ಚಾಮರಾಜನಗರ ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತ : ಶುದ್ಧಗಾಳಿಯಲ್ಲಿ ದೇಶದಲ್ಲೇ ನಾಲ್ಕನೇ ಸ್ಥಾನ

48

ಚಾಮರಾಜನಗರ : ಮೇಘಾಲಯದ ಶಿಲ್ಲಾಂಗ್‌ ಅತ್ಯಂತ ಶುದ್ಧ ಗಾಳಿ ದೊರೆಯುವ ಮೊದಲ ನಗರವಾದರೆ, ಸಿಕ್ಕಿಂನ ಗ್ಯಾಂಗ್ಟಕ್‌ ಎರಡನೇ ಸ್ಥಾನ, ಕರ್ನಾಟಕದ ಕೊಪ್ಪಳ ಮೂರನೇ, ಚಾಮರಾಜನಗರ ನಾಲ್ಕನೇ ಸ್ಥಾನ ಪಡೆದಿದೆ.

ಟಾಪ್‌ 10 ಪಟ್ಟಿಯಲ್ಲಿ ಕರ್ನಾಟಕದ ಶಿವಮೊಗ್ಗ 6ನೇ, ಗದಗ 8, ಮೈಸೂರು 9 ಹಾಗೂ ಬಾಗಲಕೋಟೆ 10ನೇ ಸ್ಥಾಪ ಪಡೆದಿವೆ. ಚಾಮರಾಜನಗರ ಜಿಲ್ಲೆ ಕಳೆದ ವರ್ಷ ಶುದ್ಧಗಾಳಿಯ ಸೂಚ್ಯಂಕದಲ್ಲಿ 6ನೇ ಸ್ಥಾನ ಪಡೆದಿತ್ತು. ಈ ಬಾರಿ ಎರಡು ಸ್ಥಾನಗಳು ಮೇಲೆ ಏರಿರುವುದು ಜಿಲ್ಲೆಯ ಜನತೆಯಲ್ಲಿ ಖುಷಿ ನೀಡಿದೆ.

ರಾಜ್ಯದ ಗಡಿ ಜಿಲ್ಲೆಯಾಗಿರುವ ಚಾಮರಾಜನಗರ ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದ್ದು, ಶೇ.51 ರಷ್ಟು ಅರಣ್ಯ ಪ್ರದೇಶ ಒಳಗೊಂಡಿರುವ ಪರಿಣಾಮ ಶುದ್ಧಗಾಳಿಯಲ್ಲಿ ದೇಶದಲ್ಲೇ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಸೆಂಟರ್‌ ಫಾರ್‌ ರಿಸರ್ಚ್ ಆನ್‌ ಎನರ್ಜಿ ಅಂಡ್‌ ಕ್ಲೀನ್‌ ಏರ್‌ (ಸಿಆರ್‌ಇಎ) ಬಿಡುಗಡೆ ಮಾಡಿರುವ ಗಾಳಿಯ ಗುಣಮಟ್ಟದ ಸೂಚ್ಯಂಕದಲ್ಲಿ ಚಾಮರಾಜನಗರ ದೇಶದಲ್ಲೇ ನಾಲ್ಕನೇ ಸ್ಥಾನ ಪಡೆಯುವ ಮೂಲಕ ವಿಶಿಷ್ಟ ದಾಖಲೆ ಬರೆದಿದೆ.

ಮೇಘಾಲಯದ ಶಿಲ್ಲಾಂಗ್‌ ಅತ್ಯಂತ ಶುದ್ಧ ಗಾಳಿ ದೊರೆಯುವ ಮೊದಲ ನಗರವಾದರೆ, ಸಿಕ್ಕಿಂನ ಗ್ಯಾಂಗ್ಟಕ್‌ ಎರಡನೇ ಸ್ಥಾನ, ಕರ್ನಾಟಕದ ಕೊಪ್ಪಳ ಮೂರನೇ, ಚಾಮರಾಜನಗರ ನಾಲ್ಕನೇ ಸ್ಥಾನ ಪಡೆದಿದೆ. ಟಾಪ್‌ 10 ಪಟ್ಟಿಯಲ್ಲಿ ಕರ್ನಾಟಕದ ಶಿವಮೊಗ್ಗ 6ನೇ, ಗದಗ 8, ಮೈಸೂರು 9 ಹಾಗೂ ಬಾಗಲಕೋಟೆ 10ನೇ ಸ್ಥಾಪ ಪಡೆದಿವೆ. ಸಿಆರ್‌ಇಎ ನವೆಂಬರ್‌ನಲ್ಲಿಈ ಸಮೀಕ್ಷೆ ನಡೆಸಿದೆ.

ಚಾಮರಾಜನಗರ ಜಿಲ್ಲೆ ಕಳೆದ ವರ್ಷ ಶುದ್ಧಗಾಳಿಯ ಸೂಚ್ಯಂಕದಲ್ಲಿ 6ನೇ ಸ್ಥಾನ ಪಡೆದಿತ್ತು. ಈ ಬಾರಿ ಎರಡು ಸ್ಥಾನಗಳು ಮೇಲೆ ಏರಿರುವುದು ಜಿಲ್ಲೆಯ ಜನತೆಯಲ್ಲಿ ಖುಷಿ ನೀಡಿದೆ. ಜಿಲ್ಲೆಯಲ್ಲಿ ಕಾರ್ಖಾನೆಗಳ ಸಂಖ್ಯೆ ಬಹಳ ಕಡಿಮೆ ಮತ್ತು ವಾಹನಗಳ ಸಂಚಾರ ದಟ್ಟಣೆ ಕೂಡ ಕಡಿಮೆ.

ಹಳ್ಳಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹೀಗಾಗಿ ಇಲ್ಲಿ ಶುದ್ಧ ಗಾಳಿ ದೊರಕುತ್ತದೆ. ಜಿಲ್ಲೆಯ ಮೂರು ಭಾಗವನ್ನು ಅರಣ್ಯ ಸುತ್ತು ವರಿದಿದೆ. ಮಲೆ ಮಹದೇಶ್ವರಬೆಟ್ಟ, ಬಿಳಿಗಿರಿರಂಗನಬೆಟ್ಟ, ಬಂಡೀಪುರ ಅಭಯಾರಣ್ಯ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟಗಳ ಸಾಲು ಸಹ ಇಂತ ಶುದ್ಧ ಗಾಳಿಗೆ ಕಾರಣವಾಗಿವೆ.

ಅಲ್ಲದೇ ಚಾ.ನಗರ ಜಿಲ್ಲಾ ಕೇಂದ್ರದಲ್ಲೂ ಸಹ ಸಿ.ಎಂ. ವೆಂಕಟೇಶ್‌ ಅವರು ಯಾವುದೇ ಇಲಾಖೆಗಳಿಗೆ ಕಡಿಮೆ ಇಲ್ಲದಂತೆ ನಗರದ ತುಂಬೆಲ್ಲಾ ಸಾಲು ಸಾಲು ಗಿಡ, ಮರಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡುತ್ತಿರುವುದು ಸಹ ಶುದ್ಧಗಾಳಿಗೆ ತಮ್ಮದೇ ಕೊಡುಗೆಯನ್ನು ನೀಡಿವೆ ಎಂಬುದನ್ನು ಅಲ್ಲಗಳೆಯಲಾಗದು.”

Leave a comment

Leave a Reply

Your email address will not be published. Required fields are marked *

Related Articles

ವರ್ಷಾಂತ್ಯದಲ್ಲಿ ಗ್ರಾಮ ಪಂಚಾಯತ್ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆ ::ಸಚಿವ ಪ್ರಿಯಾಂಕ ಖರ್ಗೆ

ಕಲಬುರಗಿ: ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ...

ಮೂರು ವರ್ಷಗಳ ಬಳಿಕ ಇಂದು ಶೃಂಗೇರಿ ನೂತನ ಶಾಸಕರಾಗಿ ಡಿ ಎನ್ ಜೀವರಾಜ್ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಕೊನೆಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಇಂದು ಡಿ ಎನ್ ಜೀವರಾಜ್ ಪ್ರಮಾಣ ವಚನ...

ಶೃಂಗೇರಿ ಮರುಮತ ಎಣಿಕೆ ಪ್ರಕರಣ ಅಂಚೆ ಮತಗಳಲ್ಲಿ ಅಕ್ರಮ ಆರೋಪ ಶಾಸಕ ಜೀವರಾಜ್ ಸೇರಿ ಮೂವರ ವಿರುದ್ಧ  ಎಫ್ಐಆರ್ ದಾಖಲು

“ಚಿಕ್ಕಮಗಳೂರು ಶೃಂಗೇರಿ ಮತ ಎಣಿಕೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ಅಂಚೆ ಮತಗಳಲ್ಲಿ ಅಕ್ರಮ ಆರೋಪದ...

52 ಮತಗಳಿಂದ ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆಲುವು, ನೂತನ ಶಾಸಕರಾಗಿ ಘೋಷಣೆ..

ಬೆಂಗಳೂರು: ಹೈಕೋರ್ಟ್‌ ಆದೇಶದಂತೆ ನಡೆದ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ, ಕಾಂಗ್ರೆಸ್ ಶಾಸಕ...