ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಭಾರೀ ಬೆಲೆ ಏರಿಕೆ, ಐತಿಹಾಸಿಕ ದಾಖಲೆ ನಿರ್ಮಾಣ

43

ಮಾರುಕಟ್ಟೆಗೆ ಅಡಕೆ ಪೂರೈಕೆ ತೀವ್ರವಾಗಿ ಕುಸಿದಿರುವುದು, ಯಾಂತ್ರೀಕರಣದಿಂದಾಗಿ ನಿರ್ದಿಷ್ಟ ಮಾದರಿಗಳ ಲಭ್ಯತೆ ಕಡಿಮೆಯಾಗಿರುವುದು ಮತ್ತು ಬೆಳೆ ಹಾನಿ ಈ ದಾಖಲೆ ಬೆಲೆಗೆ ಪ್ರಮುಖ ಕಾರಣಗಳಾಗಿವೆ. ಇದರಿಂದಾಗಿ ಹಳೆ ದಾಸ್ತಾನು ಹೊಂದಿರುವ ರೈತರು ಹಾಗೂ ವ್ಯಾಪಾರಿಗಳಿಗೆ ಬಂಪರ್ ಲಾಭವಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ‘ಸರಕು’ ಅಡಕೆಗೆ ಕ್ವಿಂಟಾಲ್‌ಗೆ ₹99,999 ಐತಿಹಾಸಿಕ ದರ ದಶಕದ ಹಿಂದಿನ 90,000 ರೂ. ದಾಖಲೆಯನ್ನು ಮುರಿದು, ಲಕ್ಷದ ಅಂಚಿಗೆ ತಲುಪಿದ ಧಾರಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆ.ಜಿ.ಗೆ 500 ರೂ. ಗಡಿ ದಾಟಿದ ‘ಚಾಲಿ’ ಅಡಕೆ ಧಾರಣೆ ಮಾರುಕಟ್ಟೆಗೆ ಪೂರೈಕೆ ಕುಸಿತ, ಕೊಳೆರೋಗ ಹಾಗೂ ಯಾಂತ್ರೀಕರಣದಿಂದ ಬೆಲೆ ಗಗನಕ್ಕೆ ಹಳೆ ‘ಚಾಲಿ’ ಅಡಕೆ ಧಾರಣೆ ಡಿಸೆಂಬರ್ ವೇಳೆಗೆ ಕೆ.ಜಿ.ಗೆ 530 ರೂ. ದಾಟುವ ನಿರೀಕ್ಷೆ ಹಲವು ಕಾರಣಗಳಿಂದ ಈ ಬಾರಿ ಅಡಕೆ ದರ ನಾಗಾಲೋಟದಲ್ಲಿ ಏರಿಕೆ ಕಾಣುತ್ತಿದೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ‘ಸರಕು’ ಅಡಕೆಗೆ ಕ್ವಿಂಟಾಲ್‌ಗೆ ₹99,999 ಐತಿಹಾಸಿಕ ದರ ದಶಕದ ಹಿಂದಿನ 90,000 ರೂ. ದಾಖಲೆಯನ್ನು ಮುರಿದು, ಲಕ್ಷದ ಅಂಚಿಗೆ ತಲುಪಿದ ಧಾರಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆ.ಜಿ.ಗೆ 500 ರೂ. ಗಡಿ ದಾಟಿದ ‘ಚಾಲಿ’ ಅಡಕೆ ಧಾರಣೆ ಮಾರುಕಟ್ಟೆಗೆ ಪೂರೈಕೆ ಕುಸಿತ, ಕೊಳೆರೋಗ ಹಾಗೂ ಯಾಂತ್ರೀಕರಣದಿಂದ ಬೆಲೆ ಗಗನಕ್ಕೆ ಹಳೆ ‘ಚಾಲಿ’ ಅಡಕೆ ಧಾರಣೆ ಡಿಸೆಂಬರ್ ವೇಳೆಗೆ ಕೆ.ಜಿ.ಗೆ 530 ರೂ. ದಾಟುವ ನಿರೀಕ್ಷೆ ಹಲವು ಕಾರಣಗಳಿಂದ ಈ ಬಾರಿ ಅಡಕೆ ದರ ನಾಗಾಲೋಟದಲ್ಲಿ ಏರಿಕೆ ಕಾಣುತ್ತಿದೆ.

ಶಿವಮೊಗ್ಗ/ಮಂಗಳೂರು: ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆ ಧಾರಣೆ ಸಾರ್ವಕಾಲಿಕ ದಾಖಲೆ ಬರೆದಿದ್ದು, ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ರಾಜ್ಯದ ಅತಿದೊಡ್ಡ ಅಡಕೆ ಮಾರುಕಟ್ಟೆಗಳಲಲಿ ಒಂದಾದ ಶಿವಮೊಗ್ಗದಲ್ಲಿ ಬುಧವಾರ ‘ಸರಕು’ ಅಡಕೆಯು ಪ್ರತಿ ಕ್ವಿಂಟಾಲ್‌ಗೆ 99,999 ರೂ. ದರದಲ್ಲಿ ಮಾರಾಟವಾಗಿ ಹೊಸ ಇತಿಹಾಸ ನಿರ್ಮಿಸಿದೆ. ಈ ಮೂಲಕ ಒಂದು ಲಕ್ಷ ರೂಪಾಯಿಗೆ ಕೇವಲ ಒಂದು ರೂಪಾಯಿ ಮಾತ್ರ ಕಡಿಮೆ ಇದ್ದು, ದಶಕದ ಹಿಂದೆ ದಾಖಲಾಗಿದ್ದ 90,000 ರೂ. ಗರಿಷ್ಠ ದರವನ್ನು ಮೀರಿಸಿದೆ.  

‘ಮಲೆನಾಡಿನ ಹಸಿರು ಬಂಗಾರ’ ಎಂದೇ ಹೆಸರಾದ ‘ಸರಕು’ ಅಡಕೆಯು ಅತ್ಯುತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ ಭಾಗಗಳಲ್ಲಿ ಮಾತ್ರ ವಿಶೇಷವಾಗಿ ತಯಾರಿಸಲಾಗುವ ಈ ಅಡಕೆಗೆ ವಿಶಿಷ್ಟ ಸಂಸ್ಕರಣಾ ವಿಧಾನವಿದೆ. ಆದರೆ, ಇತ್ತೀಚೆಗೆ ಕಾರ್ಮಿಕರ ಕೊರತೆ ಮತ್ತು ಕೃಷಿಯಲ್ಲಿ ಯಾಂತ್ರೀಕರಣ ಹೆಚ್ಚಾದ ಕಾರಣ ಸಾಂಪ್ರದಾಯಿಕವಾಗಿ ‘ಸರಕು’ ಮತ್ತು ‘ಬೆಟ್ಟೆ’ ತಯಾರಿಸುವವರ ಸಂಖ್ಯೆ ಕಡಿಮೆಯಾಗಿದೆ.

ಇದರಿಂದ ಮಾರುಕಟ್ಟೆಗೆ ಇವುಗಳ ಪೂರೈಕೆ ತೀವ್ರವಾಗಿ ಕುಸಿದಿದೆ. ಸದ್ಯ ಮಾರುಕಟ್ಟೆಯಲ್ಲಿ ಹೊಸ ಅಡಕೆಯ ಸೀಸನ್ ಆರಂಭವಾಗದ ಕಾರಣ, ಸಹಕಾರ ಸಂಘಗಳು ಮತ್ತು ವ್ಯಾಪಾರಿಗಳ ಬಳಿ ಉಳಿದಿದ್ದ ಹಳೆಯ ದಾಸ್ತಾನಿಗೆ ದಾಖಲೆಯ ಧಾರಣೆ లಭಿಸಿದೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ಬುಧವಾರದ ಧಾರಣೆ (ಕ್ವಿಂಟಾಲ್‌ಗೆ) ಮಾದರಿ ಕನಿಷ್ಠ ದರ ಗರಿಷ್ಠ ದರ ಸರಕು 54,099 ರೂ. 99,999 ರೂ. ಬೆಟ್ಟೆ 55,572 ರೂ. 77770 ರೂ. ರಾಶಿ ಇಡಿ 51,509 ರೂ. 66,899 ರೂ. ನ್ಯೂ ವೆರೈಟಿ 48,566 ರೂ. 66,699 ರೂ. ಗೊರಬಲು 19,000 ರೂ. 46,199 ರೂ. ದಕ್ಷಿಣ ಕನ್ನಡದಲ್ಲಿ ಕೆ.ಜಿ.ಗೆ 500 ರೂ. ಗಡಿ ದಾಟಿದ ‘ಚಾಲಿ’ ಅಡಕೆ ದರ ಮಲೆನಾಡಿನಲ್ಲಿ ‘ಸರಕು’ ಅಡಕೆ ದಾಖಲೆ ಬರೆದರೆ, ಕರಾವಳಿಯಲ್ಲೂ ‘ಚಾಲಿ’ ಅಡಕೆ ಧಾರಣೆ ಗಗನಕ್ಕೇರಿದೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಭಾರೀ ಮಳೆ ಮತ್ತು ಕೊಳೆರೋಗದಿಂದ ಶೇ. 50ರಷ್ಟು ಬೆಳೆ ನಾಶವಾಗಿದೆ. ಇದರ ನೇರ ಪರಿಣಾಮವಾಗಿ, ಪುತ್ತೂರಿನ ಕ್ಯಾಂಪ್ಕೊ ಸೇರಿದಂತೆ ಹಲವು ಸಂಸ್ಥೆಗಳು ‘ಚಾಲಿ’ ಅಡಕೆಯನ್ನು ಪ್ರತಿ ಕೆ.ಜಿ.ಗೆ 500 ರೂ.ನಂತೆ ಖರೀದಿಸಿವೆ. ಕೆಲವು ಖಾಸಗಿ ವ್ಯಾಪಾರಿಗಳು 505 ರೂ.ವರೆಗೂ ದರ ನೀಡಿ ಖರೀದಿಸುತ್ತಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಿಂದ ಈ ವರ್ಷದ ಫೆಬ್ರವರಿ ನಡುವೆ ಕೊಯ್ಲು ಮಾಡಿದ ಅಡಕೆ ಇದಾಗಿದ್ದು, ದೀಪಾವಳಿ ನಂತರ ‘ಹಳೆ ಅಡಕೆ’ ಎಂದು ಪರಿಗಣಿಸಲಾಗುತ್ತದೆ. ಡಿಸೆಂಬರ್ ವೇಳೆಗೆ ಹಳೆ ‘ಚಾಲಿ’ ಅಡಕೆಯ ದರವು ಕೆ.ಜಿ.ಗೆ 530 ರೂ. ದಾಟುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಅಷ್ಟೇ ಅಲ್ಲ, ರೋಗದಿಂದಾಗಿ ಉದುರಿದ ‘ಕರಿಗೋಟು’ ದರ ಕಳೆದ ವರ್ಷ ಕೆ.ಜಿ.ಗೆ 120 ರೂ. ಇದ್ದದ್ದು, ಈ ಬಾರಿ 200 ರೂ.ಗೆ ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ಪೂರೈಕೆ ಕೊರತೆಯಿಂದಾಗಿ ಅಡಕೆ ಮಾರುಕಟ್ಟೆಯಲ್ಲಿ ಭಾರೀ ಬೆಲೆ ಏರಿಕೆ ಕಂಡುಬಂದಿದೆ.”

Leave a comment

Leave a Reply

Your email address will not be published. Required fields are marked *

Related Articles

ಫೆಬ್ರವರಿ 1 ಕೇಂದ್ರ ಬಜೆಟ್: ನಿರ್ಮಲಾಸೀತಾರಾಮನ್ ಹಣಕಾಸು ಸಚಿವೆ ಆಗಿ ಸತತವಾಗಿ ಒಂಬತ್ತನೆಯ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡನೆ...

ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ

ಹೊಸದಿಲ್ಲಿ : ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ ಯಾವುದೇ...

ಪ್ರತಿ ಡಾಲರ್ ಗೆ 91.07 ರೂ. ಇದ್ದ ರುಪಾಯಿ ಮೌಲ್ಯ ತ್ವರಿತವಾಗಿ ಚೇತರಿಕೆ

ಮುಂಬೈ : ಸತತ 10 ದಿನಗಳಿಂದ ಇಳಿಕೆಯಾಗಿದ್ದ ರುಪಾಯಿ ಮೌಲ್ಯ ಡಿ. 17ರಂದು ಕೊಂಚ ಏರಿಕೆ....

 ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಮಾತನಾಡುವಂತೆ ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು

ಬೆಂಗಳೂರು:  ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು ಮಲ್ಲೇಶ್ವರಂ ಪೊಲೀಸರಿಂದ ಸ್ವಯಂಪ್ರೇರಿತ...