ಪ್ರತಿ ಡಾಲರ್ ಗೆ 91.07 ರೂ. ಇದ್ದ ರುಪಾಯಿ ಮೌಲ್ಯ ತ್ವರಿತವಾಗಿ ಚೇತರಿಕೆ

24

ಮುಂಬೈ : ಸತತ 10 ದಿನಗಳಿಂದ ಇಳಿಕೆಯಾಗಿದ್ದ ರುಪಾಯಿ ಮೌಲ್ಯ ಡಿ. 17ರಂದು ಕೊಂಚ ಏರಿಕೆ. ಹೀಗೇ ಸತತ ರುಪಾಯಿ ಮೌಲ್ಯ ಏರಿಕೆಯಾದಲ್ಲಿ ಮಧ್ಯಮ ವರ್ಗದ ಖರ್ಚಿನ ಹೊರೆಯಲ್ಲಿ ಕೊಂಚ ಕಡಿಮೆ.

ಎರಡು ವಾರಗಳ ಹಿಂದೆ ಡಾಲರ್ ವಿರುದ್ಧ ತೀವ್ರವಾಗಿ ಕುಸಿತ ಕಾಣುವ ಮೂಲಕ ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಸಿಡಿದೇಳಲು ಕಾರಣವಾಗಿದ್ದ ರುಪಾಯಿಯ ಮೌಲ್ಯ ಡಿ. 17ರಿಂದ ಚೇತರಿಸಿಕೊಂಡಿದೆ. ದಿನದ ಆರಂಭದಲ್ಲಿ ಪ್ರತಿ ಡಾಲರ್ ಗೆ 91.07 ರೂ. ಇದ್ದ ರುಪಾಯಿ ಮೌಲ್ಯ ತ್ವರಿತವಾಗಿ ಚೇತರಿಸಿಕೊಂಡಿತು.

ದಿನದ ವಹಿವಾಟು ಆರಂಭವಾದ ಕೆಲವೇ ಗಂಟೆಗಳಲ್ಲಿ 90.25ರ ಮಟ್ಟಕ್ಕೆ ಏರಿತು. ಇದು ಕಳೆದ 7 ತಿಂಗಳುಗಳಲ್ಲಿ ರುಪಾಯಿಯು ಒಂದೇ ದಿನದಲ್ಲಿ ಕಂಡ ಅತಿ ದೊಡ್ಡ ಏರಿಕೆ ಎಂದು ಆರ್ ಬಿಐ ಬಣ್ಣಿಸಿದೆ. ರುಪಾಯಿ ಮೌಲ್ಯ ಏರಿಕೆಯಾದರೆ ಮಧ್ಯಮ ವರ್ಗಕ್ಕೆ ಹೊರೆಯಾಗಿರುವ ತೈಲ ಹಾಗೂ ಅಡುಗೆ ಇಂಧನ ಬೆಲೆಗಳು, ಇಎಂಐಗಳು, ಮಕ್ಕಳ ವಿದೇಶಿ ಶಿಕ್ಷಣದ ಖರ್ಚುಗಳು ಇತ್ಯಾದಿಗಳು ಕೊಂಚವಾದರೂ ಇಳಿಕೆಯಾಗಲಿದೆ.

ಮಂಗಳವಾರ, ರೂಪಾಯಿ ಮೊದಲ ಬಾರಿಗೆ 91 ರ ಗಡಿ ದಾಟಿ, 91.14 ರ ದಾಖಲೆಯ ಕನಿಷ್ಠ ಮಟ್ಟ ತಲುಪಿತ್ತು. ಆದರೆ ದಿನಾಂತ್ಯಕ್ಕೆ 15 ಪೈಸೆ ಕುಸಿದು 90.93 ಕ್ಕೆ ಸ್ಥಿರವಾಯಿತು. ಅಮೆರಿಕನ್ ಡಾಲರ್ ದುರ್ಬಲಗೊಂಡಿದ್ದರೂ ಮತ್ತು ಕಚ್ಚಾ ತೈಲ ಬೆಲೆ ಕುಸಿದಿದ್ದರೂ ರೂಪಾಯಿ ಕುಸಿತ ಕಂಡಿದ್ದು ಗಮನಾರ್ಹ. ಇತ್ತೀಚಿನ ದಿನಗಳಲ್ಲಿ ರೂಪಾಯಿ ನಿರಂತರ ಇಳಿಕೆ ದಾಖಲಿಸಿದೆ.

ಸೋಮವಾರ 90ರ ಗಡಿ ದಾಟಿದ್ದ ರೂಪಾಯಿ, ಸತತ ಮೂರನೇ ದಿನವೂ ದಾಖಲೆಯ ಕನಿಷ್ಠ ಮಟ್ಟ ತಲುಪಿತ್ತು. ಭಾರತ-ಅಮೆರಿಕ ವ್ಯಾಪಾರ ಮಾತುಕತೆಯಲ್ಲಿನ ನಿರಂತರ ಹಿನ್ನಡೆ ಮತ್ತು ವಿದೇಶಿ ಹೂಡಿಕೆದಾರರು ಹಣ ಹಿಂಪಡೆಯುತ್ತಿರುವುದು ಇದಕ್ಕೆ ಮುಖ್ಯ ಕಾರಣ.

ಅತಿ ದುರ್ಬಲ ವ್ಯವಹಾರ ಈ ವರ್ಷ, ಜಾಗತಿಕ ಕರೆನ್ಸಿಗಳಲ್ಲಿ ರೂಪಾಯಿ ಅತ್ಯಂತ ದುರ್ಬಲ ವಹಿವಾಟು ದಾಖಲಿಸಿದೆ. ಅಮೆರಿಕದ ಡಾಲರ್ ಎದುರು ಸುಮಾರು ಶೇ. 6ರಷ್ಟು ಕುಸಿದಿದೆ. ಹೆಚ್ಚುತ್ತಿರುವ ವ್ಯಾಪಾರ ಕೊರತೆ, ಅಮೆರಿಕ ವಿಧಿಸಿರುವ ಶೇ. 50ರ ಸುಂಕ ಮತ್ತು ನಿರಂತರ ಹೂಡಿಕೆ ಹೊರಹರಿವು ರೂಪಾಯಿಯನ್ನು 91ರ ಸಮೀಪದ ದಾಖಲೆಯ ಕನಿಷ್ಠ ಮಟ್ಟಕ್ಕೆ ತಳ್ಳಿದೆ. ಬುಧವಾರದಿಂದ ರುಪಾಯಿಯ ಮೌಲ್ಯದಲ್ಲಿ ಚೇತರಿಸಿಕೆ ಕಾಣಿಸಿಕೊಂಡಿರುವುದು ಭಾರತದ ವ್ಯಾಪಾರಿ ವಲಯಕ್ಕ ಕೊಂಚ ನಿರಾಳತೆ ತಂದಿದೆ. ಇದು ಹೀಗೇ ಮುಂದುವರಿಯಲಿ ಎಂಬುದು ಭಾರತದ ಆಶಯ.

ಮಧ್ಯಮ ವರ್ಗದ ಜೇಬಿಗೆ ಕತ್ತರಿ, ವಿದೇಶಿ ವ್ಯಾಸಂಗ, EMI ದುಬಾರಿ! ಡಾಲರ್ ವಿರುದ್ಧ ರುಪಾಯಿ ಕುಸಿದಷ್ಟೂ ಭಾರತದ ಮಧ್ಯಮ ವರ್ಗಕ್ಕೆ ತೊಂದರೆ ಹೆಚ್ಚು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಷೇರು ಮಾರುಕಟ್ಟೆಯಿಂದ ಹಿಡಿದು ಸಾಮಾನ್ಯರ ಅಡುಗೆ ಮನೆಯವರೆಗೆ ಆತಂಕ ಮೂಡಿಸಿದೆ. ಪೆಟ್ರೋಲ್ ದರ, ಬ್ಯಾಂಕ್ ಇಎಂಐ ಮತ್ತು ವಿದೇಶಿ ಶಿಕ್ಷಣದ ವೆಚ್ಚಗಳ ಮೇಲೆ ಇದು ನೇರ ಪರಿಣಾಮ ಬೀರಲಿದೆ.

ಈ ಕುಸಿತಕ್ಕೆ ಕಾರಣಗಳೇನು ಮತ್ತು ಆರ್‌ಬಿಐ ಇದನ್ನು ತಡೆಯಲು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಈ ವಿಡಿಯೋ ಮಾಹಿತಿ ನೀಡಲಿದೆ. ಅಲ್ಲದೆ, 1947 ರಿಂದ ಇಂದಿನವರೆಗೆ ರೂಪಾಯಿ ಮೌಲ್ಯದ ಏರಿಳಿತದ ಕುತೂಹಲಕಾರಿ ಇತಿಹಾಸವನ್ನು ಇಲ್ಲಿ ವಿವರಿಸಲಾಗಿದೆ.”

Leave a comment

Leave a Reply

Your email address will not be published. Required fields are marked *

Related Articles

ಫೆಬ್ರವರಿ 1 ಕೇಂದ್ರ ಬಜೆಟ್: ನಿರ್ಮಲಾಸೀತಾರಾಮನ್ ಹಣಕಾಸು ಸಚಿವೆ ಆಗಿ ಸತತವಾಗಿ ಒಂಬತ್ತನೆಯ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡನೆ...

ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ

ಹೊಸದಿಲ್ಲಿ : ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ ಯಾವುದೇ...

 ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಮಾತನಾಡುವಂತೆ ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು

ಬೆಂಗಳೂರು:  ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು ಮಲ್ಲೇಶ್ವರಂ ಪೊಲೀಸರಿಂದ ಸ್ವಯಂಪ್ರೇರಿತ...

ಸೆಪ್ಟೆಂಬರ್ 2024ರ ನಂತರ ಇದೇ ಮೊದಲ ಬಾರಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ನಿಫ್ಟಿ

ಹೊಸದಲ್ಲಿ: ಸೆಪ್ಟೆಂಬರ್ 2024ರ ನಂತರ ಇದೇ ಮೊದಲ ಬಾರಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ನಿಫ್ಟಿ...