ಆರ್ ಎಸ್ ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಚಿವ ಪ್ರಿಯಾಂಕ್ ಖರ್ಗೆ  ನಿರ್ಧಾರಕ್ಕೆ ಶಾಸಕ ಪ್ರದೀಪ್ ಈಶ್ವರ್ ಬೆಂಬಲ

40

ಸಿಟಿ ರವಿ ಬಗ್ಗೆ ವ್ಯಂಗ್ಯವಾಡಿದ ಶಾಸಕ ಪ್ರದೀಪ್ ಈಶ್ವರ್ ಸಚಿವ ವಿ ಸೋಮಣ್ಣ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ ಇಬ್ಬರದ್ದೂ ಎನ್‌ಪಿಎಸ್ ಇದೆ. ಅಲ್ಲೇ ಆರ್ ಎಸ್ ಎಸ್ ಕಾರ್ಯಕ್ರಮಗಳನ್ನು ನಡೆಸಲಿ ನಿಮ್ಮ ಕೇಂದ್ರ ಸರ್ಕಾರ ಸಮೀಕ್ಷೆ ಮಾಡುತ್ತೆ. ಆಗಲೂ ನೀವು ಹೀಗೆ ಹೇಳ್ತೀರಾ? ಸುಧಾಮೂರ್ತಿಗೆ ಟಾಂಗ್ ಕೊಟ್ಟ ಶಾಸಕ ಆರ್‌ಎಸ್‌ಎಸ್‌ ಚಟುವಟಿಕೆ ನಿಯಂತ್ರಣದ ಬಗ್ಗೆ ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಪ್ರದೀಪ್ ಈಶ್ವರ್ ಏನಂದ್ರು?

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗೆ ಬ್ರೇಕ್ ಹಾಕುವ ಕುರಿತಾದ ಸಚಿವ ಪ್ರಿಯಾಂಕ್ ಖರ್ಗೆ ಪತ್ರಕ್ಕೆ ನನ್ನ ಪೂರ್ಣ ಸಹಮತ‌ ಇದೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಆರ್ ಎಸ್ ಎಸ್ ಕಾರ್ಯಕ್ರಮಗಳಲ್ಲಿ ಸರ್ಕಾರ ಸಿಬ್ಬಂದಿ ಭಾಗಿಯಾಗಬಾರದು ಎಂದು ತಾಕೀತು ಮಾಡಿದರು

ಸಿಟಿ ರವಿ ಸಂವಿಧಾನದ ಆರ್ಟಿಕಲ್ 19 ಬಗ್ಗೆ ಮಾತಾಡುತ್ತಾರೆ. ನಿಮ್ಮ ಹತ್ರ ಯಾವ ಸಂವಿಧಾನದ ಪುಸ್ತಕ ಇದೆ ಅಣ್ಣ? ನೀನ್ಯಾಕೆ ಅಣ್ಣ ಓದಿಲ್ಲ? ನೀವು ಬಿಜೆಪಿ ಸಂವಿಧಾನವನ್ನೇ ಓದಿಲ್ಲ. ಛಲವಾದಿ ಗೆ ಒಂದಲ್ಲ ಐದಾರು ಬರ್ನಲ್ ಕಳಿಸ್ತೇವೆ. ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆ ಪತ್ರವನ್ನೇ ಸರಿಯಾಗಿ ಓದಿಕೊಂಡಿಲ್ಲ ಎಂದರು.

ಅಲ್ಲೇ ಆರ್ ಎಸ್ ಎಸ್ ಕಾರ್ಯಕ್ರಮಗಳನ್ನು ನಡೆಸಲಿ ಎಂದು ಪ್ರದೀಪ್ ಈಶ್ವರ್ ಟಾಂಗ್ ನೀಡಿದರು. ಸುಧಾಮೂರ್ತಿಗೆ ತಿರುಗೇಟು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಸುಧಾಮೂರ್ತಿ ಹಾಗೂ ನಾರಾಯಣ ಮೂರ್ತಿ ದೂರ ಉಳಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಇನ್ಫೋಸಿಸ್ ಸಂಸ್ಥಾಪಕರು, ರಾಜ್ಯಸಭಾ ಸದಸ್ಯರು. ಅವರ ಮೇಲೆ ಅಪಾರ‌ ಗೌರವ ಇದೆ. ಒಬಿಸಿ ಆಯೋಗ ನಡೆಸುತ್ತಿರುವ ಸಮೀಕ್ಷೆ ಇದು. ಅವರು ನಾವು ಹಿಂದುಳಿದ ವರ್ಗದವರಲ್ಲ, ಹೀಗಾಗಿ ಮಾಹಿತಿ ನೀಡಲಿಲ್ಲ ಅಂದಿದ್ದಾರೆ. ಸುಧಾಮೂರ್ತಿ ಅವರು ಮುಂದುವರೆದಿರಬಹುದು.

ನೀವು ಮುಂದುವರೆದಿದ್ರೆ ಅದರ ಮಾಹಿತಿ ಕೊಡಿ ಎಂದರು. ನಿಮ್ಮ ಕೇಂದ್ರ ಸರ್ಕಾರ ಸಮೀಕ್ಷೆ ಮಾಡುತ್ತೆ. ಆಗಲೂ ನೀವು ಹೀಗೆ ಹೇಳ್ತೀರಾ? ಮುಂದೆ‌ ಹೋದವರು ದೇವಸ್ಥಾನಗಳಲ್ಲಿ ಪೂಜೆ ಮಾಡಿದಾಗ ನಾವು ಹಿಂದುಳಿದವರು ದೇವಸ್ಥಾನಕ್ಕೆ ಹೋಗಲ್ವಾ? ಎಂದು ಪ್ರಶ್ನಿಸಿದರು. RSS ಬ್ಯಾನ್‌ಗೆ ಕೈ ಹಾಕಿದ್ಯಾಕೆ ಕಾಂಗ್ರೆಸ್‌?, ಶುರುವಾಯ್ತು ಐ ಲವ್‌ RSS ಪೋಸ್ಟರ್‌ ವಾರ್‌, ಬೆಂಗಳೂರಲ್ಲೇ RSS ಮುಖ್ಯಸ್ಥ, ಏನಿದರ ರಹಸ್ಯ? ಬೆಂಗಳೂರಿನ ರಸ್ತೆಯ ಕುರಿತಾಗಿ ಉದ್ಯಮಿ ಕಿರಣ್ ಮಜುಂದಾರ್ ಶಾ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ,ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡ್ತಲೇ ಇರ್ತಾರೆ.

ದಯವಿಟ್ಟು ಗುಂಡಿ ಮುಚ್ಚೋಕೆ ಟೈಂ ಕೊಡಿ. ಖಂಡಿತಾ ಗುಂಡಿಗಳನ್ನು ಮುಚ್ಚುತ್ತೇವೆ ಎಂದರು. ಗುಂಡಿ ಮುಚ್ಚಲು ಕೇಂದ್ರದಿಂದ ಅನುದಾನದ ಹಣ ಕೊಟ್ಟಿಲ್ಲ. ದಯಮಾಡಿ ಅವರಿಗೆ ನೆನಪು ಮಾಡಿ ಎಂದು ಇದೇ ಸಂದರ್ಭದಲ್ಲಿ ಶಾಸಕ ಪ್ರದೀಪ್ ಈಶ್ವರ್ ತಿರುಗೇಟು ನೀಡಿದರು.”

Leave a comment

Leave a Reply

Your email address will not be published. Required fields are marked *

Related Articles

ಎಸ್ ಎಸ್ ಎಲ್ ಸಿ ಪರೀಕ್ಷೆ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ :: ಹೈಕೋರ್ಟ್ ಆದೇಶ

ಬೆಂಗಳೂರು: 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮೂರನೇ ಭಾಷಾ ಪರೀಕ್ಷೆಯ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವಂತೆ ರಾಜ್ಯ ಸರ್ಕಾರಕ್ಕೆ...

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು: ಕರ್ನಾಟಕ ಉಪ ಚುನಾವಣೆ ರಣಾಂಗಣ ದಿನಕಳೆದಂತೆ ತೀವ್ರ ಕುತೂಹಲ ಕೆರಳಿಸುತ್ತಿದ್ದು ಪ್ರಮುಖವಾಗಿ ದಾವಣಗೆರೆ ದಕ್ಷಿಣ...

ದಾವಣಗೆರೆ ಚುನಾವಣೆ ಬಂಡಾಯ ಕಾರ್ಯನಿರ್ವಹಿಸಿದ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವು ಮುಸ್ಲಿಂ ನಾಯಕರ ವಿರುದ್ಧ ಶಿಸ್ತು ಕ್ರಮಕ್ಕೆ ಸಿದ್ಧತೆ

“ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಮುಸ್ಲಿಮರಿಗೆ ಕೊಡದಕ್ಕೆ ಶುರುವಾದ ಬಂಡಾಯ ಗೊಂದಲ...

ಪೊಲೀಸ್ ಸೇವೆಯಲ್ಲಿ ನೈತಿಕತೆ ಮುಖ್ಯ ಅಧಿಕಾರಿಗಳು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅವಕಾಶ ನೀಡುವುದಿಲ್ಲ :: ಗೃಹ ಸಚಿವ ಡಾ.ಜಿ.ಪರಮೇಶ್ವರ್

“ಬೆಂಗಳೂರು: ಪೊಲೀಸ್ ಸೇವೆಯಲ್ಲಿ ನೈತಿಕತೆ ಮುಖ್ಯ. ಯಾವುದೇ ಅಧಿಕಾರಿಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಲು ಅವಕಾಶ...