thekarnatakatoday.com
Crime

ಜಮ್ಮು ಕಾಶ್ಮೀರ ಸಹೋದ್ಯೋಗಿಯ ಹತ್ಯೆ ನಡೆಸಿ ಆತ್ಮಹತ್ಯೆಗೆ ಶರಣಾದ ಪೊಲೀಸ್

“ಜಮ್ಮು: ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಜಿಲ್ಲೆಯ ಕಾಳಿ ಮಠ ದೇವಾಲಯದ ಬಳಿ ವಾಹನವೊಂದರಲ್ಲಿ ಇಬ್ಬರು ಪೊಲೀಸರ ಮೃತದೇಹಗಳು ಪತ್ತೆಯಾಗಿದ್ದು, ಮೃತದೇಹದ ಮೇಲೆ ವ ಗುಂಡೇಟಿನ ಗಾಯಗಳು ಪತ್ತೆಯಾಗಿವೆ.

ಇಬ್ಬರೂ ಪೊಲೀಸ್ ಸಿಬ್ಬಂದಿಗಳು ಸೋಪೋರ್‌ನಿಂದ ಉಧಂಪುರದ ತಲ್ವಾರದಲ್ಲಿರುವ ತರಬೇತಿ ಕೇಂದ್ರಕ್ಕೆ ತೆರಳುತ್ತಿದ್ದಾಗ ಬೆಳಗ್ಗೆ 6.30ರ ಸುಮಾರಿದೆ ಘಟನೆ ನಡೆದಿದೆ ಎಂದು ಎಸ್‌ಎಸ್‌ಪಿ ಉಧಂಪುರ ಅಮೋದ್ ಅಶೋಕ್ ನಾಗ್‌ಪುರೆ ಅವರು ಹೇಳಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಘಟನೆಯಲ್ಲಿ ಎಕೆ -47 ರೈಫಲ್ ಬಳಸಿರುವುದು ಸಾಬೀತಾಗಿದೆ. ಇಬ್ಬರು ಇದು ಸೋದರ ಸಂಬಂಧಿಯಾಗಿದ್ದು, ಹತ್ಯೆ ಮತ್ತು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ ಎಂದು ತಿಳಿಸಿದ್ದಾರೆ.

ದಾಳಿಗೂ ಮುನ್ನ ಇಬ್ಬರ ನಡುವೆ ಜಗಳವಾಗಿದೆ. ಆರೋಪಿಯು ತನ್ನ ಎಕೆ 47 ಅಸಾಲ್ಟ್ ರೈಫಲ್ ಅನ್ನು ದಾಳಿಗೆ ಬಳಸಿದ್ದಾನೆ. ಘಟನೆಯಲ್ಲಿ ಇಬ್ಬರಿಗೆ ಮಾರಣಾಂತಿಕ ಗಾಯಗಳಾಗಿವೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದ ಆಯ್ಕೆ ದರ್ಜೆಯ ಕಾನ್ಸ್ಟೇಬಲ್ ಪ್ರಾಣಾಪಾಯದಿಂದ ಪಾರಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಉಧಂಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಮೋದ್ ಅಶೋಕ್ ನಾಗ್ಪುರೆ ತಿಳಿಸಿದ್ದಾರೆ.

Related posts

ಚಳಕಾಪುರಗ್ರಾಮ ಹನುಮ ಜಾತ್ರೆಯಲ್ಲಿ ಗುಂಪು ಘರ್ಷಣೆ ಶಾಂತಿ ಸ್ಥಾಪನೆಗೆ ಮನವಿ

The Karnataka Today

ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರನ ಕಲ್ಟ್ ಚಲನಚಿತ್ರಕ್ಕೆ ಆರಂಭದಲ್ಲಿ ಕಂಟಕ ಚಿತ್ರದ ಟೆಕ್ನಿಷಿಯನ್ ಆತ್ಮಹತ್ಯೆ ಯತ್ನ

The Karnataka Today

ಎಸ್ಎ ಡಿ ಮುಖ್ಯಸ್ಥ, ಮಾಜಿ ಡಿಸಿಎಂ ಸುಖ್‌ಬೀರ್ ಸಿಂಗ್ ಬಾದಲ್ ಹತ್ಯೆಗೆ ಯತ್ನ ಆರೋಪಿ ಬಂಧನ

The Karnataka Today

Leave a Comment