲು ಸಾಧ್ಯವಾಗುತ್ತಿರಲಿಲ್ಲ.
ಬೆಂಗಳೂರಿನ ಹಿತಾಸಕ್ತಿಗಳನ್ನು ಉತ್ತೇಜಿಸುವ ಅವರ ಬದ್ಧತೆ ಈಡೇರಿಕೆಯನ್ನು ಖಚಿತಪಡಿಸಿದೆ. ಈ ದೀರ್ಘಾವಧಿಯ ಬೇಡಿಕೆಗೆ ನಾನು US ರಾಯಭಾರಿಗಳಾದ ಕೆನ್ನೆತ್ ಜಸ್ಟರ್ ಮತ್ತು ಎರಿಕ್ ಗಾರ್ಸೆಟ್ಟಿ ಅವರ ಅಚಲ ಬೆಂಬಲಕ್ಕಾಗಿ ಧನ್ಯವಾದ ಹೇಳುತ್ತೇನೆ ಎಂದು ಸಂಸದ ತೇಜಸ್ವಿ ಸೂರ್ಯ ಎಕ್ಸ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ ಸ್ಥಾಪನೆಯು ಸಾವಿರಾರು ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಉದ್ಯಮಿಗಳಿಗೆ ವೀಸಾ ಅರ್ಜಿ ಪ್ರಕ್ರಿಯೆಗಳನ್ನು ಸರಳಗೊಳಿಸುತ್ತದೆ.
ದ್ವಿಪಕ್ಷೀಯ ವ್ಯಾಪಾರ ಮತ್ತು ಸಹಯೋಗವನ್ನು ವರ್ಧಿಸುತ್ತದೆ. ವಿಶೇಷವಾಗಿ ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಮತ್ತು ವಾಣಿಜ್ಯ ಮತ್ತು ಜಾಗತಿಕ ಕೇಂದ್ರವಾಗಿ ಬೆಂಗಳೂರಿನ ಸ್ಥಾನವನ್ನು ಬಲಪಡಿಸುತ್ತದೆ ಎಂದು ಸೂರ್ಯ ಹೇಳಿದರು.
2025ಜನವರಿಯಲ್ಲಿ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಚೇರಿ ಪ್ರಾರಂಭ:: ಸಂಸದ ತೇಜಸ್ವಿ ಸೂರ್ಯ
ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ ಸ್ಥಾಪನೆ: