ಮಂಗಳೂರು ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ರ‍್ಯಾಗಿಂಗ್ ಪ್ರಕರಣ ದಾಖಲು ಐವರು ವಿದ್ಯಾರ್ಥಿಗಳ ಬಂಧನ

12

ಮಂಗಳೂರು: ನಗರದ ಖಾಸಗಿ ಕಾಲೇಜೊಂದರಲ್ಲಿ ರ‍್ಯಾಗಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಐವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಕಾಲೇಜು ಆವರಣದ ಒಳಗೆ ಮತ್ತು ಹೊರಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಶ್ರೀನಿವಾಸ ಖಾಸಗಿ ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿಗಳು ಕಾಲೇಜಿನ ಒಳಗೆ ಅಷ್ಟೇ ಅಲ್ಲ, ಹೊರಗೆ ತಮ್ಮ ರೂಮಿಗೆ ಕರೆದೊಯ್ದು ಕಿರುಕುಳ ಕೊಡ್ತಿದ್ದಾರೆ ಎಂದು ಜೂನಿಯರ್ಸ್ ಆರೋಪ ಮಾಡ್ತಿದ್ದಾರೆ.
ಈ ಸಂಬಂಧ ಇಬ್ಬರು ಪ್ರಥಮ ವರ್ಷದ ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ, ರ‍್ಯಾಗಿಂಗ್ ವಿರೋಧಿ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ರ‍್ಯಾಗಿಂಗ್ ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ಗಾಯಗಳಾಗಿರುವುದರಿಂದ, ಹಲ್ಲೆಗೆ ಸಂಬಂಧಿಸಿದ ಹೆಚ್ಚುವರಿ ಆರೋಪಗಳನ್ನು ಕೂಡ ಪ್ರಕರಣದಲ್ಲಿ ಸೇರಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ದೂರುದಾರರ ಪ್ರಕಾರ, ಜೆಪ್ಪು ಪ್ರದೇಶದ ಗುಜರೆಕೆರೆ ಕೆರೆಯ ಸಮೀಪವಿರುವ ಚಹಾ ಅಂಗಡಿಯೊಂದರ ಬಳಿ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ತಮ್ಮ ಮೇಲೆ ಹಲ್ಲೆ ನಡೆಸಿದೆ. ನೀವು ಶೂ ಧರಿಸಬಾರದು” ಎಂದು ವಿನಾಕಾರಣ ಡ್ರೆಸ್ ಕೋಡ್ ಹೇರಲು ಯತ್ನಿಸಿದೆ. ಜೂನಿಯರ್‌ಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, ಸೀನಿಯರ್ಸ್ ಕಡೆಯಿಂದ ತೀವ್ರ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಸಂತ್ರಸ್ತ ವಿದ್ಯಾರ್ಥಿಗಳು ಹಾಗೂ ಹಲ್ಲೆ ನಡೆಸಿದ ಆರೋಪಿಗಳು ಕೇರಳ ಮೂಲದವರು ಎಂದು ಕಮೀಷನರ್ ಮಾಹಿತಿ ನೀಡಿದ್ದಾರೆ.
ತಮ್ಮ ಖಾಸಗಿ ರೂಮ್ ಗೆ ಕರೆದುಕೊಂಡು ಹೋಗುವ ಸೀರಿಯರ್ ಸ್ಟೂಡೆಂಟ್ಸ್ ಅಲ್ಲೇ ಬಟ್ಟೆ ಬಿಚ್ಚಿಸಿ ಕೇವಲ ಒಳ ಉಡುಪಿನಲ್ಲಿ ಕೂರಿಸಿ ಹಿಂಸೆ ನೀಡ್ತಿದ್ದಾರೆ ಎಂದು ಕೆಲ ವಿದ್ಯಾರ್ಥಿಗಳು ದೂರಿದ್ದಾರೆ. ಕರೆದಾಗ ರೂಮ್ಗೆ ಹೋಗದೆ ಇದ್ದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸ್ತಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ತನಿಖಾಧಿಕಾರಿಗೆ ಪ್ರಕರಣದಲ್ಲಿ ರ‍್ಯಾಗಿಂಗ್ ನಿರೋಧಕ ಕಾಯ್ದೆಯ ಸೂಕ್ತ ಕಲಂಗಳನ್ನು ಸೇರ್ಪಡೆಗೊಳಿಸಿ, ಬಂಧಿತರನ್ನು ಮ್ಯಾಜಿಸ್ಟ್ರೇಟ್‌ ಎದುರು ಹಾಜರುಪಡಿಸಲು ಸೂಚಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ನವರಾತ್ರಿ ಪ್ರಯುಕ್ತ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ  ಪಿಲಿ ಪಂಥ ಸೀಸನ್ 1 ಹುಲಿ ವೇಷ ಕುಣಿತ ಸ್ಪರ್ಧೆ ಆಯೋಜನೆ

ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲ. ಉಡುಪಿ ಉಚ್ಚಲ ದಸರಾ ಸಮಿತಿ. ಉಡುಪಿ ಉಚ್ಚಿಲ...

ಲಕ್ಷ್ಮೀನಗರದಲ್ಲಿ ಗೋಸೇವಾ ಕಾರ್ಯ ಶ್ರಮದಾನ ಮೂಲಕ ಹುಲ್ಲು ಕಟಾವು; ನಂದ ಗೋಕುಲ ಗೋಶಾಲೆಗೆ 150 ಕೆ.ಜಿ. ಗೋ ಗ್ರಾಸ  ಸಮರ್ಪಣೆ

ಉಡುಪಿ:ಗೆಳೆಯರ ಬಳಗ (ರಿ.), ಗರ್ಡೇ–ಲಕ್ಷ್ಮೀನಗರ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಕೊಡವೂರು ಹಾಗೂ ಶೌರ್ಯ ವಿಪತ್ತು...

ಕರಾವಳಿ ಮಂಗಳೂರಿನಿಂದ ಕಾರವಾರದವರೆಗೆ ವ್ಯಾಪಿಸಿದ ಕರಾವಳಿ-ಮಲೆನಾಡು ಪ್ರವಾಸೋದ್ಯಮಕ್ಕೆ ಬಂಪರ್: 500 ಕೋಟಿ ರೂ ಅನುದಾನ;

ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳನ್ನು ದೇಶದ ಪ್ರಮುಖ ಪ್ರವಾಸೋದ್ಯಮ ಹೂಡಿಕೆ ವಲಯಗಳಾಗಿ ರೂಪಿಸುವ...

ಅಗ್ರಜ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : ಸದಸ್ಯರಿಗೆ ಶೇ 15% ಡಿವಿಡೆಂಡ್ ಘೋಷಣೆ

ಉಡುಪಿ: ಅಗ್ರಜ ಸೌಹಾರ್ದ ಸಹಕಾರಿ ಸಂಘ(ನಿ), ಉಡುಪಿ ಇದರ ವಾರ್ಷಿಕ ಮಹಾಸಭೆಯು ಬನ್ನಂಜೆಯ ಶ್ರೀ ನಾರಾಯಣ...