ಸೆನ್ಯಾರ್‌ ಅಬ್ಬರದಿಂದ ಇಂಡೋನೆಷ್ಯಾದಲ್ಲಿ ಭೂಕುಸಿತ

27

ಜಕಾರ್ತ : ಇಂಡೋನೇಷ್ಯಾದಲ್ಲಿ ಸೆನ್ಯಾರ್‌ ಚಂಡಮಾರುತದಿಂದಾಗಿ ಪ್ರವಾಹ ಭೂಕುಸಿತ ಉಂಟಾಗಿ 174 ಜನ ಸಾವು ಭೂಕುಸಿತ ಹಾಗೂ ಪ್ರವಾಹಕ್ಕೆ ಸಿಲುಕಿ ನೂರಾರು ಜನ ನಾಪತ್ತೆ, ಸಾವಿರಾರು ಮನೆಗಳಿಗೆ ಹಾನಿ ಸೆನ್ಯಾರ್‌ ಚಂಡಮಾರುತದ ತೀವ್ರತೆ ಹೆಚ್ಚಾಗುವ ಸಾಧ್ಯತೆ ಎಂದು ಎಚ್ಚರಿಕೆ ನೀಡಿದ ಅಧಿಕಾರಿಗಳು 

ಇಂಡೋನೇಷ್ಯಾದಲ್ಲಿ ಸೆನ್ಯಾರ್‌ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಪ್ರವಾಹ ಉಂಟಾಗಿ ಭಾರಿ ವಿನಾಶವನ್ನೇ ಸೃಷ್ಟಿಸುತ್ತಿದೆ. ಸುಮಾತ್ರಾ ದ್ವೀಪದಲ್ಲಿ ಚಂಡಮಾರುತದಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದಾಗಿ 174 ಮಂದಿ ಸಾವನ್ನಪ್ಪಿದ್ದಾರೆ .

ಇನ್ನೂ ನೂರಾರು ಜನ ನಾಪತ್ತೆಯಾಗಿದ್ದಾರೆ. ಇಂಡೋನೇಷ್ಯಾದಲ್ಲಿ ಸೆನ್ಯಾರ್‌ ಚಂಡಮಾರುತ ಇಂಡೋನೇಷ್ಯಾದ ಮಲಕ್ಕಾ ಜಲಸಂಧಿಯಲ್ಲಿ ಸೆನ್ಯಾರ್‌ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಪರಿಣಾಮವಾಗಿ ಭಾರೀ ಮಳೆಯೊಂದಿಗೆ ತೀವ್ರ ಗಾಳಿ ಮತ್ತು ಅಲೆಗಳನ್ನು ಸೃಷ್ಟಿಸಿದೆ.

ಇದರಿಂದ ಉತ್ತರ ಸುಮಾತ್ರಾ ದ್ವೀಪ ಪ್ರಾಂತ್ಯದಲ್ಲಿ ಇಡೀ ವಾರ ಧಾರಕಾರವಾಗಿ ಮಳೆ ಸುರಿದಿದೆ. ಮಳೆಯಿಂದಾಗಿ ನದಿಗಳು ಉಕ್ಕಿ ಹರಿದು, ಪರ್ವತ ಪ್ರದೇಶದ ಗ್ರಾಮಗಳಿಗೆ ನೀರು ನುಗ್ಗಿ, ಜನರನ್ನು ಕೊಚ್ಚಿಕೊಂಡು ಹೋಗಿದೆ. ಸುಮಾರು 3,200 ಕ್ಕೂ ಹೆಚ್ಚು ಮನೆಗಳು ಮತ್ತು ಕಟ್ಟಡಗಳು ಜಲಾವೃತಗೊಂಡಿವೆ.

ಭೂಕುಸಿತದಿಂದ 174 ಜನರು ಸಾವು ಇನ್ನು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಪ್ರಕಾರ, ಸುಮಾರು 3,000 ಕುಟುಂಬಗಳು ನಿರಾಶ್ರಿತರಾಗಿ ಸರ್ಕಾರಿ ಆಶ್ರಯ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಉತ್ತರ ಸುಮಾತ್ರಾದಲ್ಲಿ 116 ಮಂದಿ, ಪಶ್ಚಿಮ ಸುಮಾತ್ರಾದಲ್ಲಿ 23 ಜನರು, ಅಖೆ ಪ್ರಾಂತ್ಯದಲ್ಲಿ 25 ಮಂದಿ ಮೃತಪಟ್ಟಿದ್ದಾರೆ. ಇದರ ಜೊತೆಗೆ ಅಖೆ ಮತ್ತು ಪಶ್ಚಿಮ ಸುಮಾತ್ರಾ ಪ್ರಾಂತ್ಯಗಳ ಹಲವು ಭಾಗಗಳಲ್ಲಿ ಸಾವಿರಾರು ಮನೆಗಳು ಸಂಪೂರ್ಣವಾಗಿ ಮುಳುಗಿವೆ.

ಕೆಲವು ಮನೆಗಳು ಛಾವಣಿಯವರೆಗೆ ನೀರಿನಲ್ಲಿ ಮುಳುಗಿವೆ ಎಂದು ಸಂಸ್ಥೆ ಹೇಳಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ! ಸೆನ್ಯಾರ್‌ ಬೆನ್ನಲ್ಲೇ ಡಿಟ್ವಾ ಸೈಕ್ಲೋನ್‌, ಕರ್ನಾಟಕದ 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌! ಹೊರಜಗತ್ತಿನ ಸಂಪರ್ಕ ಕಡಿತ ಪಶ್ಚಿಮ ಸುಮಾತ್ರಾದ ವಿಪತ್ತು ತಡೆಗಟ್ಟುವಿಕೆ ಸಂಸ್ಥೆಯ ವರದಿಯ ಪ್ರಕಾರ, 17,000 ಕ್ಕೂ ಹೆಚ್ಚು ಮನೆಗಳು ಪ್ರವಾಹಕ್ಕೆ ತುತ್ತಾಗಿವೆ.

ಇದರಿಂದ ಸುಮಾರು 23,000 ನಿವಾಸಿಗಳು ತಾತ್ಕಾಲಿಕ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಗೊಂಡಿದ್ದಾರೆ. ಭತ್ತದ ಗದ್ದೆಗಳು, ಜಾನುವಾರುಗಳು ಮತ್ತು ಸಾರ್ವಜನಿಕ ಸೌಲಭ್ಯಗಳು ನಾಶವಾಗಿವೆ. ಪ್ರವಾಹ ಮತ್ತು ಭೂಕುಸಿತದಿಂದಾಗಿ ಸೇತುವೆಗಳು ಮತ್ತು ರಸ್ತೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿ, ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಳ್ಳುವಂತೆ ಮಾಡಿವೆ.

ಇಂಡೋನೇಷ್ಯಾದ ಹವಾಮಾನ, ಹವಾಮಾನಶಾಸ್ತ್ರ ಮತ್ತು ಭೂಭೌತಶಾಸ್ತ್ರ ಸಂಸ್ಥೆಯ ಅಚಾಡಿ ಸುಬರ್ಕಾ ರಹಾರ್ಜೊ ಅವರ ಪ್ರಕಾರ, ಈ ತೀವ್ರ ಹವಾಮಾನಕ್ಕೆ ಟ್ರಾಪಿಕಲ್ ಸೈಕ್ಲೋನ್ ‘ಸೆನ್ಯಾರ್’ ಕಾರಣವಾಗಿದೆ. ಇದು ಮಲಕ್ಕಾ ಜಲಸಂಧಿಯಲ್ಲಿ ರೂಪುಗೊಂಡಿತ್ತು. ಚಂಡಮಾರುತ ಸಕ್ರಿಯವಾಗಿರುವವರೆಗೆ ತೀವ್ರ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.”

Leave a comment

Leave a Reply

Your email address will not be published. Required fields are marked *

Related Articles

ಹೈದರಾಬಾದ್‌: ಗಾಯಕಿ ಮಂಗ್ಲಿ ವಿರುದ್ಧ 10 ಕೋಟಿ ರೂ ವಂಚನೆ ಆರೋಪ ಪ್ರಕರಣ ದಾಖಲು

ಹೈದರಾಬಾದ್: ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ತನ್ನದೇ ಜನಪದ ಮತ್ತು ಸಿನಿಮಾ ಹಾಡುಗಳಿಂದ ಖ್ಯಾತಿಗಳಿಸಿರುವ ಗಾಯಕಿ...

ಪಶ್ಚಿಮ ಬಂಗಾಳ: 1 ಕೋಟಿ ಉದ್ಯೋಗ, ಮಹಿಳೆಯರಿಗೆ 3,000 ರೂ. ಸೇರಿದಂತೆ 6 ಗ್ಯಾರಂಟಿಗಳ ಘೋಷಣೆಗಳೊಂದಿಗೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಕೋಲ್ಕತ್ತಾ: 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ...

ಮಣಿಪುರದಲ್ಲಿ ಮತ್ತೆ ಹಿಂಸಾಚಾರ 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ ಪೊಲೀಸ್ ಠಾಣೆಗೆ ಬೆಂಕಿ ಪ್ರತಿಭಟನೆ ಸಿಆರ್ ಪಿಎಫ್ ಫೈರಿಂಗ್

ಇಂಫಾlಲ್: ಮಣಿಪುರ ಸರ್ಕಾರ ಐದು ಕಣಿವೆ ಜಿಲ್ಲೆಗಳಲ್ಲಿ ಬ್ರಾಡ್‌ಬ್ಯಾಂಡ್, ವಿಎಸ್‌ಎಟಿ ಮತ್ತು ವಿಪಿಎನ್ ಸೇರಿದಂತೆ ಇಂಟರ್ನೆಟ್...

ಕೊಡಗು, ಬೀದರ್, ಬಳ್ಳಾರಿ, ಚಿತ್ರದುರ್ಗ ಮತ್ತು ಮೈಸೂರು ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭ್ರಷ್ಟ ಅಧಿಕಾರಿಗೆ...