ಶೃಂಗೇರಿ ಮರುಮತ ಎಣಿಕೆ ಪ್ರಕರಣ ಅಂಚೆ ಮತಗಳಲ್ಲಿ ಅಕ್ರಮ ಆರೋಪ ಶಾಸಕ ಜೀವರಾಜ್ ಸೇರಿ ಮೂವರ ವಿರುದ್ಧ  ಎಫ್ಐಆರ್ ದಾಖಲು

3

“ಚಿಕ್ಕಮಗಳೂರು ಶೃಂಗೇರಿ ಮತ ಎಣಿಕೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ಅಂಚೆ ಮತಗಳಲ್ಲಿ ಅಕ್ರಮ ಆರೋಪದ ಮೇರೆಗೆ ಶಾಸಕ ಜೀವರಾಜ್ ಸೇರಿ ಮೂವರ ವಿರುದ್ಧ  ಎಫ್ ಐ ಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. ಶೃಂಗೇರಿ  ಕ್ಷೇತ್ರದ ಅಂಚೆ ಮತಗಳಲ್ಲಿ ಅಕ್ರಮ ಆರೋಪದ ಮೇಲೆ ಶಾಸಕ ಡಿಎನ್ ಜೀವರಾಜ್ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.


ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಚಿಕ್ಕಮಗಳೂರು  ನಗರ ಠಾಣೆಗೆ ಅಂಚೆ ಮತ ಎಣಿಕೆ ಟೇಬಲ್‌ನ ಎಜೆಂಟ್ ಆಗಿರುವ ಸುಧೀರ್ ಕುಮಾರ್ ಮುರೋಳ್ಳಿ ಅವರು ದೂರು ನೀಡಿದ್ದಾರೆ. ದೂರಿನನ್ವಯ ಶಾಸಕ ಡಿ.ಎನ್.ಜೀವರಾಜ್, ಅಂದಿನ ಚುನಾವಣಾಧಿಕಾರಿ ವೇದಾಮೂರ್ತಿ ಹಾಗೂ ಅಂದಿನ ಜಿಲ್ಲಾಧಿಕಾರಿ ರಮೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ

ದೂರಿನಲ್ಲೇನಿದೆ? ಸ್ಟ್ರಾಂಗ್ ರೂಂ ಸೀಲ್ ಆಗಿರಲಿಲ್ಲ, ಮತಪತ್ರಗಳಿದ್ದ ಟ್ರಂಕ್ ಓಪನ್ ಆಗಿತ್ತು, ಟ್ರಂಕಿನ ಸೀಲ್ ಓಪನ್ ಆಗಿದ್ದು, ಲಾಕ್ ಕಟ್ ಆಗಿತ್ತು. ಹೀಗಾಗಿ ಮತ ಟ್ಯಾಂಪರಿಂಗ್ ಆಗಿರುವ ಅನುಮಾನವಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಅನ್ವಯ ಮೂವರ ವಿರುದ್ಧ ವಂಚನೆ, ಕ್ರಿಮಿನಲ್ ಹಾಗೂ ಫೋರ್ಜರಿ ಪ್ರಕರಣ ದಾಖಲಾಗಿದೆ. ಏನಿದು ಪ್ರಕರಣ? 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜೇಗೌಡ 59171 ಮತ ಪಡೆದು ವಿಜಯ ಗಳಿಸಿದ್ದರು
.ಬಿಜೆಪಿಯ ಜೀವರಾಜ್ ಗಳಿಸಿದ್ದು 58970 ಮತಗಳು.ಗೆಲುವಿನ ಅಂತರ 201 ಮತಗಳು. ಆಗ ಚಲಾವಣೆ ಆದ ಅಂಚೆ ಮತಗಳು 1822.ಇದರಲ್ಲಿ ಜೀವರಾಜ್ 692 ಮಾತ ಪಡೆದರೆ ರಾಜೇಗೌಡ 569 ಮತ ಗಳಿಸಿದ್ದರು.ಆಗ 279 ಮತ ತಿರಸ್ಕೃತ ಆಗಿತ್ತು. ಗೆಲುವಿನ ಅಂತರ ತಿರಸ್ಕೃತ ಮತಗಳಿಗಿಂತ ಕಡಿಮೆ ಇದ್ದರೆ ಮರು ಎಣಿಕೆ ಕೇಳಬಹುದು.
ಜೀವರಾಜ್ ಪರ ಚುನಾವಣಾ ಏಜೆಂಟರು ಮರು ಎಣಿಕೆ ಕೋರಿದರು.ಚುನಾವಣಾಧಿಕಾರಿ ನಿಯಮ ಮೀರಿ ಅದನ್ನು ತಿರಸ್ಕರಿಸಿ ರಾಜೇಗೌಡ ವಿಜೇತ ಅಭ್ಯರ್ಥಿ ಎಂದು ಘೋಷಿಸಿದರು. ಇದರ ವಿರುದ್ಧ ಪರಾಜಿತ ಅಭ್ಯರ್ಥಿ ಜೀವರಾಜ್ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಈ ಅರ್ಜಿ ವಿಚಾರಣೆ ನಡೆಸದೇ ವಜಾ ಮಾಡಬೇಕು ಎಂದು ರಾಜೇಗೌಡರು ನ್ಯಾಯಾಲಯವನ್ನು ಕೋರಿದರು.ವಾದ ವಿವಾದ ನಡೆದು ನ್ಯಾಯಾಲಯ ವಿಚಾರಣೆ ನಡೆಸಲು ತೀರ್ಮಾನಿಸಿತು.
ಉಚ್ಛ ನ್ಯಾಯಾಲಯದ ಈ ತೀರ್ಮಾನವನ್ನು ರಾಜೇಗೌಡರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದರು.ಅಲ್ಲಿ ಮತ್ತೆ ವಿಚಾರಣೆ ನಡೆದು ಈ ಪ್ರಕರಣದ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತು. ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಮರು ಎಣಿಕೆಗೆ ನ್ಯಾಯಾಲಯ ಆದೇಶಿಸಿತು


Leave a comment

Leave a Reply

Your email address will not be published. Required fields are marked *

Related Articles

ಮೂರು ವರ್ಷಗಳ ಬಳಿಕ ಇಂದು ಶೃಂಗೇರಿ ನೂತನ ಶಾಸಕರಾಗಿ ಡಿ ಎನ್ ಜೀವರಾಜ್ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಕೊನೆಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಇಂದು ಡಿ ಎನ್ ಜೀವರಾಜ್ ಪ್ರಮಾಣ ವಚನ...

52 ಮತಗಳಿಂದ ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆಲುವು, ನೂತನ ಶಾಸಕರಾಗಿ ಘೋಷಣೆ..

ಬೆಂಗಳೂರು: ಹೈಕೋರ್ಟ್‌ ಆದೇಶದಂತೆ ನಡೆದ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ, ಕಾಂಗ್ರೆಸ್ ಶಾಸಕ...

ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು, ಅಧಿಕೃತ ಆದೇಶ ಯೋಗೇಶ್ ಗೌಡ ಕೊಲೆ ಪ್ರಕರಣ ಶಿಕ್ಷೆ ಹಿನ್ನಲೆ

ಬೆಂಗಳೂರು: ಧಾರವಾಡದ ಬಿಜೆಪಿ ಜಿ.ಪಂ ಸದಸ್ಯ ಯೋಗೀಶ್ ಗೌಡ ಅವರ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ...

ಮತ್ತೆ ಪ್ರಾರಂಭವಾಗಲಿದೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಕಾಮಗಾರಿ ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್

“ಬೆಂಗಳೂರು: ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯ ಕೆಲಸವು ಒಂದು ವಾರದೊಳಗೆ ಪ್ರಾರಂಭವಾಗಲಿದೆ ಎಂದು...