ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಮಾಡಲು ಸಾಧ್ಯವಾಗದೆ ಪುನರ್ವಸತಿ ಬಯಸಿರುವ ಬಡ ಕುಟುಂಬಗಳಿಗೆ ಸರ್ಕಾರ ಸಹಾಯ ಹಸ್ತ ನೀಡಿಲಿ : ನವೀನ್ ಸಾಲಿಯನ್

49

ಉಡುಪಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಮಾಡಲು ಸಾಧ್ಯವಾಗದೆ ಪುನರ್ವಸತಿ ಬಯಸಿರುವ ಬಡ ಕುಟುಂಬಗಳಿಗೆ ಸರ್ಕಾರ ಸಹಾಯ ಹಸ್ತ ನೀಡಿಲಿ ಎಂದು ಕಾಂಗ್ರೆಸ್ ಮುಖಂಡ ನವೀನ್ ಸಾಲಿಯನ್ ಮನವಿ ಮಾಡಿದ್ದಾರೆಕುದುರೆಮುಖ ಅರಣ್ಯ ಪ್ರದೇಶಗಳಲ್ಲಿ ದಶಕಗಳಿನಿಂದ ವಾಸಿಸುತ್ತಿರುವ ಕುಟುಂಬಗಳು ಆ ಭಾಗದಲ್ಲಿ ವಾಸ ಮಾಡಲು ಅನುಮತಿಯಿಲ್ಲದೆ, ಜೀವನೋಪಾಯಕ್ಕೆ ತೀವ್ರ ಸಂಕಷ್ಟ ಎದುರಿಸುತ್ತಿವೆ. ಈ ಕುಟುಂಬಗಳಿಗೆ ಪುನರ್ವಸತಿ ಹಾಗೂ ನ್ಯಾಯಯುತ ಪರಿಹಾರದ ಅಗತ್ಯ ಬಹಳ ದಿನಗಳಿಂದಲೂ ಪ್ರಸ್ತಾಪವಾಗುತ್ತಿದ್ದ ಮಹತ್ವದ ವಿಚಾರ.ಕುದುರೆಮುಖ ಕಬ್ಬಿಣದ ಅದಿರು ಗಣಿಗಾರಿಕೆ ಕಂಪನಿ ಕೆಲಸಕ್ಕಾಗಿ ವಿವಿಧ ಕಡೆಗಳಿಂದ ಹಲವು ಕುಟುಂಬಗಳು ಕುದುರೆಮುಖ ಪ್ರದೇಶಕ್ಕೆ ಬಂದು ಕೆ ಐ ಓ ಸಿ ಎಲ್ ಕಂಪನಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು,ಆನಂತರದ ದಿನಗಳಲ್ಲಿ ಕಂಪನಿ ಮುಚ್ಚಿ ಹೋಗಿದ್ದು ಇಲ್ಲಿ ದುಡಿಯುತ್ತಿದ್ದ ಹಲವರು ಕುಟುಂಬಗಳು ನಿರೋದ್ಯೋಗಿಗಳಾಗಿ ಹೋಗಿದ್ದಾರೆ.ಸದ್ಯ ಕಳಸ ಶೃಂಗೇರಿ ಕಡೆ ಕಾಪಿ ತೋಟಗಳಲ್ಲಿ ಹಾಗೂ ಉಡುಪಿ ಭಾಗಕ್ಕೆ ಕೃಷಿ ಕಾಮಗಾರಿಗೆ ವಲಸಿ ಕೂಲಿ ಕೆಲಸ ಮಾಡಿಕೊಂಡು ಸ್ವಂತಕ್ಕೆ ಸೂರು ಇಲ್ಲದೆ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ.ಪುನರ್ವಸತಿ ಕೇವಲ ಸ್ಥಳಾಂತರವಲ್ಲ — ಬದುಕು ಪುನರ್ನಿರ್ಮಿಸುವ ಪ್ರಕ್ರಿಯೆ.ಕುದುರೆಮುಖ ಪರಿಸರ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಹಾಗು ಕಸ್ತೂರಿ ರಂಗನ್ ವರದಿ ವಿಚಾರ ಕೂಡ ಇರುವುದು ಆ ಬಾಗದ ಜನರಿಗೆ ಕುದುರೆಮುಖ ಭಾಗದಲ್ಲಿ ವಸತಿಗಾಗಿ ಜಾಗ ನೀಡುವಲ್ಲಿ ಕಾನೂನು ತೊಡಕಾಗಿದೆ.ಈ ಎಲ್ಲಾ ನಿಟ್ಟಿನಲ್ಲಿ ಆ ಭಾಗದಲ್ಲಿ ಇರುವ ನಿರಾಶ್ರಿತರಿಗೆ ಸರ್ಕಾರವೇ ಪುನರ್ವಸತಿ ನೀಡಬೇಕೆಂದು ಹಾಗೂ ಮೂಲಬೂತ ಸೌಕರ್ಯಗಳಿಲ್ಲದೆ ಜನರು ಎದುರಿಸುತ್ತಿರುವ ದೀರ್ಘಕಾಲದ ನೋವಿಗೆ ಸಕಾರಾತ್ಮಕ ಪರಿಹಾರ ದೊರಕುವಂತೆ ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡರಾದ ನವೀನ್ ಸಾಲಿಯನ್ ಮನವಿ ಮಾಡಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ವರ್ಷಾಂತ್ಯದಲ್ಲಿ ಗ್ರಾಮ ಪಂಚಾಯತ್ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆ ::ಸಚಿವ ಪ್ರಿಯಾಂಕ ಖರ್ಗೆ

ಕಲಬುರಗಿ: ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ...

ಮೂರು ವರ್ಷಗಳ ಬಳಿಕ ಇಂದು ಶೃಂಗೇರಿ ನೂತನ ಶಾಸಕರಾಗಿ ಡಿ ಎನ್ ಜೀವರಾಜ್ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಕೊನೆಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಇಂದು ಡಿ ಎನ್ ಜೀವರಾಜ್ ಪ್ರಮಾಣ ವಚನ...

ಶೃಂಗೇರಿ ಮರುಮತ ಎಣಿಕೆ ಪ್ರಕರಣ ಅಂಚೆ ಮತಗಳಲ್ಲಿ ಅಕ್ರಮ ಆರೋಪ ಶಾಸಕ ಜೀವರಾಜ್ ಸೇರಿ ಮೂವರ ವಿರುದ್ಧ  ಎಫ್ಐಆರ್ ದಾಖಲು

“ಚಿಕ್ಕಮಗಳೂರು ಶೃಂಗೇರಿ ಮತ ಎಣಿಕೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ಅಂಚೆ ಮತಗಳಲ್ಲಿ ಅಕ್ರಮ ಆರೋಪದ...

52 ಮತಗಳಿಂದ ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆಲುವು, ನೂತನ ಶಾಸಕರಾಗಿ ಘೋಷಣೆ..

ಬೆಂಗಳೂರು: ಹೈಕೋರ್ಟ್‌ ಆದೇಶದಂತೆ ನಡೆದ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ, ಕಾಂಗ್ರೆಸ್ ಶಾಸಕ...