ಗುಂಡು ಹಾರಿಸಿದ ನರೇನ್ ಸಿಂಗ್ ಎಂಬ ವ್ಯಕ್ತಿಯನ್ನು ಗೋಲ್ಡನ್ ಟೆಂಪಲ್ ಹೊರಗೆ ನಿಂತಿದ್ದ ಕೆಲವರು ವಶಪಡಿಸಿಕೊಂಡಿದ್ದಾರೆ.
ಅಮೃತಸರ(ಪಂಜಾಬ್): ಅಮೃತಸರದ ಸ್ವರ್ಣಮಂದಿರ ಹೊರಗೆ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಹತ್ಯೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ.
ಗಾಲಿಕುರ್ಚಿಯಲ್ಲಿ ಕುಳಿತಿದ್ದ ಸುಖ್ ಬೀರ್ ಸಿಂಗ್ ಬಾದಲ್ ಮೇಲೆ ಗುರಿಯಾಗಿರಿಸಿ ವ್ಯಕ್ತಿ ಹಾರಿಸಿದ ಗುಂಡು ಗೋಡೆಗೆ ತಗುಲಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುಂಡು ಹಾರಿಸಿದ ನರೇನ್ ಸಿಂಗ್ ಎಂಬ ವ್ಯಕ್ತಿಯನ್ನು ಗೋಲ್ಡನ್ ಟೆಂಪಲ್ ಹೊರಗೆ ನಿಂತಿದ್ದ ಕೆಲವರು ವಶಪಡಿಸಿಕೊಂಡಿದ್ದಾರೆ.
ದಾಳಿ ನಡೆದಾಗ ಸುಖ್ ಬೀರ್ ಸಿಂಗ್ ಬಾದಲ್ ಗೋಲ್ಡನ್ ಟೆಂಪಲ್ ಹೊರಗೆ ‘ಸೇವಾದಾರ’ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಗೋಲ್ಡನ್ ಟೆಂಪಲ್‌ನಲ್ಲಿ ಅಕಾಲ್ ತಖ್ತ್ ನೀಡಿದ ‘ತಂಖಾ’ (ಧಾರ್ಮಿಕ ಶಿಕ್ಷೆ) ಸೇವೆ ಸಲ್ಲಿಸುತ್ತಿದ್ದರು.