ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತೆರವು ಖಚಿತದ ನಂತರ ಪಾದಯಾತ್ರೆ ನಾಟಕಬಿ ವೈ ವಿಜಯೇಂದ್ರ ವಿರುದ್ಧ ಯತ್ನಾಳ ಆಕ್ರೋಶ

3

ಬೆಂಗಳೂರು: ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಫಿಕ್ಸ್ ಆದ ಮೇಲೆ ಪಾದಯಾತ್ರೆ ಆರಂಭವಾಗಿದೆ ಆಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಅಶೋಕ್, ಸುನೀಲ್ ಕುಮಾರ್ ಎಲ್ಲರೂ ಸದನದ ಬಾವಿಗೆ ಇಳಿದು ಹೋರಾಟ ಮಾಡಿದ್ದರು.
ಆಗ ವಿಜಯೇಂದ್ರ 5 ನಿಮಿಷ ಬಾವಿಯಲ್ಲಿ ನಿಲ್ಲಲ್ಲಿಲ್ಲ. ಬರಿ ಪುಕ್ಸಟ್ಟೆ ಒಂದು ಪಾದಯಾತ್ರೆ ಮಾಡಿದ್ರೆ ಕ್ರೆಡಿಟ್ ಬರುತ್ತಾ? ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಗ್ಯಾರಂಟಿ ಆದ ಮೇಲೆ ಪಾದಾಯತ್ರೆ ಗ್ಯಾರಂಟಿ ಆಗಿದೆ. ವಾರಂಟಿ ಮುಗಿದಿದೆ ಹೀಗಾಗಿ ತಮ್ಮ ಅಸ್ತಿತ್ವ ತೋರಿಸಲು, ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪಾದಯಾತ್ರೆ ಯಾರಿಗೆ ಮೈನಸ್ ಆಗುತ್ತೋ, ಪ್ಲಸ್ ಆಗುತ್ತೋ ಬಿಡುತ್ತೆ ಗೊತ್ತಿಲ್ಲ. ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುತ್ತಾರೆ ಎಂಬ ಭಯ ಬಂದಿದೆ. ಹೀಗಾಗಿ ಪಾದಯಾತ್ರೆಯಿಂದ ತಾವು ಹೀರೋ ಆಗಬೇಕು ಎಂದು ಇದೆಲ್ಲ ಮಾಡ್ತಿದ್ದಾರೆ. ಹೋರಾಟ, ಪಾದಯಾತ್ರೆ ಮಾಡುವುದಾದರೆ ಕೆಪಿಎಸ್‌ಸಿ ಹಗರಣ ಹೋರಾಟ ಮಾಡಲಿ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗು ಸಿಎಂ ಡಿ.ಕೆ.ಶಿವಕುಮಾರ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದರು. ಸದನದಲ್ಲಿ ಬಿಡದಿ ಯೋಜನೆ, ಕೆಪಿಎಸ್ ಸಿ ಹಗರಣ ಹಾಗು ನೈಸ್ ಯೋಜನೆ ಬಗ್ಗೆ ಮಾತನಾಡಿ ಸಿಎಂ ಡಿ.ಕೆ.ಶಿವಕುಮಾ‌ರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಬಹುದಿತ್ತು ಎಂದು ಹೇಳಿದರು.

ಆದರೆ ಸದನದಲ್ಲಿ ನಾಗೇಂದ್ರ ವಿಚಾರ ಪ್ರಸ್ತಾಪಿಸಿ ಧರಣಿ ನಡೆಸಲಾಯಿತು, ವಿಜಯೇಂದ್ರ ಮತ್ತು ಡಿ.ಕೆ.ಶಿವಕುಮಾರ್ ಅಡ್ಡೆಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೆಪಿಎಸ್‌ಸಿ ಹಗರಣದ ವಿರುದ್ಧ ಮಾತನಾಡಲು ಧೈರ್ಯವಿದ್ದರೆ ಪಾದಯಾತ್ರೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಈ ಹಗರಣವು ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಕರ ಭವಿಷ್ಯಕ್ಕೆ ಧಕ್ಕೆ ತಂದಿದೆ ಎಂದು ಅವರು ಹೇಳಿದ್ದಾರೆ. ಸಾವಿರಾರು ನಿರುದ್ಯೋಗಿ ಯುವಕರ ಮೇಲೆ ಪರಿಣಾಮ ಬೀರುವ ಹಗರಣದ ಹೊರತಾಗಿಯೂ, ಅಮುಖ್ಯ ವಿಷಯಗಳ ಕುರಿತು ಪಾದಯಾತ್ರೆ ನಡೆಸುತ್ತಿರುವ ವಿಜಯೇಂದ್ರ ಅವರ ಕೆಪಿಎಸ್‌ಸಿ ಅಕ್ರಮಗಳ ಬಗ್ಗೆ ಅವರ ಮೌನವನ್ನು ಪ್ರಶ್ನಿಸಿದರು.
“ಕೆಪಿಎಸ್‌ಸಿಯ ಅಮಾನತುಗೊಂಡ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ನಿಮಗೆ (ವಿಜಯೇಂದ್ರ) ಎಷ್ಟು ಶೇಕಡಾ (ಕಮಿಷನ್ ಮೊತ್ತ) ಪಾವತಿಸಿದ್ದಾರೆಂದು ನನಗೆ ತಿಳಿದಿದೆ. ವಿಜಯೇಂದ್ರ ಶೇ. 75 ರಷ್ಟು ಮತ್ತು ಸಾಹುಕರ್ ಶೇ. 25 ರಷ್ಟು ಪಡೆಯುತ್ತಾರೆ” ಎಂದು ಯತ್ನಾಳ್ ಆರೋಪಿಸಿದ್ದಾರೆ. ವಿಜಯೇಂದ್ರ ಅವರು ಪಾದಯಾತ್ರೆ ಮೂಲಕ ಕೆಪಿಎಸ್‌ಸಿ ಸಮಸ್ಯೆಯನ್ನು ಕೈಗೆತ್ತಿಕೊಳ್ಳುವ ಮೂಲಕ ತಮ್ಮ ಬದ್ಧತೆಯನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಮಾಜಿ ಸಚಿವ ನಾಗೇಂದ್ರ ಗೆ ಮತ್ತೆ ಸಂಕಷ್ಟ ಮರು ತೀವ್ರ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಜಾರಿ...

ಸಾಲ ಮರುಪಾವತಿಸಿಲ್ಲ  ಕಾರಣಕ್ಕೆ  ಮಹಿಳೆ ಅಪಹರಿಸಿ ಅರೆ ಬೆತ್ತಲೆಗೊಳಿಸಿ  ಹಲ್ಲೆ ನಜತ್ ಬೇಗಂ ಸೇರಿದಂತೆನಾಲ್ವರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಸಾಲ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ 30 ವರ್ಷದ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿ, ನಾಲ್ಕು ದಿನಗಳ...

ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸಚಿವ ಪ್ರಿಯಾಂಕ ಖರ್ಗೆ ನೇತೃತ್ವದ ಸಮಿತಿ ರಚನೆ

“ಬೆಂಗಳೂರು: ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಕ್ರಿಮಿನಲ್ ಕೇಸುಗಳನ್ನು ಪರಿಶೀಲಿಸಿ, ಸೂಕ್ತ ಪ್ರಕರಣಗಳನ್ನು ಹಿಂಪಡೆಯಲು...

ಅಧಿಕಾರ ದುರುಪಯೋಗ ಹಿಂದೂ ಕಾರ್ಯಕರ್ತನ ಬಂಧನ ಸಂಬಂಧ ಎಸಿಪಿ ರೀನಾ ಸುವರ್ಣ ಮತ್ತು ಡಿಸಿಪಿಗೆ ಗಂಭೀರ ಎಚ್ಚರಿಕೆ ನೀಡಿದ ಹೈ ಕೋರ್ಟ್ ನ್ಯಾಯಾಧೀಶರು

ಬೆಂಗಳೂರು: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಆಯೋಜನೆಗೊಂಡಿದ್ದ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಶೋ ರದ್ದು ಮಾಡುವಂತೆ ಹಿಂದೂ...