ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲ. ಉಡುಪಿ ಉಚ್ಚಲ ದಸರಾ ಸಮಿತಿ. ಉಡುಪಿ ಉಚ್ಚಿಲ ದಸರ ಉತ್ಸವದ ಪ್ರಯುಕ್ತ ಅಕ್ಟೋಬರ್ 18 ರಂದು ಪ್ರಪ್ರಥಮ ಬಾರಿಗೆ ಆಹ್ವಾನಿತ ತಂಡಗಳ ಪುರುಷರ ಹುಲಿ ಕುಣಿತ ಸ್ಪರ್ಧೆ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನ ವತಿಯಿಂದ ” ಅಬ್ಬರದ ಪಿಲಿ ಪಂಥ 2026 ಸೀಸನ್ 1″, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರ ಉತ್ಸವದ ಮುಖ್ಯ ವೇದಿಕೆಯಲ್ಲಿ ಬೆಳಿಗ್ಗೆ ಗಂಟೆ 10:30 ರಿಂದ ಜರುಗಲಿದೆ.


ಈ ಸ್ಪರ್ಧೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪ್ರತಿಷ್ಠಿತ ಆಹ್ವಾನಿತ 10 ತಂಡಗಳು ಭಾಗವಹಿಸಲಿದೆ. ಪ್ರಥಮ ಬಹುಮಾನ: 73,00,000 ನಗದು + ಆಕರ್ಷಕ ಟ್ರೋಫಿ ದ್ವಿತೀಯ ಬಹುಮಾನ: 72,00,000 ನಗದು + ಆಕರ್ಷಕ ಟ್ರೋಫಿ ತೃತೀಯ ಬಹುಮಾನ: 1,00,000 ನಗದು + ಆಕರ್ಷಕ ಟ್ರೋಫಿ ಇದಲ್ಲದೆ, 3 ವೈಯಕ್ತಿಕ ವಿಭಾಗಗಳಲ್ಲಿ ತಲಾ 710,000 ನಗದು ಬಹುಮಾನವನ್ನು ನೀಡಲಾಗುವುದು.


ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೂ ₹25,000 ಪ್ರೋತ್ಸಾಹಧನ ನೀಡಲಾಗುವುದು. ಕರಾವಳಿ ಕರ್ನಾಟಕದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯಾದ ಹುಲಿ ಕುಣಿತ ಕಲೆಗೆ ಹೊಸ ವೇದಿಕೆ ಹಾಗೂ ಪ್ರೋತ್ಸಾಹ ನೀಡುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ಸಹಕಾರವನ್ನು ನೀಡಿ, ಕರಾವಳಿಯ ಜನಪದ ಮತ್ತು ಸಾಂಸ್ಕೃತಿಕ ಕಲೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕಾಗಿ ವಿನಂತಿಸುತ್ತೇವೆ. ಸ್ಥಳ: ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲ ದಿನಾಂಕ: 18.10.2026, ಭಾನುವಾರ : ಬೆಳ್ಳಿಗೆ 10:30ರಿಂದ ಪ್ರಾರಂಭ ವಾಗಿಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಯಶಸ್ವಿಗೆ ಸಹಕರಿಸುವಂತೆ ಕಾರ್ಯಕ್ರಮದ ಸಂಯೋಜಕರಾದ ವಿಶ್ವಾಸ್ ವಿ ಅಮೀನ್ ಪಡುಬಿದ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ



Leave a comment