ರಾಜ್ಯ ಸಚಿವ ಸಂಪುಟ ಕೋಟಿ ಕೋಟಿ ಮಾತುಕತೆಯ ಆಡಿಯೋಬಿಡುಗಡೆ ಮಾಡಿದ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ

42

“ಬೆಂಗಳೂರು: ಬಹುನಿರೀಕ್ಷಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಕಳೆದ ಸೋಮವಾರ ವಿಸ್ತರಣೆಯಾಗಿದ್ದು, 19 ಕಾಂಗ್ರೆಸ್ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ, ಸಂಪುಟ ವಿಸ್ತರಣೆ ಹಾಗೂ ‘ಪೇಮೆಂಟ್ ಸೀಟ್’ ಹಂಚಿಕೆ ಕುರಿತು ಶಾಸಕ ಆರ್. ಬಿ. ತಿಮ್ಮಾಪುರ ಮತ್ತು ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ ಅವರದ್ದು ಎನ್ನಲಾದ ಆಡಿಯೋ ಸಂಭಾಷಣೆ ಇದೀಗ ವೈರಲ್ ಆಗಿದೆ
. ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಡಿಯೋ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಆಡಿಯೋ ಸಂಭಾಷಣೆ ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತವನ್ನು ಮತ್ತೆ ಬೀದಿಗೆ ತಂದಿದ್ದು, ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.
ಕಳಂಕಿತರಿಗೆ ಹೆಚ್ಚು ಹಣ ನೀಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ. ವಾಲ್ಮೀಕಿ ನಿಗಮ ಹಗರಣದ ಕಳಂಕಿತರಾಗಿದ್ದ ನಾಗೇಂದ್ರಗೆ ಸಚಿವ ಸ್ಥಾನ ನೀಡಲಾಗಿದೆ. ಹಗರಣದ ಬಗ್ಗೆ ನಾಗೇಂದ್ರ ಎಲ್ಲರ ಹೆಸರು ಹೇಳುತ್ತೇನೆ ಅಂತ ಹೇಳಿದ್ರಂತೆ. ಹೀಗಾಗಿ ನಾಗೇಂದ್ರರನ್ನು ಸಚಿವರನ್ನಾಗಿ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು. ಇನ್ನೊಬ್ಬರು ನನ್ನ ಮರ್ಯಾದೆ ಪ್ರಶ್ನೆ ಅಂತ ಹೆಚ್ಚು ಹಣ ಕೊಟ್ಟಿದ್ದಾರಂತೆ. ಹೆಚ್ಚು ಹಣ ನೀಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ವಿಚಾರದಲ್ಲಿ ಹಿಂದೆ ನಾವು ಮಾಡಿದ್ದ ಆರೋಪ ಈಗ ಸಾಬೀತಾಗಿದೆ ಆಡಿಯೋದಲ್ಲಿ ಮಾತಾಡಿರುವುದು ತಿಮ್ಮಾಪುರ ಮತ್ತು ನಂಜಯ್ಯನಮಠ ಇಬ್ಬರೂ ಕಾರಿನಲ್ಲಿ ಮಾತಾಡಿರೋ ಆಡಿಯೋ ರೆಕಾರ್ಡ್ ಮಾಡಲಾಗಿದೆ ಎಂದರು. ಈಗ ನಾಗೇಂದ್ರ ದೆಹಲಿಗೆ ಹೋಗದಂತೆ ಕೊರ್ಟ್ ಆದೇಶಿಸಿದೆ. ಇಂತಹ ಕಳಂಕಿತರು ಸಂಪುಟದಲ್ಲಿ ಇರಲು ಸಾಧ್ಯವೇ ಇಲ್ಲ .ನಾಗೇಂದ್ರ ರಾಜೀನಾಮೆ ಪಡೆಯುವವರೆಗೆ ಮತ್ತೆ ಹೋರಾಟ ಮಾಡುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

Leave a comment

Leave a Reply

Your email address will not be published. Required fields are marked *

Related Articles

ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣ ಸೌಜನ್ಯ ತಾಯಿ ಕುಸುಮಾವತಿ ಗೌಡ ಮನವಿಗೆ ಅಸ್ತು ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದ್ದು,...

ವೃತ ನಿರೀಕ್ಷಕ ಧನಂಜಯ್ ಗೆ ಸಡ್ಡು ಹೊಡೆದ ನರಸೀಪುರ ಗಣಪತಿ ಮೆರವಣಿಗೆ ಮಸೀದಿ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

“ಟಿ. ನರಸೀಪುರ: ಮಸೀದಿ ಮುಂಭಾಗ ಗಣಪತಿ ಮೆರವಣಿಗೆ ವಿಚಾರದಲ್ಲಿ ಮೈಸೂರು ಜಿಲ್ಲೆ ಟಿ. ನರಸೀಪುರ ಇನ್ಸ್...

ಪಾಕಿಸ್ತಾನ ನಿರ್ಮಿತ ಅಪಾಯಕಾರಿ ಸೌಂದರ್ಯವರ್ಧಕ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಬಳಸದಂತೆ ಎಚ್ಚರಿಸಿದ ಕೇಂದ್ರ ಅರೋಗ್ಯ ಇಲಾಖೆ

ನವದೆಹಲಿ: “ಮೇಡ್ ಇನ್ ಪಾಕಿಸ್ತಾನ್” (ಪಾಕಿಸ್ತಾನದಲ್ಲಿ ತಯಾರಾದ) ಎಂದು ಲೇಬಲ್ ಮಾಡಲಾದ ಮತ್ತು ಅತಿಯಾದ ಪ್ರಮಾಣದ...

ರಾಜ್ಯ ಬಿಜೆಪಿಯಲ್ಲಿ ಅಪ್ಪ-ಮಕ್ಕಳ ಸರ್ವಾಧಿಕಾರ ಬಿಜೆಪಿ ತೊರೆದು; ನೆ ಲ ನರೇಂದ್ರ ಬಾಬು ನಾಳೆ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ಬಿಜೆಪಿ ಅಪ್ಪ-ಮಕ್ಕಳ ಪಕ್ಷವಾಗಿದ್ದು, ಅಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳಿಗೆ ನೆಲ ಇಲ್ಲದ ಕಾರಣ ಆ...