ಹೈದರಾಬಾದ್‌: ಗಾಯಕಿ ಮಂಗ್ಲಿ ವಿರುದ್ಧ 10 ಕೋಟಿ ರೂ ವಂಚನೆ ಆರೋಪ ಪ್ರಕರಣ ದಾಖಲು

30
ಹೈದರಾಬಾದ್: ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ತನ್ನದೇ ಜನಪದ ಮತ್ತು ಸಿನಿಮಾ ಹಾಡುಗಳಿಂದ ಖ್ಯಾತಿಗಳಿಸಿರುವ ಗಾಯಕಿ ಮಂಗ್ಲಿ ವಿರುದ್ಧ ವಂಚನೆ ಮತ್ತು ಸಂತ್ರಸ್ತರ ಪರ ವಕೀಲರಿಗೆ ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದ್ದು ಪ್ರಕರಣ ದಾಖಲಾಗಿದೆ


ವಕೀಲ ಸುಬ್ಬರಾವ್ ಅವರು ನೀಡಿದ ದೂರಿನನ್ವಯ, ಹೈದಾರಾಬಾದ್ನ ಪಂಜಗುಟ್ಟ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಗಾಯಕಿ ಮಂಗ್ಲಿ, ಶಿವ, ನಿರ್ದೇಶ ವೇಣು ಉಡುಗುಲ ಹಾಗೂ ಇತರರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಮುಂದುವರೆಸಿದ್ದಾರೆ
. ಗಾಯಕಿ ಮಂಗ್ಲಿ, ಅವರ ಸಹೋದರ ಶಿವ ಹಾಗೂ ಇತರರು ಸೇರಿಕೊಂಡು ಹೂಡಿಕೆ ಹೆಸರಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಸುಮಾರು 100 ಮಂದಿಯಿಂದ ಭಾರಿ ಹಣವನ್ನು ಸಂಗ್ರಹಿಸಿ, ಬಹಳ ಸಮಯ ಕಳೆದರೂ ಲಾಭವನ್ನೂ ನೀಡದೇ ಮತ್ತು ಮೂಲ ಹಣವನ್ನು ಹಿಂತಿರುಗಿಸದೇ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ವೇಳೆ ನ್ಯಾಯ ಕೋರಿ ಹಣ ಕಳೆದುಕೊಂಡ ಸಂತ್ರಸ್ತರು, ವಕೀಲ ಸುಬ್ಬರಾವ್ ಅವರನ್ನು ಸಂಪರ್ಕಿಸಿದ್ದಾರೆ
. ಈ ವೇಳೆ ವಕೀಲರು ಸಂತ್ರಸ್ತರ ಹಣ ಹಿಂದಿರುಗಿಸುವಂತೆ ಪ್ರತಿಭಟಿಸಿದಾಗ ಗಾಯಕಿ ಮಂಗ್ಲಿ, ಅವರ ಸಹೋದರ ಶಿವ ಹಾಗೂ ನಿರ್ದೇಶಕ ವೇಣು ಉಡುಗುಲ ತಮಗೆ ಕರೆ ಮಾಡಿ ತೀವ್ರ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಬ್ರಿಕ್ಸ್ ಶೃಂಗಸಭೆ: ಭಾರಿ ಭದ್ರತೆ, ಐಷಾರಾಮಿ ಡೂಮ್ಸ್ ಡೇ ವಿಮಾನದಲ್ಲಿ ನವದೆಹಲಿಗೆ ಆಗಮಿಸಿದ ಪುಟಿನ್

ನವದೆಹಲಿ: ಬ್ರಿಕ್ಸ್ ಶೃಂಗಸಭೆಗೆ ರಾಷ್ಟ್ರ ರಾಜಧಾನಿ ಸಜ್ಜಾಗಿದೆ. ನಾಳೆಯಿಂದ ಭಾರತ ಮಂಟಪದಲ್ಲಿ ಎರಡು ದಿನ ಭಾರತದ...

ವಿಮಾನದಲ್ಲಿ ಬಾಂಬ್ ಬೆದರಿಕೆ ತುರ್ತುಭೂ ಸ್ಪರ್ಶ ಮಾಡಿದ ಇಂಡಿಗೋ ವಿಮಾನ

“ಅಹಮದಾಬಾದ್: ಲಕ್ನೋದಿಂದ ಸೌದಿ ಅರೇಬಿಯಾದ ದಮ್ಮಾಮ್‌ಗೆ  ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ...

370ನೇ ವಿಧಿಯನ್ನು ರದ್ದುಗೊಳಿಸಿದ ನಂತರಬದಲಾದ ಜಮ್ಮು ಮತ್ತು ಕಾಶ್ಮೀರ ವಂದೇ ಮಾತರಂ’ ಸಂಪೂರ್ಣ ರಾಷ್ಟ್ರಗೀತೆ ಗಾಯನ,

ಶ್ರೀನಗರ: 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಬದಲಾಗಿದೆ. ಮುಸ್ಲಿಂ ಬಹುಸಂಖ್ಯಾತ...

ಡ್ರಗ್ಸ್ ಸೇವನೆ ದೃಢಪಟ್ಟ ಹಿನ್ನೆಲೆ ಫುಕೆಟ್- ದೆಹಲಿ ಏರ್ ಇಂಡಿಯಾ ವಿಮಾನದ ಮುಖ್ಯ ಪೈಲಟ್ ವಜಾ

ನವದೆಹಲಿ: ಕಳೆದ ತಿಂಗಳು ಫುಕೆಟ್ ನಿಂದ ದೆಹಲಿಗೆ ಆಗಮಿಸುತ್ತಿದ್ದಾಗ ಏಕಾಏಕಿ ಎತ್ತರವನ್ನು ಕಳೆದುಕೊಂಡು ಪ್ರಯಾಣಿಕರಿಗೆ ಜೀವಭೀತಿ...