ವೃತ ನಿರೀಕ್ಷಕ ಧನಂಜಯ್ ಗೆ ಸಡ್ಡು ಹೊಡೆದ ನರಸೀಪುರ ಗಣಪತಿ ಮೆರವಣಿಗೆ ಮಸೀದಿ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

2

“ಟಿ. ನರಸೀಪುರ: ಮಸೀದಿ ಮುಂಭಾಗ ಗಣಪತಿ ಮೆರವಣಿಗೆ ವಿಚಾರದಲ್ಲಿ ಮೈಸೂರು ಜಿಲ್ಲೆ ಟಿ. ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಧಮ್ಕಿಗೆ ಸೆಡ್ಡು ಹೊಡೆದ ಹಿಂದೂ ಮಹಾಸಭಾ ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಶುಕ್ರವಾರ ಲಿಂಕ್ ರಸ್ತೆಯಲ್ಲೇ ಬೃಹತ್ ಶೋಭಾಯಾತ್ರೆ ನಡೆಸಿದರು. ಬಿಗಿ ಭದ್ರತೆ ಹಾಗೂ ಆತಂಕದ ನಡುವೆ ಶೋಭಾಯಾತ್ರೆ ಶಾಂತಯುತವಾಗಿ ಮುಕ್ತಾಯವಾಯಿತು.
ಮಸೀದಿ ಮುಂಭಾಗ ಪಟಾಕಿ ಸಿಡಿಸುವಂತಿಲ್ಲ ಎಂಬ ಇನ್ಸ್ ಪೆಕ್ಟರ್ ಧನಂಜಯ್ ವಾರ್ನಿಂಗ್ ನ್ನು ಸವಾಲಾಗಿ ಸ್ವೀಕರಿಸಿದ ಕಾರ್ಯಕರ್ತರು, ಮಸೀದಿ ಮುಂಭಾಗ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದರು. ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಜಾನಪದ ಕಲಾತಂಡಗಳ ಜೊತೆಗೆ ಸಾವಿರಾರು ಹಿಂದೂ ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಬಿಜೆಪಿಯ ಪ್ರಮುಖ ನಾಯಕರ ಗೈರಿನ ಮಧ್ಯೆಯೂ ಶೋಭಾಯಾತ್ರೆ ಯಶಸ್ವಿಯಾಗಿ ನಡೆದಿದೆ.
ಹಿಂದೂ ಧ್ವಜ ಬೀಸುವ ಮೂಲಕ ಯುವಕರನ್ನು ಹುರಿದುಂಬಿಸಿದ ಪ್ರತಾಪ್ ಸಿಂಹ: ಮೆರವಣಿಗೆಯಲ್ಲಿ ಪಾಲ್ಗೊಂಡ ಮಾಜಿ ಸಂಸದ ಪ್ರತಾಪ್ ಸಿಂಹ, ಹಿಂದೂ ಧ್ವಜ ಹಿಡಿದು ಬೀಸುವ ಮೂಲಕ ಯುವಕರನ್ನು ಹುರಿದುಂಬಿಸಿದರು. ಕಾರ್ಯಕರ್ತರೊಂದಿಗೆ ಸೇರಿಕೊಂಡು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಈ ವೇಳೆ ಮಾತನಾಡಿದ ಅವರು, ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ಕಿಡಿಕಾರಿದರು.
ಇನ್ನು ಒಂದುವರೆ ವರ್ಷದಲ್ಲಿ ನಾವು ಬರ್ತೀವಿ, ಅವಾಗ ಲೆಕ್ಕ ಚುಪ್ತ ಮಾಡ್ತೀವಿ, ಇನ್ಸ್‌ಪೆಕ್ಟರ್ ಧನಂಜಯ ಮಸೀದಿ ಮುಂದೆ ಹೋದ್ರೆ ಗ್ರಹಚಾರ ಬಿಡಿಸ್ತೀನಿ ಅಂದಲ್ಲ, ಬಾರಪ್ಪ ಈಗ ಬಂದಿದೀವಿ, ಪೊಲೀಸರ ಬಗ್ಗೆ ನಮಗೆ ಗೌರವ ಇದೆ. ಧನಂಜಯ್ ಅವರಂತ ಇನ್ಸ್‌ಪೆಕ್ಟರ್ ಬಗ್ಗೆ ಗೌರವ ಇಲ್ಲಾ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಶೋಭಾಯಾತ್ರೆಗೆ ಸಜ್ಜು ಶೋಭಾಯಾತ್ರೆ ಹಿನ್ನೆಲೆಯಲ್ಲಿ ಲಿಂಕ್ ರಸ್ತೆಯ ಮಸೀದಿ ಮುಂಭಾಗ ಪೊಲೀಸರ ದಂಡು ನೆರೆದಿತ್ತು. ಕೆ.ಎಸ್.ಆರ್.ಪಿ. ತುಕಡಿ ಅರೆಸೇನಾಪಡೆ ಸೇರಿ ಬಿಗ್ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. ಮಸೀದಿ ಮುಂಭಾಗ ಶಸ್ತ್ರ ಸಜ್ಜಿತ ಪೊಲೀಸರೊಂದಿಗೆ ನಾಲ್ಕು ರಿಸರ್ವ್ ವಾಹನಗಳನ್ನು ಇರಿಸಲಾಗಿತ್ತು. ಮಸೀದಿ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದ ಪೊಲೀಸರು ಮಸೀದಿಗೆ ಕಾಣದಂತೆ ರಿಸರ್ವ್ ವಾಹನಗಳನ್ನು ನಿಲ್ಲಿಸಿದ್ದರು. ಖುದ್ದು, ಮೈಸೂರು ಎಸ್ಪಿ ಮಲ್ಲಿಕಾರ್ಜುನ್ ದಂಡಿ ಅವರು ಮಸೀದಿ ಮುಂಭಾಗವೇ ಬೀಡು ಬಿಟ್ಟಿದ್ದರು.

Leave a comment

Leave a Reply

Your email address will not be published. Required fields are marked *

Related Articles

ಪಾಕಿಸ್ತಾನ ನಿರ್ಮಿತ ಅಪಾಯಕಾರಿ ಸೌಂದರ್ಯವರ್ಧಕ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಬಳಸದಂತೆ ಎಚ್ಚರಿಸಿದ ಕೇಂದ್ರ ಅರೋಗ್ಯ ಇಲಾಖೆ

ನವದೆಹಲಿ: “ಮೇಡ್ ಇನ್ ಪಾಕಿಸ್ತಾನ್” (ಪಾಕಿಸ್ತಾನದಲ್ಲಿ ತಯಾರಾದ) ಎಂದು ಲೇಬಲ್ ಮಾಡಲಾದ ಮತ್ತು ಅತಿಯಾದ ಪ್ರಮಾಣದ...

ರಾಜ್ಯ ಬಿಜೆಪಿಯಲ್ಲಿ ಅಪ್ಪ-ಮಕ್ಕಳ ಸರ್ವಾಧಿಕಾರ ಬಿಜೆಪಿ ತೊರೆದು; ನೆ ಲ ನರೇಂದ್ರ ಬಾಬು ನಾಳೆ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ಬಿಜೆಪಿ ಅಪ್ಪ-ಮಕ್ಕಳ ಪಕ್ಷವಾಗಿದ್ದು, ಅಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳಿಗೆ ನೆಲ ಇಲ್ಲದ ಕಾರಣ ಆ...

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತೆರವು ಖಚಿತದ ನಂತರ ಪಾದಯಾತ್ರೆ ನಾಟಕಬಿ ವೈ ವಿಜಯೇಂದ್ರ ವಿರುದ್ಧ ಯತ್ನಾಳ ಆಕ್ರೋಶ

ಬೆಂಗಳೂರು: ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಫಿಕ್ಸ್ ಆದ ಮೇಲೆ ಪಾದಯಾತ್ರೆ ಆರಂಭವಾಗಿದೆ...

ಮಾಜಿ ಸಚಿವ ನಾಗೇಂದ್ರ ಗೆ ಮತ್ತೆ ಸಂಕಷ್ಟ ಮರು ತೀವ್ರ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಜಾರಿ...