ಭಾರತದಲ್ಲಿ 200ಕ್ಕೂ ಹೆಚ್ಚು ವಿಮಾನಗಳಿಗೆ ತೊಂದರೆ ಸಾಧ್ಯತೆ, ಇಂಡಿಗೋ, ಏರ್‌ ಇಂಡಿಯಾ ವಿಮಾನಗಳ ಹಾರಾಟದಲ್ಲಿ ಏರುಪೇರು

23

ಹೊಸದಿಲ್ಲಿ: ತೀವ್ರವಾದ ಸೌರ ವಿಕಿರಣಗಳು ವಿಮಾನದ ನಿಯಂತ್ರಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ ಏರ್‌ಬಸ್ ಸುರಕ್ಷತೆಯ ದೃಷ್ಟಿಯಿಂದ ಎ320 ಸರಣಿಯ ವಿಮಾನಗಳಲ್ಲಿ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಬದಲಾವಣೆ ಅಗತ್ಯ ಭಾರತದಲ್ಲಿ 200ಕ್ಕೂ ಹೆಚ್ಚು ವಿಮಾನಗಳಿಗೆ ತೊಂದರೆ ಸಾಧ್ಯತೆ, ಇಂಡಿಗೋ, ಏರ್‌ ಇಂಡಿಯಾ ವಿಮಾನಗಳ ಹಾರಾಟದಲ್ಲಿ ಏರುಪೇರು ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಇಂಡಿಗೋ ಹಾಗೂ ಏರ್‌ ಇಂಡಿಯಾ ಹೇಳಿವೆ.

ದೇಶೀಯ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಮ್ಮ ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿವೆ. ಮುಂಬರುವ ದಿನಗಳಲ್ಲಿ ವಿಮಾನಗಳ ಹಾರಾಟದಲ್ಲಿ ವಿಳಂಬ ಅಥವಾ ಬದಲಾವಣೆಗಳು ಉಂಟಾಗಬಹುದು ಎಂದು ಈ ಸಂಸ್ಥೆಗಳು ಎಚ್ಚರಿಸಿವೆ.

ಕಾರಣ ಏನು? ಏನಿದು ಸಮಸ್ಯೆ? ವಿಶ್ವದ ಪ್ರಮುಖ ವಿಮಾನ ತಯಾರಕಾ ಸಂಸ್ಥೆಯಾದ ‘ಏರ್‌ಬಸ್’, ತನ್ನ ಎ320 ಮಾದರಿಯ ವಿಮಾನಗಳಲ್ಲಿ ತಾಂತ್ರಿಕ ದೋಷದ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದೆ. ತೀವ್ರವಾದ ಸೌರ ವಿಕಿರಣಗಳು ವಿಮಾನದ ಎಲಿವೇಟರ್ ಐಲರಾನ್ ಕಂಪ್ಯೂಟರ್ (ಇಎಲ್‌ಎಸಿ) ಮೇಲೆ ಪರಿಣಾಮ ಬೀರಬಹುದು. ಇದರಿಂದ ವಿಮಾನದ ಹಾರಾಟ ನಿಯಂತ್ರಣದ ಡೇಟಾ ದೋಷಪೂರಿತವಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಎ320 ವಿಮಾನವೊಂದು ಹಾರಾಟದ ವೇಳೆ ದಿಢೀರ್ ಎತ್ತರ ಕಳೆದುಕೊಂಡ ಘಟನೆಯ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ (ಇಎಎಸ್‌ಎ) ತುರ್ತು ನಿರ್ದೇಶನ ನೀಡಿದೆ. ವಿಮಾನಗಳು ಮುಂದಿನ ಹಾರಾಟ ನಡೆಸುವ ಮುನ್ನವೇ ದೋಷಪೂರಿತ ಭಾಗಗಳನ್ನು ಬದಲಾಯಿಸಬೇಕು ಅಥವಾ ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡಬೇಕು ಎಂದು ಸೂಚಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಯೇ ಮುಖ್ಯವಾಗಿರುವುದರಿಂದ, ವಿಮಾನಯಾನ ಸಂಸ್ಥೆಗಳು ಈ ಕಾರ್ಯದಲ್ಲಿ ನಿರತವಾಗಿವೆ. 13 ವರ್ಷ ಅನಾಥವಾಗಿದ್ದ ಬೋಯಿಂಗ್‌ ವಿಮಾನಕ್ಕೆ ಮುಕ್ತಿ: ಮಾಲೀಕರೇ ಮರೆತಿದ್ದ ಬೃಹತ್ ಹಕ್ಕಿ ಲಾರಿ ಏರಿ ಬೆಂಗಳೂರಿಗೆ! ಏನಾಗಿತ್ತು? ಭಾರತದ ವಿಮಾನಗಳ ಮೇಲಾಗುವ ಪರಿಣಾಮವೇನು? ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವಿಮಾನಯಾನ ಸಂಸ್ಥೆಗಳ ಬಳಿ ಸುಮಾರು 560 ಎ320 ಮಾದರಿಯ ವಿಮಾನಗಳಿವೆ.

ಮೂಲಗಳ ಪ್ರಕಾರ, ಇದರಲ್ಲಿ ಸುಮಾರು 200 ರಿಂದ 250 ವಿಮಾನಗಳಿಗೆ ಸಾಫ್ಟ್‌ವೇರ್ ಅಥವಾ ಹಾರ್ಡ್‌ವೇರ್ ಬದಲಾವಣೆಯ ಅಗತ್ಯವಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ 31 ವಿಮಾನಗಳು ಇದರಿಂದ ಬಾಧಿತವಾಗಲಿವೆ ಎಂದು ತಿಳಿದುಬಂದಿದೆ. ಜಾಗತಿಕವಾಗಿ ಸುಮಾರು 6,000 ವಿಮಾನಗಳಿಗೆ ಈ ಅಪ್‌ಗ್ರೇಡ್ ಅಗತ್ಯವಿದೆ.

ವಿಮಾನಯಾನ ಸಂಸ್ಥೆಗಳ ಸ್ಪಷ್ಟನೆ ಈ ಕುರಿತು ಪ್ರತಿಕ್ರಿಯಿಸಿರುವ ಇಂಡಿಗೋ ಸಂಸ್ಥೆ, “ನಾವು ಏರ್‌ಬಸ್ ಜೊತೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ತಪಾಸಣೆ ವೇಳೆ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಬಹುದು. ಆದರೆ ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳುತ್ತೇವೆ,” ಎಂದು ತಿಳಿಸಿದೆ.

ಏರ್ ಇಂಡಿಯಾ ಕೂಡ ಎಕ್ಸ್ ಮೂಲಕ ಮಾಹಿತಿ ನೀಡಿದ್ದು, “ನಮ್ಮ ಎ320 ವಿಮಾನಗಳ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಮರುಹೊಂದಾಣಿಕೆ ಮಾಡಬೇಕಿರುವುದರಿಂದ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಬಹುದು. ಸುರಕ್ಷತಾ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ,” ಎಂದು ಹೇಳಿದೆ. ಒಟ್ಟಿನಲ್ಲಿ, ತಾಂತ್ರಿಕ ದೋಷ ಸರಿಪಡಿಸುವವರೆಗೂ ವಿಮಾನಗಳ ವೇಳಾಪಟ್ಟಿಯಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು, ಪ್ರಯಾಣಿಕರು ಸಹಕರಿಸುವಂತೆ ಕೋರಲಾಗಿದೆ.”

Leave a comment

Leave a Reply

Your email address will not be published. Required fields are marked *

Related Articles

ಹೈದರಾಬಾದ್‌: ಗಾಯಕಿ ಮಂಗ್ಲಿ ವಿರುದ್ಧ 10 ಕೋಟಿ ರೂ ವಂಚನೆ ಆರೋಪ ಪ್ರಕರಣ ದಾಖಲು

ಹೈದರಾಬಾದ್: ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ತನ್ನದೇ ಜನಪದ ಮತ್ತು ಸಿನಿಮಾ ಹಾಡುಗಳಿಂದ ಖ್ಯಾತಿಗಳಿಸಿರುವ ಗಾಯಕಿ...

ಪಶ್ಚಿಮ ಬಂಗಾಳ: 1 ಕೋಟಿ ಉದ್ಯೋಗ, ಮಹಿಳೆಯರಿಗೆ 3,000 ರೂ. ಸೇರಿದಂತೆ 6 ಗ್ಯಾರಂಟಿಗಳ ಘೋಷಣೆಗಳೊಂದಿಗೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಕೋಲ್ಕತ್ತಾ: 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ...

ಮಣಿಪುರದಲ್ಲಿ ಮತ್ತೆ ಹಿಂಸಾಚಾರ 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ ಪೊಲೀಸ್ ಠಾಣೆಗೆ ಬೆಂಕಿ ಪ್ರತಿಭಟನೆ ಸಿಆರ್ ಪಿಎಫ್ ಫೈರಿಂಗ್

ಇಂಫಾlಲ್: ಮಣಿಪುರ ಸರ್ಕಾರ ಐದು ಕಣಿವೆ ಜಿಲ್ಲೆಗಳಲ್ಲಿ ಬ್ರಾಡ್‌ಬ್ಯಾಂಡ್, ವಿಎಸ್‌ಎಟಿ ಮತ್ತು ವಿಪಿಎನ್ ಸೇರಿದಂತೆ ಇಂಟರ್ನೆಟ್...

ಕೊಡಗು, ಬೀದರ್, ಬಳ್ಳಾರಿ, ಚಿತ್ರದುರ್ಗ ಮತ್ತು ಮೈಸೂರು ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭ್ರಷ್ಟ ಅಧಿಕಾರಿಗೆ...