ಪಂಚರಾಜ್ಯ ಚುನಾವಣೆ ಪಶ್ಚಿಮ ಬಂಗಾಳ ಅಸ್ಸಾಂ, ಬಿಜೆಪಿ ಕೇರಳ ಯುಡಿಎಫ್ ತಮಿಳುನಾಡು ನಟ ವಿಜಯ್ ನೇತೃತ್ವದ ಟಿವಿಕೆ, ಪುದುಚೆರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಮುನ್ನಡೆ

1
ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶಗಳು ಹೊರ ಬೀಳುತ್ತಿದ್ದು, ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ದ್ರಾವಿಡ ಪಕ್ಷಗಳಿಗೆ ಆಘಾತ ನೀಡಿದೆ. ಅಂತೆಯೇ ಬಿಜೆಪಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಅನ್ನು ಕ್ಲೀನ್ ಸ್ವೀಪ್ ಮಾಡಿದ್ದು, ಕೇರಳದಲ್ಲಿ 10 ವರ್ಷಗಳ ಬಳಿಕ ಯುಡಿಎಫ್ ಅಲೆ ಆರಂಭವಾಗಿದೆ. ಇತ್ತೀಚಿನ ಟ್ರೆಂಡ್‌ಗಳು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಪ್ರಬಲ ಮುನ್ನಡೆ ಸಾಧಿಸಿದೆ.
ಆದರೆ ನಟ ವಿಜಯ್ ಅವರ ಟಿವಿಕೆ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆಗಿಂತ ಅಚ್ಚರಿಯ ಮುನ್ನಡೆ ಸಾಧಿಸಿದ್ದು, ಅಧಿಕಾರ ರಚನೆಯತ್ತ ದಾಪುಗಾಲಿರಿಸಿದ್ದಾರೆ. ಪೆರಂಬೂರ್ ಮತ್ತು ತಿರುಚಿ ಪೂರ್ವ ಎರಡೂ ಕ್ಷೇತ್ರಗಳಲ್ಲಿ ವಿಜಯ್ ಮುಂದಿದ್ದಾರೆ, ಆದರೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹಲವಾರು ಡಿಎಂಕೆ ಮಂತ್ರಿಗಳೊಂದಿಗೆ ಕೊಳತ್ತೂರಿನಲ್ಲಿ ಹಿಂದುಳಿದಿದ್ದಾರೆ. ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಎಡಪ್ಪಾಡಿಯಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ ರಾಜ್ಯ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಸತ್ತೂರಿನಲ್ಲಿ ಹಿನ್ನಡೆಯಲ್ಲಿದ್ದಾರೆ.
ಈ ಅಂಕಿಅಂಶಗಳು ಚುನಾವಣಾ ಆಯೋಗ ಮತ್ತು ಟಿವಿ ಚಾನೆಲ್‌ಗಳ ಟ್ರೆಂಡ್‌ಗಳನ್ನು ಆಧರಿಸಿವೆ, ಚುನಾವಣಾ ಸಂಸ್ಥೆ ಇನ್ನೂ ಯಾವುದೇ ಅಧಿಕೃತ ಸಂಖ್ಯೆಗಳನ್ನು ಘೋಷಿಸಿಲ್ಲ.


ಬಂಗಾಳದಲ್ಲಿ ಬಿಜೆಪಿ ಮ್ಯಾಜಿಕ್ ಇನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ನಿಕಟ ಪೈಪೋಟಿ ಇದೆಯಾದರೂ, ಹಾಲಿ ಟ್ರೆಂಡ್ ಗಳು ಬಿಜೆಪಿಯನ್ನು ಮುನ್ನಡೆಯಲ್ಲಿ ನಿಲ್ಲಿಸಿದೆ. ಇತ್ತೀಚಿನ ವರದಿಗಳು ಬಂದಾಗ ಬಿಜೆಪಿ 194 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಟಿಎಂಸಿ 94 ಸ್ಥಾನಗಳಲ್ಲಿ ಮಾತ್ರ ಮುನ್ನಡೆಯಲ್ಲಿದೆ.
ಎಡಪಕ್ಷಗಳು 2ರಲ್ಲಿ ಮುನ್ನಡೆಯಲ್ಲಿವೆ. ತವರಿನಲ್ಲಿ ಕೊನೆಗೂ ದೀದಿ ಮುನ್ನಡೆ ಇನ್ನು ಮಮತಾ ಬ್ಯಾನರ್ಜಿ ಅವರ ತವರು ಕ್ಷೇತ್ರ ಭವಾನಿಪುರದಲ್ಲೇ ಬಿಜೆಪಿಯ ಸುವೇಂದು ಅಧಿಕಾರಿ ಮುನ್ನಡೆಯಲ್ಲಿದ್ದರು. ಇದೀಗ ಮಮತಾ ಬ್ಯಾನರ್ಜಿ ಅಲ್ಪ ಮತಗಳ ಮುನ್ನಡೆ ಸಾಧಿಸಿದ್ದಾರೆ ಎಂದು ಹೇಳಲಾಗಿದೆ. 20 ಸುತ್ತಿನ ಮತ ಎಣಿಕೆಗಳ ಪೈಕಿ ಈ ವರೆಗೂ 4 ಸುತ್ತಿನ ಮತಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಮಮತಾ ಬ್ಯಾನರ್ಜಿ ಒಟ್ಟು 17244 ಮತಗಳನ್ನು ಪಡೆದಿದ್ದಾರೆ.

ಅವರ ಪ್ರತಿಸ್ಪರ್ಧಿ ಬಿಜೆಪಿಯ 8762 ಮತಗಳನ್ನು ಪಡೆದಿದ್ದು ಆ ಮೂಲಕ ಮಮತಾ ಬ್ಯಾನರ್ಜಿ 8482 ಮತಗಳ ಮುನ್ನಡೆ ಸಾಧಿಸಿದ್ದಾರೆ. ಸುವೇಂದು ಅಧಿಕಾರಿ ತಾವು ಸ್ಪರ್ಧಿಸಿರುವ 2 ಕ್ಷೇತ್ರಗಳ ಪೈಕಿ 1ರಲ್ಲಿ ಮುನ್ನಡೆಯಲ್ಲಿದ್ದು, ನಂದಿಗ್ರಾಮ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ಒಟ್ಟು 7114 ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿ ಟಿಎಂಸಿಯ ಪಬಿತ್ರಾಕರ್ 6452 ಮತಗಳನ್ನು ಪಡೆದಿದ್ದಾರೆ. ಆ ಮೂಲಕ ಸುವೇಂದು ಒಟ್ಟು 662 ಮತಗಳ ಅಲ್ಪ ಮುನ್ನಡೆ ಸಾಧಿಸಿದ್ದಾರೆ.
ಅಸ್ಸಾಂನಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಅಸ್ಸಾಂನಲ್ಲಿ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ರಾಜ್ಯದ 126 ಸ್ಥಾನಗಳಲ್ಲಿ 90 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಕ್ರಮವಾಗಿ ಜಲುಕ್ಬರಿ ಮತ್ತು ಜೋರ್ಹತ್‌ನಲ್ಲಿ ಮುನ್ನಡೆಯಲ್ಲಿದ್ದರೆ, ಅಸ್ಸಾಂ ರಾಷ್ಟ್ರೀಯ ಪರಿಷತ್ ಅಧ್ಯಕ್ಷ ಲುರಿಂಜ್ಯೋತಿ ಗೊಗೊಯ್ ಖೋವಾಂಗ್‌ನಲ್ಲಿ ಮುಂದಿದ್ದಾರೆ.

ಚುನಾವಣೆಗೆ ಮುನ್ನ ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್ ನಾಯಕರಾದ ಪ್ರದ್ಯುತ್ ಬೋರ್ಡೊಲೊಯ್ ಮತ್ತು ಭೂಪೇನ್ ಬೋರಾ ಕ್ರಮವಾಗಿ ದಿಸ್ಪುರ್ ಮತ್ತು ಬಿಹ್ಪುರಿಯಾದಲ್ಲಿ ಮುನ್ನಡೆಯಲ್ಲಿದ್ದಾರೆ. ಕೇರಳದಲ್ಲಿ UDF ಅಲೆ ಕೇರಳದಲ್ಲಿ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) 75 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಹಾಲಿ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸುಮಾರು 45 ಸ್ಥಾನಗಳಲ್ಲಿ ಮಾತ್ರ ಮುನ್ನಡೆಯಲ್ಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ನಾಲ್ಕು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಪುದುಚೇರಿಯಲ್ಲಿ ಮತ್ತೆ ಎನ್ ಡಿಎಗೆ ಅಧಿಕಾರದ ಗದ್ದುಗೆ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮತ್ತೆ ನಾರಾಯಣ ಸ್ವಾಮಿ ನೇತತ್ವದ ಎನ್ ಆರ್ ಸಿ-ಎನ್ ಡಿಎ ಮೈತ್ರಿಕೂಟ ಅಧಿಕಾರ ರಚನೆ ಬಹುತೇಕ ಖಚಿತವಾಗಿದ್ದು, ಇಲ್ಲಿ ಒಟ್ಟು 30 ಸ್ಥಾನಗಳ ಪೈಕಿ ಎನ್ ಆರ್ ಸಿ 15 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಮೈತ್ರಿಕೂಟ 11ರಲ್ಲಿ ಮುನ್ನಡೆಯಲ್ಲಿದೆ

Leave a comment

Leave a Reply

Your email address will not be published. Required fields are marked *

Related Articles

ಅವಧಿಗಿಂತ ಮೊದಲೇ ಅಪ್ಪಳಿಸಲಿದೆ ಮುಂಗಾರು ಮಳೆ; ಅಂಡಮಾನ್ ಮತ್ತು ಕೇರಳಕ್ಕೆ ಶೀಘ್ರ ಆಗಮನ

ಬೆಂಗಳೂರು: ಬಿರುಬೇಸಿಗೆಯಿಂದಾಗಿ ಬಳಲಿ ಬೆಂಡಾಗಿರುವ ಜನತೆಗೆ ಕೇಂದ್ರ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದ್ದು, ಈ ಬಾರಿ...

ಕಣಿವೆ ರಾಜ್ಯಕ್ಕೆ ರೈಲು ಭಾಗ್ಯ: ಶ್ರೀನಗರ-ಜಮ್ಮು ನಡುವಣ ನೇರ ವಂದೇ ಭಾರತ್ ಸೇವೆಗೆ ಅಶ್ವಿನಿ ವೈಷ್ಣವ್ ಚಾಲನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜನರ ದಶಕಗಳ ಕನಸು ಗುರುವಾರ ನನಸಾಗಿದ್ದು, ಕೇಂದ್ರ ರೈಲ್ವೆ ಸಚಿವ...

ಮಹಾನಗರ ಪಾಲಿಕೆ ಚುನಾವಣೆ ಮುಸ್ಲಿಂ ಪ್ರಾಬಲ್ಯವಿರುವ ಗೋದ್ರಾ ವಾರ್ಡ್ ನಲ್ಲಿ ಜಯಶಾಲಿಯಾದ ಹಿಂದೂ ಮಹಿಳೆ

ಅಹ್ಮದಾಬಾದ್: ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ 2026ರಲ್ಲಿ ಅಚ್ಚರಿ ಫಲಿತಾಂಶವೊಂದು ಹೊರಬಿದ್ದಿದ್ದು, ಶೇ.100 ರಷ್ಟು ಮುಸ್ಲಿಂ...

ಮಂಗಳೂರು ಉಗ್ರ ಶಾರಿಕ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಎನ್ ಐ ಎ ಕೋರ್ಟ್

ಮಂಗಳೂರು: ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಮಂಗಳೂರು ನಗರದಲ್ಲಿ ಆಟೋದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಪ್ರಮುಖ...